ಬೆಳಗಾವಿ : ಮರಾಠ ಸಮುದಾಯವನ್ನು 3(ಎ) ಪ್ರವರ್ಗದಿಂದ 2(ಎ) ಪ್ರವರ್ಗಕ್ಕೆ ಸೇರಿಸಲು ಹಿಂದುಳಿದ ವರ್ಗಗಳ ಶಾಶ್ವತ ಆಯೋಗಕ್ಕೆ ಶಿಫಾರಸ್ಸು ಮಾಡಲಾಗುವುದು. ಆಯೋಗದ ವರದಿ ಬಂದ ನಂತರ ಸೂಕ್ತ ಕ್ರಮಕೈಗೊಳ್ಳಲಾಗುವುದೆಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಶೂನ್ಯ ವೇಳೆಯಲ್ಲಿ ಶಾಸಕರಾದ ಆರ್.ವಿ. ದೇಶಪಾಂಡೆ ಅವರು 2012ರಲ್ಲಿ ಶಂಕರಪ್ಪ ಆಯೋಗ ಮರಾಠಿ ಜನಾಂಗ 2ಎಗೆ ಸೇರುವ ಅರ್ಹತೆ ಹೊಂದಿದೆ ಎಂದು ವರದಿ ನೀಡಿದ್ದು ಅದರಂತೆ ಈ ಜನಾಂಗವನ್ನು ಪ್ರವರ್ಗ2ಎ ಗೆ ಸೇರಿಸಲು ಆಗ್ರಹಿಸಿದಾಗ ಮುಖ್ಯಮಂತ್ರಿಗಳು ಯಾವುದೇ ಒಂದು ಸಮುದಾಯವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ವರದಿ ಅವಶ್ಯಕವಾಗಿದ್ದು ಶಂಕರಪ್ಪ ವರದಿಯನ್ನು ಮರುಶಿಫಾರಸ್ಸು ಮಾಡಲಾಗುವುದು. ನಂತರ ಹಿಂದುಳಿದ ವರ್ಗಗಳ ಆಯೋಗದ ವರದಿ ಬಂದ ನಂತರ ಹಿಂದುಳಿದ ವರ್ಗಗಳ 2ಎಗೆ ತೀರ್ಮಾನ ಮಾಡಲಾಗುವುದು ಎಂದರು.