ಬೆಳಗಾವಿ : ದೇಶ ಹಾಗೂ ರಾಜ್ಯದಲ್ಲಿ ಭಯೋತ್ಪಾದಕ ಕೃತ್ಯಗಳು ನಡೆಯುತ್ತಿರುವ ಕಾರಣ ಕಾಂಗ್ರೆಸ್ ನ ಪಾಪದ ಕೂಸು ಎಂದು ತಾಂಡಾ ಅಭಿವೃದ್ಧಿ ನಿಗಮ ಮಂಡಳದ ಅಧ್ಯಕ್ಷ ಪಿ.ರಾಜೀವ ಆರೋಪಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನ ತುಷ್ಟಿಕರಣದ ಮನಸ್ಥಿತಿಯಿಂದ ಭಾರತ ಭಯೋತ್ಪಾದನಾ ಚಟುವಟಿಕೆಯಿಂದ ನಲಗುವಂತಾಗಿದೆ.
ಪೊಲೀಸರು ಎಲ್ಲ ರೀತಿಯ ಪ್ರಯತ್ನ ಮಾಡಿದರೂ ಮಂಗಳೂರಿನಲ್ಲಿ ಶಾರೀಕ್ ದೊಡ್ಡ ಸಂಚು ಮಾಡಿದ್ದ. ಒಂದು ವೇಳೆ ದೊಡ್ಡ ಪ್ರಮಾಣದಲ್ಲಿ ಬ್ಲಾಸ್ಟ್ ಆಗಿದ್ದರೆ ಕಾಂಗ್ರೆಸ್ ವಿನಾಕಾರಣ ಬಿಜೆಪಿ ಮೇಲೆ ಆರೋಪ ಮಾಡುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪುಲ್ವಾಮಾ ದಾಳಿಯಾದಾಗ, ಚರ್ಚ್ ಮೇಲೆ ದಾಳಿಯಾದಾಗ ರಾಹುಲ್ ಗಾಂಧಿ ಸಭೆ ನಡೆಸುತ್ತಿದ್ದಾರೆ. ಸತೀಶ ಜಾರಕಿಹೊಳಿ ಅವರು ಹೇಳುತ್ತಾರೆ. ಹಿಂದೂ ಅಶ್ಲೀಲ ಎಂದು. ಮುಸ್ಲಿಂರು, ಜಿಹಾದಿ ಮನಸ್ಥಿತಿ ಇರುವವರನ್ನು ನೀವು ಖಂಡಿಸುತ್ತಿರಾ ಎಂದು ಪ್ರಶ್ನಿಸಿದರು.
ಬಿಜೆಪಿ ರಾಷ್ಟ್ರೀಯತೆ ಮೊದಲು ಎನ್ನುವ ಹಾಗೆ ದೇಶದ ಸಂಸ್ಕೃತಿಯನ್ನು ಪ್ರೀತಿಸುವ ವ್ಯಕ್ತಿ ಹಿಂದು ಎಂದು ರಾಷ್ಟ್ರೀಯತೆ ಎತ್ತಿ ಹಿಡಿಯುವ ಕೆಲಸ ಮಾಡುತ್ತಿದೆ.
ಮಂಗಳೂರಿನಲ್ಲಿ ನಡೆದ ಕುಕ್ಕರ ಬ್ಲಾಷ್ಟ್ ಪ್ರಕರಣದಲ್ಲಿ ಶಾರಿಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಗ್ರವಾದ ಕಡಿವಾಣ ಹಾಕಲು ಭಾರತ ಸರಕಾರ ಸನ್ನದ್ದವಾಗಿದೆ ಎಂದರು.
ಬೆಳಗಾವಿ ಬಿಜೆಪಿ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಶರದ್ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.