spot_img
spot_img
spot_img
21.1 C
Belagavi
Friday, September 30, 2022
spot_img

ಅಭಯ ಪಾಟೀಲ್ ಫೇಸ್ ಬುಕ್ ಪೇಜ್ ಹ್ಯಾಕ್..!!

spot_img

ಬೆಳಗಾವಿ : ಸಾಮಾಜಿಕ ಕಾರ್ಯಗಳ ಮೂಲಕ ಸಾಮಾಜಿಕ ಜಾಲತಾಣಗಳಲ್ಲೂ ಪ್ರಸಿದ್ಧಿ ಪಡೆದಿರುವ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ ಪಾಟೀಲ ಅವರ ಫೇಸ್ ಬುಕ್ ಪುಟವನ್ನು ಕೆಲವು ಕಿಡಗೇಡಿಗಳು ಹ್ಯಾಕ್ ಮಾಡಿದ್ದಾರೆ.

ಅಭಯ ಪಾಟೀಲ ಎಂಬ ಹೆಸರಿನಲ್ಲಿದ್ದ ವೇರಿಫೈಡ್ ಪೇಸ್ ಬುಕ್ ಪೇಜ್ ಹ್ಯಾಕ್ ಆಗಿದ್ದು, ಈ ಕುರಿತು ಶಾಸಕ ಅಭಯ ಪಾಟೀಲ ಬೆಳಗಾವಿಯ ಸೈಬರ್ ಕ್ರೈಂ, ಸಿಇಎನ್ ಪೋಲೀಸ್ ಠಾಣೆಗೆ ದೂರು ನೀಡಿದ್ದು ಇನೆಸ್ಪೆಕ್ಟರ್ ಗಡ್ಡೇಕರ ಅವರು ದೂರು ದಾಖಲಿಸಿಕೊಂಡು ವಿಚಾರಣೆ ನಡೆಸಿ ಹ್ಯಾಕರ್ ಗಳ ಪತ್ತೆಗೆ ತನಿಖೆ ಶುರು ಮಾಡಿದ್ದಾರೆ.

ಶಾಸಕ ಅಭಯ ಪಾಟೀಲ ಅವರ ಹೆಸರಿನಲ್ಲಿರುವ ಫೇಸ್ ಬುಕ್ ಪುಟಕ್ಕೆ ಸುಮಾರು 40 ಸಾವಿರಕ್ಕೂ ಹೆಚ್ವು ಫಾಲೋವರ್ಸ್ ಗಳಿದ್ದಾರೆ.ಈ ಪುಟಕ್ಕೆ ಶಾಸಕ ಅಭಯ ಪಾಟೀಲ ಮತ್ತು ಚೈತನ್ಯ ದಳವಿ ಇಬ್ಬರು ಅಡ್ಮಿನ್ ಗಳಿದ್ದಾರೆ. ನಿನ್ನೆ ರಾತ್ರಿ ಫೇಸ್ ಬುಕ್ ಪುಟ ಹ್ಯಾಕ್ ಆಗಿದ್ದು ಗೊತ್ತಾದ ಬಳಿಕ ಅವರು ಸೈಬರ್ ಕ್ರೈಂ ಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿರುವ ಸೈಬರ್ ಕ್ರೈಂ ಇನೆಸ್ಪೆಕ್ಡರ್ ಗಡ್ಡೇಕರ್ ಅವರು ಪೇಸ್ ಬುಕ್ ಪುಟ ಹ್ಯಾಕ್ ಆಗಿರುವ ವಿಚಾರವನ್ನು ಫೇಸ್ ಬುಕ್ ಅಥಾರಿಟಿಯ ಗಮನಕ್ಕೆ ತಂದಿದ್ದಾರೆ.

spot_img

Related News

ಇಂದು ರಾಜ್ಯಕ್ಕೆ ಭಾರತ್ ಜೋಡೋ ಯಾತ್ರೆ

ಚಾಮರಾಜನಗರ : ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶಾದ್ಯಂತ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಇಂದು ರಾಜ್ಯಕ್ಕೆ ಆಗಮಿಸಲಿದ್ದು, ಬರಮಾಡಿಕೊಳ್ಳಲು ಕಾಂಗ್ರೆಸ್ ತಯಾರಿ ಜೋರಾಗಿದೆ. ನಾಯಕರನ್ನು ಸ್ವಾಗತಿಸಲು ರಾಜ್ಯ ಕಾಂಗ್ರೆಸ್‌ ನಾಯಕರು ಸರ್ವ ರೀತಿಯಲ್ಲೂ...

ಪ್ರತಿ ಇನ್ಸಸ್ಟಾಗ್ರಾಂ ಪೋಸ್ಟ್ ಗೆ 8 ಕೋಟಿ ರೂ. ಪಡೆಯುವ ವಿರಾಟ್ ಕೊಹ್ಲಿ

ನವದೆಹಲಿ: ವಿರಾಟ್​ ಕೊಹ್ಲಿ ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಂನಲ್ಲೂ ಹೊಸ ದಾಖಲೆ ಬರೆದಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಅವರು ಪ್ರತಿ ಪ್ರಾಯೋಜಿತ ಪೋಸ್ಟ್​ಗೆ ಬರೋಬ್ಬರಿ 8 ಕೋಟಿ ರೂಪಾಯಿ ಚಾರ್ಜ್​ ಮಾಡುತ್ತಿದ್ದಾರೆ. ಈ ಮೂಲಕ ಇನ್​ಸ್ಟಾಗ್ರಾಂನಲ್ಲಿ ಗರಿಷ್ಠ ಹಣ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -