ಬಾಗಲಕೋಟೆ: ವಸುದೈವ ಕುಟುಂಬಕಂ ಘೋಷವಾಕ್ಯದೊಂದಿಗೆ ನಡೆದ ಒಂಬತ್ತನೆಯ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಬಿವ್ಹಿವ್ಹಿ ಸಂಘದ ಆವರಣದಲ್ಲಿ ಮಳೆಗಾಗಿ ಪ್ರಾರ್ಥಿಸಿ ಸಾಮೂಹಿಕವಾಗಿ ಯೋಗ ಪ್ರದರ್ಶನ ಮಾಡುವುದರ ಮೂಲಕ ಆಚರಿಸಲಾಯಿತು.
ಬಿವ್ಹಿವ್ಹಿ ಸಂಘದ ಕಲಾ, ವಿಜ್ಞಾನ, ವಾಣಿಜ್ಯ, ಶಿಕ್ಷಣ ಮಹಾವಿದ್ಯಾಲಯಗಳು ಮತ್ತು ಆಯುರ್ವೇದಿಕ್, ಹೋಮಿಯೋಪತಿ ಕಾಲೇಜುಗಳು ಹಾಗೂ ನರ್ಸಿಂಗ್, ಪಾಲಿಟೆಕ್ನಿಕ್, ಅಕ್ಕಮಹಾದೇವಿ ಕಾಲೇಜು, ಪ್ರಾಥಮಿಕ ಹಾಗೂ ಪ್ರೌಡಶಾಲೆಗಳ ಸಹಯೋಗದಲ್ಲಿ 45 ನಿಮಿಷಗಳ ಕಾಲ ವಿವಿಧ ಆಸನಗಳನ್ನು ಪ್ರದರ್ಶಿಸುವುದರ ಮೂಲಕ ಯೋಗ ಮಹತ್ವವನ್ಬು ಸಾರಿದರು.
ಪ್ರದರ್ಶನದಲ್ಲಿ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನೀಕರು ಸೇರಿದಂತೆ ಮೂರು ಸಾವಿರಕ್ಕಿಂತ ಹೆಚ್ಚಿನ ಜನರು ಪಾಲ್ಗೊಳುವುದರ ಮೂಲಕ ತಾಡಾಸನ, ಮನಸ್ಸು ಶಾಂತವಾಗಿಟ್ಟುಕೊಳ್ಳುವ ವೃಕ್ಷಾಸನ, ಪಾದ ಹಸ್ತಾಸನ, ಅರ್ಧಚಕ್ರಾಸನ, ದಂಡಾಸನ, ಭದ್ರಾಸನ, ವಜ್ರಾಸನ, ಉತ್ಥಾನ ಮಂಡೂಕಾಸನ, ವಕ್ರಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ಥಾನ ಪಾದಾಸನ, ಶವಾಸನ, ಪ್ರಾಣಯಾಮ ಸೇರಿದಂತೆ ವಿವಿಧ ಆಸನಗಳನ್ನು ಪ್ರದರ್ಶಿಸಲಾಯಿತು.
ಕಾರ್ಯಕ್ರಮದಲ್ಲಿ ಬಿವ್ಹಿವ್ಹಿ ಸಂಘದ ಕಾರ್ಯಾಧ್ಯಕ್ಷರಾದ ವೀರಣ್ಣ ಸಿ. ಚರಂತಿಮಠ, ಬಿವ್ಹಿವ್ಹಿ ಸಂಘದ ಗೌರವಕಾರ್ಯದರ್ಶಿಗಳಾದ ಮಹೇಶ್.ಎನ್.ಅಥಣಿ, ಕಾಲೇಜು ಆಡಳಿತ ಮಂಡಳಿಗಳ ಕಾರ್ಯಾಧ್ಯಕ್ಷರಾದ ಗುರುಬಸವ ಸೂಳಿಭಾವಿ, ಆಯುರ್ವೇದಿಕ್ ಹಾಗೂ ಹೋಮಿಯೋಪತಿ ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಸಾಸನೂರ, ಸಂಘದ ಸದಸ್ಯರಾದ ಎಸ್.ಆರ್ ಮನಹಳ್ಳಿ, ಶಶಿಕಾಂತ ಗೌಡರ, ಸಂಘದ ಆಡಳಿತಾಧಿಕಾರಿಗಳು ಸೇರಿದಂತೆ ವಿವಿಧ ಮಹಾವಿದ್ಯಾಲಯಗಳ ಪ್ರಾಚಾರ್ಯರು, ಪ್ರಾದ್ಯಾಪಕರುಗಳು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.