ಬಾಗಲಕೋಟೆ: ವಿದ್ಯಾರ್ಥಿಗಳಿಗೆ ಕಲಿಯುವ ಹಂಬಲ ಇದ್ದರೆ ಮಾತ್ರ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯ ಎಂದು ತೋಟಗಾರಿಕಾ ವಿಜ್ಞಾನ ವಿಶ್ವವಿದ್ಯಾಲಯದ ಇಂಗ್ಲೀಷ್ ಪ್ರಾಧ್ಯಾಪಕರಾದ ಡಾ.ನಾಗರಾಜ ಹೋಳೆಯಣ್ಣವರ ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದ ಇಂಗ್ಲೀಷ್ ಸ್ನಾತಕೋತ್ತರ ವಿಭಾಗದಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ಪಿ.ಜಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಒಂದು ದಿನದ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಅಸಂಬದ್ಧ ಥಿಯೇಟರ್ ಎಂಬ ಆಂಗ್ಲಭಾಷೆಯ ನಾಟಕವು ಮಾನವ ಜೀವನದ ಅಮೂರ್ತವಾಗಿದೆ. ನಾವು ಇತರ ವ್ಯಕ್ತಿಗಳಂತೆ ನಮ್ಮ ಜೀವನ ಹೇಗೆ ನಡೆಯುತ್ತಿದೆ ಎಂಬುದನ್ನು ಈ ನಾಟಕದಿಂದ ತಿಳಿದುಕೊಳ್ಳಬಹುದು ಎಂದರು.
ಮಾನವ ಪರಿಸ್ಥಿತಿಯ ಕಠೋರ ಸಂಗತಿಗಳೊಂದಿಗೆ ಎಳೆಎಳೆಯಾಗಿ ಬಿಚ್ಚಿಡಯವ ಈ ನಾಟಕವು ಪ್ರಾರಂಭ ಮತ್ತು ಅಂತ್ಯವನ್ನು ಹೊಂದಿಲ್ಲ, ಅದು ಎಲ್ಲಿಂದ ಪ್ರಾರಂಭವಾಗುತ್ತದೆ ಮತ್ತು ಎಲ್ಲಿ ಕೊನೆಗೊಳ್ಳುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಕಷ್ಟ. ಈ ನಾಟಕವು ಆ್ಯಕ್ಷನ್ ಓರಿಯೆಂಟೆಡ್ ಆಗಿದೆ ಎಂದು ಹೇಳಿದರು.
ಈ ಇಂಗ್ಲಿಷ್ ನಾಟಕವು ವೃತ್ತಿಪರವಾಗಿದ್ದು ಪ್ರೇಕ್ಷಕರ ಮುಂದೆ ವೇದಿಕೆಯಲ್ಲಿ ಅಥವಾ ರಂಗಭೂಮಿಯಲ್ಲಿ ನಿರ್ವಹಿಸುವ ಸಾಹಿತ್ಯಿಕ ಕೆಲಸವಾಗಿದೆ. ಇದು ಸಂಘರ್ಷಗಳು, ಕ್ರಮಗಳು ಮತ್ತು ನಿರ್ದಿಷ್ಟ ವಿಷಯಗಳ ಬಗ್ಗೆ ತಿಳಿಸಿಕೊಡುತ್ತದೆ. ಆರಂಭಿಕದಲ್ಲಿ ಇಂಗ್ಲಿಷ್ ಭಾಷೆಯ ನಾಟಕಗಳು ತುಂಬಾ ಪ್ರಭಾವ ಬೀರಿದ್ದವು. ಗ್ರೀಕ್ ಮತ್ತು ರೋಮನ್ ಅವರಿಂದ ಇಂಗ್ಲಿಷ್ ಕಿರು ನಾಟಕಗಳು ಆರಂಭಗೊಂಡವು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಎಸ್, ಆರ್, ಮುಗನೂರಮಠ , ಐಕ್ಯೂಎಸಿ ಸಂಯೋಜಕರಾದ ಡಾ.ಎ.ಯು. ರಾಠೋಡ, ಡಾ.ಎಂ.ಎಂ.ಮೇಟಿ, ಡಾ.ಜಿ.ಐ.ನಂದಿಕೋಲಮಠ, ಶ್ರೀನಿವಾಸ ಚಿಮ್ಮಲಗಿ ಹಾಗೂ ಪಿ.ಜಿ.ಪ್ರಥಮ ಹಾಗೂ ದ್ವಿತೀಯ ವರ್ಷದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.