ಬೆಳಗಾವಿ ತಾಲೂಕ ನಾವಗೆ ಗ್ರಾಮದ ಅಂಟಿನ ಟೇಪ್ ಕಾರ್ಖಾನೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮಾರ್ಕಂಡಯ್ಯ ನಗರದ ನಿವಾಸಿ ಎಲ್ಲಪ್ಪ ಸನಣ್ಣ ಗೌಡ ಗುಂಡ್ಯಾಗೋಳ( 20) ಮೃತ ಪಟ್ಟಿದ್ದಾನೆ. ಬೆಳಗಾವಿ ತಾಲೂಕಿನ ರಂಜಿತ್ ದಶರಥ ಪಾಟೀಲ, ಎಲ್ಲಪ್ಪ ಪ್ರಕಾಶ್ ಸುಲಗುಡೆ, ನಾರಾಯಣ್ ಕರವೇಕರ, ತೀವ್ರ ಗಾಯಗೊಂಡಿದ್ದಾರೆ ಮತ್ತು ಇತರ ಕಾರ್ಮಿಕರುಗಳು ಸಣ್ಣಪುಟ್ಟ ಗಾಯಗಳಾಗಿವೆ.
ನಾವಗೆ ಸ್ನೇಹಂ ಕಾರ್ಖಾನೆಯಲ್ಲಿ 400ಕ್ಕೂ ಅಧಿಕ ಕಾರ್ಮಿಕರು ಮೂರು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮಂಗಳವಾರ ರಾತ್ರಿ 74 ಕಾರ್ಮಿಕರು ಎಂದಿನಂತೆ ಕೆಲಸದಲ್ಲಿದ್ದಾಗ ಅಗ್ನಿ ಅವಘಡ ಸಂಭವಿಸಿದೆ . ಕಾರ್ಖಾನೆ ಯಲ್ಲಿ ಬೆಂಕಿತಗಲಿದ್ದು ಕೆಲವೇ ಕ್ಷಣದಲ್ಲಿ ಕಾರ್ಖಾನೆಯನ್ನು ಬೆಂಕಿ ಆವರಿಸಿಕೊಂಡಿದೆ. ಬೆಂಕಿಯ ಬೀಕರತೆ ಎಷ್ಟಿತ್ತು ಅಂದರೆ ಮಂಗಳವಾರ ರಾತ್ರಿ ಇಡಿ ಕಾರ್ಯಾಚರಣೆ ನಡೆಸಿದರು ಬೆಂಕಿ ನಿರ್ವಹಿಸಲು ಸಾಧ್ಯವಾಗಲಿಲ್ಲ.
ಬೆಂಕಿ ನಿಂದಿಸುವ ಕಾರ್ಯದಲ್ಲಿ ತೊಡಗಿದ ಅಗ್ನಿಶಾಮಕ ವಾಹನಗಳು ಹಾಗೂ 250 ಸಿಬ್ಬಂದಿ ಐವತ್ತು ಎನ್ ಡಿ ಆರ್ ಎಫ ಸಿಬ್ಬಂದಿ ಬೆಂಕಿ ನಿಂದಿಸಲು ಸುಮಾರು 12 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ್ದಾರೆ. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ, ಬೆಳಗಾವಿ ಪೊಲೀಸ್ ಆಯುಕ್ತರಾದ ಯಡಾ ಮಾರ್ಟಿನ್ಮಾಬ೯ನ್ಯಾಂಗ ಜಿಪಂ ಸಿಇಒ ರಾಹುಲ್ ಶಿಂಧೆ, ಘಟನಾ ಸ್ಥಳಕ್ಕೆ ಬೇಟಿ ನೀಡಿದ್ದಾರೆ.
ಈ ಘಟನೆಯ ಕುರಿತಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ, ಲಕ್ಷ್ಮಿ ಹೆಬ್ಬಾಳ್ಕರ್ ತುರ್ತು ಆರ್ಥಿಕ ಸಹಾಯ ನೀಡಿದ್ದಾರೆ. ಡಾ ಹಿತಾ ಮೃಣಾಲ್ ಅವರು ಕೆಎಲ್ಇ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ ಹಾಗೂ ಲಕ್ಷ್ಮಿ ತಾಯಿ ಫೌಂಡೇಶನ್ ವತಿಯಿಂದ ಆರ್ಥಿಕ ಸಹಾಯ ಮಾಡಿದ್ದಾರೆ. ಈ ಘಟನೆಯಿಂದಾಗಿ ಬೆಳಗಾವಿಯಲ್ಲಿ ಕಾರ್ಮಿಕ ವಲಯದಲ್ಲಿ ಆತಂಕ ಸೃಷ್ಟಿಯಾಗಿದ್ದು ಕಾರ್ಖಾನೆಗಳ ಸುರಕ್ಷತೆ ಮತ್ತು ಕಾರ್ಮಿಕರ ಸುರಕ್ಷತೆ ಕುರಿತು ಪ್ರಶ್ನೆಗಳು ಉದ್ಭವವಾಗುತ್ತ ಇವೆ ಕಾರ್ಮಿಕ ಇಲಾಖೆ ಇನ್ನಾದರೂ ಇಂಥ ಅವಘಡಗಳು ನಡೆಯಬಾರದು ಮುಂಜಾಗ್ರತ ಕ್ರಮ ಕೈಗೊಳ್ಳಬೇಕ ಕಾರ್ಮಿಕ ವಲಯದಲ್ಲಿ ಚರ್ಚೆ ಪ್ರಾರಂಭವಾಗಿದೆ.