ವಿಜಯಪುರ: ಇಲ್ಲಿನ ಎಪಿಎಂಸಿ ಆಂತರಿಕ ಲೆಕ್ಕಪರಿಶೋಧಕ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಶಂಕರಯ್ಯ ಹಿರೇಮಠ ಬಂಧಿತ ಆರೋಪಿ.
ಎಪಿಎಂಸಿಯಲ್ಲಿ ವ್ಯಾಪಾರ ಮಾಡಲು ಟ್ರೇಡಿಂಗ್ ಲೈಸೆನ್ಸ್ ನೀಡಲು 5 ಸಾವಿರ ರೂ.ಲಂಚ ಪಡೆಯುತ್ತಿದ್ದಾಗಲೇ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಲೋಕಾಯುಕ್ತ ಎಸ್ಪಿ ಅನೀತಾ ಹದ್ದನ್ನವರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಈ ವೇಳೆ ಹೆಚ್ಚುವರಿಯಾಗಿ ಸಿಕ್ಕ 39 ಸಾವಿರ ರೂ ಹಣವನ್ನು ಲೋಕಾಯುಕ್ತ ಪೊಲೀಸರು ಜಪ್ತಿ ಮಾಡಿದ್ದಾರೆ.