ಬೆಳಗಾವಿ : ಗೋಧೋಳಿ ಬುಡುಬುಡಿಕಿ ಜೋಶಿ ಸಮುದಾಯಗಳಿಗೆ ಕುಲಶಾಸ್ತ್ರಗಳ ಅಧ್ಯಯನಕ್ಕೆ 22 ಲಕ್ಷ ರೂಪಾಯಿಗಳ ಬೇಡಿಕೆಯನ್ನು ಮುಂದಿಟ್ಟು ಬೃಹತ್ ಪ್ರತಿಭಟನೆಗೆ ಮುಂದಾಗಿದ್ದಾರೆ.
ಸಮುದಾಯಗಳು ಅಲೆಮಾರಿ ಮತ್ತು ಅರೆ ಅಲಮಾರಿ ಸಮುದಾಯಗಳ ಬುಡುಬುಡಿಕೆ ಜೋಷಿ ಸಮುದಾಯ ಕುಲಶಾಸ್ತ್ರಗಳನ್ನು ಕಾರ್ಯದರ್ಶಿಗೆ ನೀಡಲು ಬೆಳಗಾವಿಯಲ್ಲಿಂದು ಅಖಿಲ ಕರ್ನಾಟಕ ಗೋಧೋಳಿ ಸಮಾಜ ಸಂಘದ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು.
ಗೋಧೋಳಿ ಬಡ ಬುಡುಬುಡಿಕೆ ಜೋಷಿ ಅತ್ಯಂತ ಹಿಂದುಳಿದ ಸಮಾಜವಾಗಿದ್ದು ಶೈಕ್ಷಣಿಕ, ಸಮಾಜಿಕ, ರಾಜಕೀಯದಿಂದ ದೂರ ಇರುವ ಈ ಸಮಾಜವನ್ನು ಹಲವಾರು ವರ್ಷಗಳಿಂದ ಮುಖ್ಯ ವಾಹಿನಿಗೆ ತರಲು ಹೋರಾಟದ ಮುಖಾಂತರ ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತದೆ.
ಗೋಧೂಳಿ ಬುಡಕಟ್ಟು ಬುಡಬುಡಕೆ ಜೋಷಿ ಸಮುದಾಯಗಳಿಗೆ ನೀಡುತ್ತಿರುವ ಜಾತಿ ಪ್ರಮಾಣ ಪತ್ರದಲ್ಲಿ ಅಲಮಾರಿ ಎಂದು ನಮೂದಿಸುವುದು. ಈ ಸಮುದಾಯ ಪ್ರತ್ಯೇಕವಾಗಿ ಒಳ ಮೀಸಲಾತಿ ಶೇ. ಮೂರರಷ್ಟು ನೀಡುವುದು ವಸತಿ ಗ್ರಹ ನಿರ್ಮಾಣಕ್ಕೆ 5 ಲಕ್ಷಕ್ಕೆ ಏರಿಸುವುದು ಈ ಸಮುದಾಯವನ್ನು ಟೆಂಟ್ ಮತ್ತು ಗುಡಿಸಲ ಮುಕ್ತಗೊಳಿಸಬೇಕು.
ಪ್ರಾಥಮಿಕ ಪ್ರೌಢ ಶಿಕ್ಷಣ ಮತ್ತು ಉನ್ನತ ಶಿಕ್ಷಣಗಳಿಗೆ ಮಕ್ಕಳ ಶುಲ್ಕ ರಹಿತ ಶಿಕ್ಷಣ ನೀಡಬೇಕು ಸಣ್ಣಪುಟ್ಟ ವ್ಯಾಪಾರಿಗಳಿಗೆ ಮೂರು ಲಕ್ಷ ಸಹಾಯಧನ ನೀಡುವುದು. ಆರ್ಥಿಕವಾಗಿ ಪ್ರಬಲ ಹೊಂದಲು ಕುರ ಕುಶಲ ಉದ್ಯೋಗಗಳಿಗೆ ಉಚಿತ ತರಬೇತಿ ನೀಡುವುದು ಸಮುದಾಯಗಳಿಗೆ ಸಾಮಾಜಿಕ ಭದ್ರತೆ ನೀಡುವುದು. ಹಲವು ಬೇಡಿಕೆಗಳನ್ನು ರಾಜ್ಯ ಸರ್ಕಾರದ ಮುಂದೆ ಇಡಲಾಗಿದೆ.
ಸರಕಾರ ಈ ಸಮುದಾಯಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾಯಿದೆ ಎಂದು ಭಾವನೆ ನಮ್ಮಲ್ಲಿ ಬಂದಿದೆ. ಎಂದು ಗಣಾಚಾರಿ ಅಖಿಲ ಕರ್ನಾಟಕ ಗೊಂದಳಿ ಸಮಾಜ ರಾಜ್ಯಾಧ್ಯಕ್ಷರು ಈ ಸಂದರ್ಭದಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.