ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಬೆಳಗಾವಿ ಜಿಲ್ಲಾ ಸಮಿತಿ ವತಿಯಿಂದ ಗ್ರಾಮ ಪಂಚಾಯತ್ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಬೆಳಗಾವಿ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಂಘಟನೆಯ ಅಧ್ಯಕ್ಷರಾದ ಎಂ. ಬಿ ನಾಡಗೌಡರು ಪಂಚಾಯತ್ ಸ್ವರಾಜ್ ಸಮಾಚಾರ ಜೊತೆಗೆ ಮಾತನಾಡುತ್ತಾ ಕರ್ನಾಟಕ ಸರ್ಕಾರ ಕಾರ್ಮಿಕರ ಸಚಿವರು ಕನಿಷ್ಠ ವೇತನ ಬೆಲೆ ಏರಿಕೆ ಅನುಗುಣವಾಗಿ ತಿಂಗಳಿಗೆ 31 ಸಾವಿರ ನಿಗದಿ ಮಾಡಬೇಕೆಂದು ಸೆಪ್ಟಂಬರ್ 2023 ರಲ್ಲಿ ತಿಳಿಸಿದ್ದರು. ಅದರಂತೆ ಆ ಭರವಸೆಯನ್ನು ಈಡೇರಿಸಬೇಕು ಸುಪ್ರೀಂ ಕೋರ್ಟ್ ನೀಡಿದ ಮಾನದಂಡಗಳ ಅಂಶಗಳನ್ನು ಪರಿಗಣಿಸಬೇಕೆಂದು ಈ ಸಂದರ್ಭದಲ್ಲಿ ಸರ್ಕಾರಕ್ಕೆ ಒತ್ತಾಯಿಸುತ್ತೇವೆ ಎಂದರು.
ರಾಜ್ಯದ ಗ್ರಾಮ ಪಂಚಾಯಿತಿಗಳಲ್ಲಿ ಗುಮಾಸ್ತ, ಕ್ಲರ್ಕ್, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ಜವಾನ ,ನೀರುಗಂಟಿ, ಸ್ವಚ್ಛತಾಗಾರರು ಗ್ರಾಮ ಪಂಚಾಯಿತಿಗಳಲ್ಲಿ ಆರಂಭಕಾಲದಿಂದಲೂ ಸೇವೆ ಸಲ್ಲಿಸುತ್ತಿದ್ದಾರೆ ಆದರೆ ಅವರಿಗೆ ಬೇರೆ ಯಾವುದೇ ಸೌಲಭ್ಯ ಇರುವುದಿಲ್ಲ ಗ್ರಾಮ ಪಂಚಾಯತ್ ನೌಕರರ ಗಳಿಗೆ ಪೆನ್ಷನ್ ಜಾರಿಯಾಗಬೇಕು
31 /10 /2018 ನೇಮಕಗೊಂಡಿರುವ ನೌಕರರು ಏಕಕಾಲಕ್ಕೆ ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ನೀಡುವಂತೆ ಆದೇಶ ನೀಡಬೇಕು.
ಮತ್ತು ಗ್ರಾಮ ಪಂಚಾಯತ್ ನೌಕರರುಗಳಿಗೆ ಏಕಕಾಲಕ್ಕೆ ಸರ್ಕಾರಿ ನೌಕರನಾಗಿ ಘೋಷಿಸಬೇಕು 6,000ಪಿಂಚಣಿ ವ್ಯವಸ್ಥೆ ಜಾರಿ ಆಗಬೇಕು. ಈಗ ಇರುವ ಡಾಟಾ ಎಂಟ್ರಿ ಆಪರೇಟರ್ ನೇಮಕ ಮಾಡಿಕೊಂಡು ಅವರನ್ನು ಮುಂದುವರಿಸಬೇಕು ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ವರ್ಗಾವಣೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಈ ರೀತಿ 16 ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದೇವೆ ಇದನ್ನು ಕೂಡಲೇ ಸರ್ಕಾರ ಪರಿಷ್ಕರಿಸಬೇಕು ಮತ್ತು ಗ್ರಾಮ ಪಂಚಾಯತ್ ನೌಕರರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಈ ಸಂದರ್ಭದಲ್ಲಿ ಸರ್ಕಾರಕ್ಕೆ ಒತ್ತಾಯಿಸಿದರು.
ಈ ವೇಳೆ ಜಿ ಎಂ ಜೈನ್ ಖಾನ್ ಅಧ್ಯಕ್ಷರು, ವೀರಭದ್ರ ಕಂಪ್ಲಿ ಖಜಾಂಜಿ, ಎಲ್ಎಸ್ ನಾಯಕ್
ಪ್ರಧಾನಕಾರ್ಯದರ್ಶಿ ಎಲ್ಲನಗೌಡ ಪಾಟೀಲ್, ದುಂಡಪ್ಪ ಭಜಂತ್ರಿ ರಮೇಶ್ ಹೋಳಿ, ಎಲ್ಲಪ್ಪ ನಾಯಕ, ಗಣಪತಿ ಗುರವ, ಮಹಾಂತೇಶ್ ಪಾಟೀಲ, ಹನುಮಂತ್ ಸತ್ತಿ, ಬಾಬು ಗೇನಾನಿ, ಜಿತೇಂದ್ರ ಕಾಗನಕರ, ಬಸವರಾಜ ನಾಯಕ್ ಮಂಜುನಾಥ್ ಕರ್ಕಿ, ದಿಲೀಪ್ ಬೋವಿ ಇತರರು ಉಪಸ್ಥಿತರಿದ್ದರು