ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಲ್ಲೆಹೋಳ ಗ್ರಾಮದ ರಸ್ತೆಗಳ ಅಭಿವೃದ್ಧಿಗಾಗಿ ಪಂಚಾಯತ ರಾಜ್ ಇಂಜಿನಿಯರಿಂಗ್ ಇಲಾಖೆಯ ವತಿಯಿಂದ 60 ಲಕ್ಷ ರೂ,ಗಳನ್ನು ಬಿಡುಗಡೆ ಮಾಡಿಸಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಶನಿವಾರ ಕಾಂಕ್ರೀಟ್ ರಸ್ತೆಗಳ ನಿರ್ಮಾಣದ ಸಲುವಾಗಿ ಭೂಮಿ ಪೂಜೆಯನ್ನು ನೆರವೇರಿಸಿದ ಕಾಮಗಾರಿಗೆ ಚಾಲನೆಯನ್ನು ನೀಡಿದರು.
ಚುನಾವಣೆ ಹತ್ತಿರ ಬಂದರೂ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳ ಸರಣಿ ಮುಂದುವರಿದಿದ್ದು, ಪ್ರತಿ ದಿನ ಒಂದಿಲ್ಲೊಂದು ಊರಲ್ಲಿ ಕೋಟ್ಯಂತರ ರೂ. ವೆಚ್ಚದ ಕಾಮಗಾರಿಗಳಿಗೆ ಪೂಜೆ ಇಲ್ಲವೇ ಉದ್ಘಾಟನೆ ನಡೆಯುತ್ತಿದೆ. ಒಂದೊಂದು ದಿನ 4 -5 ಗ್ರಾಮಗಳಲ್ಲಿ ಅಭಿವೃದ್ಧಿ ಯೋಜನೆಯ ಕಾರ್ಯಕ್ರಮಗಳಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಭಾಗವಹಿಸುತ್ತಿದ್ದಾರೆ.
ಶನಿವಾರ ಕಲ್ಲೆಹೊಳ ಗ್ರಾಮದಲ್ಲಿ 60 ಲಕ್ಷ ರೂ. ವೆಚ್ಚದ ಯೋಜನೆ ಜಾರಿಗೊಳಿಸುವ ಮೂಲಕ ಗ್ರಾಮಸ್ಥರಲ್ಲಿ ಹರ್ಷವನ್ನುಂಟು ಮಾಡಿದರು. ಈ ಸಮಯದಲ್ಲಿ ಗ್ರಾಮದ ಹಿರಿಯರು, ಮಹೇಶ ಪಾಟೀಲ, ಅಕ್ಷಯ ಪಾಟೀಲ, ಸಂಜಯ ಪಾಟೀಲ, ಇಂಜಿನಿಯರ್ ವೈಭವ್, ಎಲ್ ಎನ್ ಪಾಟೀಲ, ಅಕ್ಷಯ ಕಣ್ಣೂರಕರ್, ಅಲ್ಕಾ ಲಾಮಜಿ, ವಿಠ್ಠಲ, ರಮೇಶ ಕಣ್ಣೂರಕರ್, ಮಹಾದೇವ ಪಾಟೀಲ, ಅಜಿತ್ ಪಾಟೀಲ, ಮುಂತಾದವರು ಉಪಸ್ಥಿತರಿದ್ದರು.
5 ಲಕ್ಷ ರೂ. ಮಂಜೂರು
ಕಲ್ಲೆಹೋಳ ಗ್ರಾಮದ ರಾಜು ಕಾಚು ಹಣ್ಣೂರಕರ್ ಎಂಬ ರೈತ ಆರು ತಿಂಗಳ ಹಿಂದೆ ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ಸತತ ಪ್ರಯತ್ನದಿಂದ 5 ಲಕ್ಷ ರೂ,ಗಳನ್ನು ಬಿಡುಗಡೆ ಮಾಡಿಸಿರುವ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಶನಿವಾರ ಮೃತ ವ್ಯಕ್ತಿಯ ಪತ್ನಿ ರೋಹಿಣಿ ಹಣ್ಣೂರಕರ್ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಆದ ಮಾಹಿತಿ ಪತ್ರವನ್ನು ಹಸ್ತಾಂತರಿಸಿದರು.