ಬೆಳಗಾವಿ : ಧಾರವಾಡ ಜಿಲ್ಲೆಯ ನೀರಲಕಟ್ಟಿ ಗ್ರಾಮದ ನಿವಾಸಿಯಾದ ರುಕ್ಮಾವ್ವಾ ದುರ್ಗಪ್ಪ ಭಜಂತ್ರಿ ಇವರ ಮಗಳಾದ ಸ್ವಾತಿ ಅಶೋಕ ಭಜಂತ್ರಿ ಧಾರವಾಡ ಜಿಲ್ಲೆ ಹಳಿಯಾಳದಲ್ಲಿ ನೆಲಿಸಿದ್ದು, ಕೌಜಲಗಿ ಗ್ರಾಮದ ತನ್ನ ಅಜ್ಜಿಯ ಮನೆಯಿಂದ ಮಗ ಅರುಣ್ 1 ವರ್ಷ 6 ತಿಂಗಳ ಮಗುವಿನೊಂದಿಗೆ ನವಂಬರ್ 25 ರಂದು ರಾತ್ರಿ 2.30 ಗಂಟೆಗೆ ಮನೆಯಲ್ಲಿ ಇಲ್ಲ ಎಂದು ಕಂಡು ಬಂದಿರುತ್ತದೆ.
ಫಿರ್ಯಾದೆದಾರರು ಸಂಬಂಧಿಗಳನ್ನು ವಿಚಾರಿಸಿದರು ಯಾವುದೇ ಸುಳಿವು ಇಲ್ಲದ ಕಾರಣ ಎಲ್ಲಿಗೋ ಹೋಗಿ ಕಾಣೆಯಾಗಿರುತ್ತಾಳೆ ಈ ಕುರಿತು ಕುಲಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಸಿ ತನಿಖೆ ಕೈಗೊಳ್ಳಲಾಗಿರುತ್ತದೆ.
ಕಾಣೆಯಾದವರ ವಿವರ:
ಸ್ವಾತಿ ಭಜಂತ್ರಿ: ವಯಸ್ಸು 26, ಎತ್ತರ 4.5, ಸದೃಡ ಮೈ ಕಟ್ಟು, ಸಾದಾಗೆಂಪು ಮೈ ಬಣ್ಣ, ಕಪ್ಪು ಕೂದಲು, ಬಿಳಿ ಬಣ್ಣದ ಚೂಡಿದಾರ ಧರಿಸಿದ್ದು, ಕನ್ನಡ ಹಾಗೂ ಕೊರಮಾ ಭಾಷೆ ಮಾತನಾಡುತ್ತಾಳೆ.
ಅರುಣ್: ವಯಸ್ಸು 1 ವರ್ಷ 6 ತಿಂಗಳು, ಸಾದಾಗೆಂಪು ಮೈ ಬಣ್ಣ, ಕಪ್ಪು ಕೂದಲು, ಮಗು ಕೆಂಪು ಅಂಗಿ ಕಪ್ಪು ಶಾರ್ಟ ಪ್ಯಾಂಟ್ ಧರಿಸಿರುತ್ತರೆ.
ಸದರಿಯವರ ಬಗ್ಗೆ ಸುಳಿವು ಸಿಕ್ಕಲ್ಲಿ, ಕುಲಗೋಡ ಠಾಣೆ ದೂರವಾಣ ಸಂಖ್ಯೆ 08334-222233 ಅಥವಾ ಇ-ಮೇಲ್ ಐಡಿ [email protected] ಗೆ ಸಂಪರ್ಕಿಸಬಹುದು ಎಂದು ಕುಲಗೋಡ ಪೆÇಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.