ಬೆಂಗಳೂರು: ಗಂಡನಿಂದ ದೂರಾದ ನಂತರ ಜೊತೆಗಿದ್ದ ಪ್ರಿಯಕನ ಬಿಟ್ಟು ಬೇರೊಬ್ಬನ ಜೊತೆ ಸ್ನೇಹ ಮಾಡಿದ್ದೇ ಬಾಗಲಗುಂಟೆ ಠಾಣಾ ವ್ಯಾಪ್ತಿಯಲ್ಲಿ ತಾಯಿ ಮಗು ಹತ್ಯೆಗೆ ಕಾರಣ ಎಂಬ ವಿಚಾರ ಬೆಳಕಿಗೆ ಬಂದಿದೆ. ನವನೀತ (35) ಮತ್ತು ಈಕೆಯ ಎಂಟು 8 ವರ್ಷದ ಸೃಜನ್ ಕೊಲೆಯಾದವರು.
ಮಹಿಳೆ ನವನೀತನಿಗೆ ಚಂದ್ರು ಎಂಬಾತನೊಂದಿಗೆ ವಿವಾಹವಾಗಿತ್ತು. ಈತನಿಂದ ದೂರಾದ ಬಳಿಕ ತನ್ನ ಮಗುವಿನಿಂದಿಗೆ ಎರಡು ವರ್ಷಗಳಿಂದ ಪ್ರತ್ಯೇಕವಾಗಿ ವಾಸ ಮಾಡುತಿದ್ದರು. ಈ ವೇಳೆ ಶೇಖರ್ ಎಂಬಾತನೊಂದಿಗೆ ಸಂಪರ್ಕದಲ್ಲಿದ್ದಳು.
ಇತ್ತೀಚಿಗೆ ಶೇಖರ್ ಬಿಟ್ಟು ಲೋಕೇಶ್ ಎಂಬಾತನ ಸಂಪರ್ಕದಲ್ಲಿ ಇದ್ದಾಳೆ ಎಂದ ಅನುಮಾನ ಶೇಖರ್ಗೆ ಬಂದಿದೆ. ಕಳೆದ ಒಂದು ವರ್ಷದ ಹಿಂದೆ ನವನೀತಳಿಗೆ ಲೋಕೇಶ್ ಎಂಬುವನ ಜೊತೆ ಸ್ನೆಹವಾಗಿತ್ತು. ಇದನ್ನು ಕಂಡು ಮೊದಲ ಪ್ರಿಯಕರ ಶೇಖರ್, ಆತನ ಸಹವಾಸ ಬಿಡುವಂತೆ ನವನೀತಳಿಗೆ ಎಚ್ಚರಿಕೆ ನೀಡಿದ್ದನು. ಆಕೆಯ ಮೇಲೆ ಹಲ್ಲೆಯೂ ನಡೆಸಿದ್ದನು.
ಷ್ಟೆಲ್ಲಾ ಆದ ಮೇಲೂ ನವನೀತ ಲೋಕೇಶ್ ಜೊತೆ ಸಂಬಂಧ ಮುಂದುವರೆಸಿದ್ದಾಳೆ. ಇದರಿಂದ ಕೋಪಗೊಂಡ ಶೇಖರ್, ನವನೀತಳನ್ನು ಕೊಲೆ ಮಾಡುವುದಾಗಿ ಹೇಳಿಕೊಂಡಿದ್ದನು. ಅದರಂತೆ ಶನಿವಾರ ಎಂದಿನಂತೆ ನವನೀತಳ ಮನೆಗೆ ಬಂದಿದ್ದಾನೆ.
ಹೀಗೆ ಮನೆಗೆ ಬಂದ ಶೇಖರ್, ಜ್ಯೂಸ್ ತರುವಂತೆ ನವನೀತಳ 8 ವರ್ಷದ ಮಗನನ್ನು ಅಂಗಡಿಗೆ ಕಳುಹಿಸಿದ್ದಾನೆ. ನಂತರ ನವನೀತಳ ಜೊತೆ ಜಗಳ ಶುರು ಮಾಡಿದ್ದ ಶೇಖರ್, ಚಾಕುವಿನಿಂದ ಕುತ್ತಿಗೆಗೆ ಇರಿದು ಕೊಲೆ ಮಾಡಿದ್ದಾನೆ.
ಇತ್ತ, ಅಂಗಡಿಯಿಂದ ಜ್ಯೂಸ್ ತೆಗೆದುಕೊಂಡು ಬಂದಿದ್ದ ಬಾಲಕನಿಗೆ ಮ್ಯಾಜಿಕ್ ಹೇಳಿಕೊಡುತ್ತೇನೆ ಎಂದು ನಂಬಿಸಿ ಸೀರೆಯಿಂದ ಕೈ ಕಾಲುಗಳನ್ನು ಕಟ್ಟಿ ತಲೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಎರಡು ಮೃತ ದೇಹಗಳನ್ನು ಬೆಡ್ರೂಮ್ನಲ್ಲಿ ಮಂಚದ ಮೇಲೆ ಎಸೆದು ಪರಾರಿಯಾಗಿದ್ದಾನೆ.
ಜೋಡಿ ಕೊಲೆ ಪ್ರಕರಣ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಬಾಗಲಗುಂಟೆ ಠಾಣಾ ಪೊಲೀಸರು, ಆರೋಪಿ ಶೇಖರ್ನನ್ನು ಬಂಧಿಸಿದ್ದು, ವಿಚಾರಣೆ ಮುಂದುವರಿದಿದೆ.