ಬೆಳಗಾವಿ: ಬೆಳಗಾವಿಯಲ್ಲಿ ಎರಡು ಅನಾಥ ಶವವನ್ನ ಅಂತ್ಯಕ್ರಿಯೆ ಮಾಡಿ ಸಾಮಾಜಿಕ ಕಾರ್ಯಕರ್ತ ಮಾನವೀಯತೆ ಮೆರೆದಿದ್ದಾರೆ. ಸಾಮಾಜಿಕ ಕಾರ್ಯಕರ್ತ ಗಂಗಾಧರ ಪಾಟೀಲ್ ಎರಡು ಅನಾಥ ಶವಗಳನ್ನ ಹಿಂದು ಸಂಪ್ರದಾಯ ಪ್ರಕಾರ ಅಂತ್ಯಕ್ರಿಯೆ ಮಾಡಲಾಯಿತು.
ಪಶ್ಚಿಮ ಬಂಗಾಳ ಮೂಲದ ಬಡ ವ್ಯಕ್ತಿ ಕಾಕತಿಯಲ್ಲಿ ಪತ್ನಿ ಜೊತೆಗೆ ಬಡಿಗತನ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತದ್ದರು. ಇದೇ ಸಮಯದಲ್ಲಿ ಅನಾರೋಗ್ಯ ಹಿನ್ನೆಲೆಯಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇನ್ನು ಪತಿ ಶವವನ್ನ ಬಿಹಾರ ತೆಗೆದುಕೊಂಡು ಹೋಗಲು ಪತ್ನಿಗೆ ಸಾವಿರಾರು ರೂಪಾಯಿ ಹಣ ಖರ್ಚಾಗುತ್ತಿದ್ದು, ತೆಗೆದುಕೊಂಡು ಹೊಗಲು ಹಣ ಇಲ್ಲದ ಕಾರಣ ಸಾಮಾಜಿಕ ಕಾರ್ಯಕರ್ತರ ಸಹಾಯದಿಂದ ಸದಾಶಿವ ಸ್ಮಶಾನದಲ್ಲಿ ಹಿಂದು ವಿಧಿ ವಿಧಾನ ಮೂಲಕ ಅಂತ್ಯಕ್ರಿಯೆ ಮಾಡಲಾಯಿತು.
ಇನ್ನು ಇದೇ ಸಂದರ್ಭದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಕೂಡ ಅನಾಥ ರೋಗಿಯೊಬ್ಬರಯ ಸಾವನ್ನಪ್ಪಿದ್ದಾರೆ. ಆ ಅನಾಥ ಶವನ್ನು ಕೂಡ ಸಾಮಾಜಿಕ ಕಾರ್ಯಕರ್ತರಾದ ಗಂಗಾಧರ ಪಾಟೀಲ್ ನಗರ ಸೇವಕ ಶಂಕರ್ ಪಾಟೀಲ್, ಚಿನ್ಮಯ್ , ವಿಶಾಲ್ ರಾಜು ಹಣಮಂತ ಸೇರಿದಂತೆ ಹಲವರು ಅನಾಥ ಶವ ಅಂತ್ಯಕ್ರಿಯೆ ಮಾಡಿದ್ದಾರೆ.
ಇನ್ನು ಸಾಮಾಜಿಕ ಕಾರ್ಯಕರ್ತರ ಈ ಕಾರ್ಯಕ್ಕೆ ಕುಂದಾನಗರಿ ಜನರು ಶ್ಲಾಘನೀಯ ವ್ಯಕ್ತಪಡಿಸಿದ್ದಾರೆ.