spot_img
spot_img
spot_img
18.7 C
Belagavi
Monday, September 26, 2022
spot_img

250 ರೂ. ಶುಲ್ಕಕ್ಕಾಗಿ ವಿದ್ಯಾರ್ಥಿಯನ್ನು ಹೊಡೆದು ಕೊಂದ ಶಿಕ್ಷಕ

spot_img
spot_img

For Breaking News Download App

ಲಖನೌ : ಶ್ರಾವಸ್ತಿಯಲ್ಲಿ 250 ರೂ. ಶಾಲಾ ಶುಲ್ಕಕ್ಕಾಗಿ 3ನೇ ತರಗತಿ ವಿದ್ಯಾರ್ಥಿಯನ್ನು ಶಿಕ್ಷಕರು ಹೊಡೆದು ಕೊಂದಿದ್ದಾರೆ. ಸಿರ್ಸಿಯಾದ ಪಂಡಿತ್ ಬ್ರಹ್ಮದತ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಯಾಗಿದ್ದ ಬಾಲಕನನ್ನು ಶಿಕ್ಷಕರು ಹೊಡೆದು ಕೊಂದಿದ್ದಾರೆ.

ಶಾಲಾ ಶುಲ್ಕವಾಗಿ 250 ರೂಪಾಯಿ ಪಾವತಿಸದ ಕಾರಣಕ್ಕೆ ಆರೋಪಿ ಅನುಪಮ್ ಪಾಠಕ್, ಬಾಲಕನಿಗೆ ಥಳಿಸಿದ್ದಾನೆ. ಈ ಘಟನೆ ಆಗಸ್ಟ್ 8 ರಂದು ನಡೆದಿದೆ. ಬ್ರಿಜೇಶ್ ಕುಮಾರ್ ಎಂದು ಗುರುತಿಸಲಾದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ತಪ್ಪಿತಸ್ಥ ಶಿಕ್ಷಕನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಬಾಲಕನ ಹಿರಿಯ ಸಹೋದರ ಬ್ರಿಜೇಶ್ ಕಳೆದ ಎರಡು ತಿಂಗಳ ಹಿಂದೆ ಶಾಲೆಗೆ ದಾಖಲಾಗಿದ್ದು, ಮೊದಲ ತಿಂಗಳ ಶುಲ್ಕವನ್ನು ಪಾವತಿಸಿದ್ದರು. ಕುಟುಂಬಕ್ಕೆ ಆಧಾರವಾಗಿರುವ ಅವರ ಸಹೋದರ ಕೆಲಸದಿಂದ ಹೊರಗುಳಿದಿದ್ದರಿಂದ ಎರಡನೇ ತಿಂಗಳು ಶುಲ್ಕ ಪಾವತಿಸಲು ವಿಳಂಬವಾಗಿತ್ತು ಎಂದು ಹೇಳಲಾಗಿದೆ.

For Breaking News Download App

Related News

ನನಗೆ ಭಾಷೆ – ಜಾತಿ ಇಲ್ಲ, ಜನರ ಪ್ರೀತಿ ಒಂದೇ : ಶಾಸಕಿ ಅಂಜಲಿ ನಿಂಬಾಳ್ಕರ್ 

ವರದಿ : ರತ್ನಾಕರ ಗೌಂಡಿ  ಬೆಳಗಾವಿ : ಖಾನಾಪುರ್ ಪಟ್ಟಣದಲ್ಲಿ ಅಂಜಲಿ ನಿಂಬಾಳ್ಕರ್ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹಾಗೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ 60...

ಬೆಳಗಾವಿ : ಭೀಕರ ಅಪಘಾತದಲ್ಲಿ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವು 

ಬೆಳಗಾವಿ: ಕಾರು ಮತ್ತು ಬೈಕ್​ಗೆ, ಲಾರಿ ಡಿಕ್ಕಿ ಹೊಡೆದ ಪರಿಣಾಮ ಎಎಸ್​ಐ ಪತ್ನಿ ಸೇರಿದಂತೆ ನಾಲ್ವರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸವದತ್ತಿ ತಾಲೂಕಿನ ಬೂದಿಗೊಪ್ಪ ಕ್ರಾಸ್​ನಲ್ಲಿ ನಡೆದಿದೆ. ರುಕ್ಮಿಣಿ ಹಳಕಿ(48) ಅಕ್ಷತಾ ಹಳಕಿ(22), ಕಾರು...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -