ಬೆಂಗಳೂರು: ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಉದ್ಯಾನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದ ಪ್ರಕರಣಕ್ಕೆ ಇನ್ನೂ ನಿಖರ ಕಾರಣ ಪತ್ತೆಯಾಗಿಲ್ಲ. ಆದರೆ ಈ ಬೆಂಕಿ ಅವಘಡ ಹಾಗೂ ಮಧುರೈನಲ್ಲಿ ಸಂಭವಿಸಿದ ಅನಾಹುತದ ಹಿನ್ನಲೆಯಲ್ಲಿ ತನಿಖೆ ಚುರುಕುಗೊಳಿಸಲಾಗಿದೆ.
ಘಟನೆ ನಡೆದು 10 ದಿನ ಕಳೆದಿದೆ. ಆದರೆ ಘಟನೆಗೆ ಇನ್ನೂ ನಿಖರ ಕಾರಣ ಸಿಗದಿರುವುದು ಹಲವು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ. ಅಲ್ಲದೇ ಪ್ರಕರಣದ ಹಿಂದೆ ಕಿಡಿಗೇಡಿಗಳ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.
ಈ ಪ್ರಕರಣವನ್ನು ಆರ್‌ಪಿಎಫ್ ಡಿಜಿ ಮನೋಜ್ ಯಾದವ್ ತನಿಖೆ ನಡೆಸುತ್ತಿದ್ದಾರೆ. ಬೆಂಕಿ ಅವಘಡವನ್ನು ಗಂಭೀರವಾಗಿ ಪರಿಗಣಿಸಿರುವ ಅವರು ಎರಡು ದಿನಗಳ ಹಿಂದೆ ರೈಲ್ವೇ ಕಚೇರಿಗೆ ಧಿಡೀರ್ ಭೇಟಿಕೊಟ್ಟಿದ್ದರು. ಈ ವೇಳೆ ನಗರ ಪೊಲೀಸ್ (Police) ಹಾಗೂ ಆರ್‌ಪಿಎಫ್ ಸಿಬ್ಬಂದಿಯಿಂದ ಮಾಹಿತಿ ಪಡೆದಿದ್ದರು.