ಬಾಗಲಕೋಟೆ : ರೈತನಿಗೆ ಭೂಮಿಯ ಆಧಾರ್ ಅವಳನ್ನು ಹೆತ್ತ ತಾಯಿಯಂತೆ ಸಲಹುತ್ತಾನೆ . ಕಷ್ಟಪಟ್ಟು ಬೆಳೆ ಬೆಳೆದು ನಿರಂತರ ಶ್ರಮ ಹಾಕಿ ಬಂದ ಬೆಳೆಯಲ್ಲಿ ಹೊಟ್ಟೆ ತುಂಬಿಕೊಳ್ಳುತ್ತಾನೆ. ಆದರೇ ಹಾಕಿದ ಬೆಳೆ ಸಮರ್ಪಕ ರೀತಿಯಲ್ಲಿ ಬರದಿದ್ದರೇ ಬದುಕು ನರಕವಾಗುತ್ತದೆ.
ಹೀಗೆ ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗೂರ ಗ್ರಾಮದ ಪುಂಡಪ್ಪ ಬಸಪ್ಪ ರಶ್ಮಿಯವರು ತಾವು ಮೂರು ಏಕರೆ ಬೆಳೆಯಲ್ಲಿ ಮೆಣಸಿನಕಾಯಿ ಬೆಳೆ ಬೆಳೆದು ಫಲದ ನೀರಿಕ್ಷೆಯಲ್ಲಿದ್ದರು. ಆದರೇ ಉತ್ತಮ ಬೆಳೆ ಬರದೇ ಕೈ ಸುಟ್ಟುಕೊಂಡಿದ್ದರು. ಮಾಡಿದ ಸಾಲ ನಂಜಿನಂತೆ ಮೈತುಂಬ ಏರಿಯಿತು.
ಇದರಿಂದ ಪುಂಡಪ್ಪ ಅವರ ಕುಟುಂಬ ಅಕ್ಷರಶಃ ಕಂಗಲಾಗಿ ಹೋಗಿತ್ತು.
ಇಷ್ಟಕ್ಕೆ ಸುಮನಾಗದೇ ರೈತ ಪುಂಡಪ್ಪ , ಛಲಂದಕಮಲ್ಲನಂತೆ ನಂಬಿದ್ದ ಭೂಮಿಯಲ್ಲಿ ಹೊಸ ಪ್ರಯೋಗಕ್ಕೆ ಮುಂದಾದರು. ಆಗ ಅವರ ಬೆನ್ನಿಗೆ ನಿಂತಿದ್ದು, ತೋಟಗಾರಿಕೆ ಇಲಾಖೆ, ನರೇಗಾ ಯೋಜನೆಯಡಿ ತೋಟಗಾರಿಕೆ ಇಲಾಖೆ ಸಹಕಾರದಿಂದ ಮೂರು ಏಕರೆ ಭೂಮಿಯಲ್ಲಿ ಪಪ್ಪಾಯ ಬೆಳೆಯಲು ಪಣತೊಟ್ಟರು. ಈ ಬಾರಿ ಪಪ್ಪಾಯ ಅವರ ಕೈಬಿಡಲಿಲ್ಲ, ಉತ್ತಮ ಇಳುವರಿ ಬರುವ ಮೂಲಕ ಅವರ ಬದುಕನ್ನು ಹಸಿನಾಗಿಸಿತ್ತು. ಮಾಡಿದ ಸಾಲ ಮೊದಲನಿಗಿಂತ ಕಡಿಮೆ ಆಗುತ್ತಾ ಬಂದಿದೆ. ಉತ್ತಮ ಆದಾಯ ಪಡೆಯುತ್ತಿದ್ದಾರೆ.
ಈ ಬಗ್ಗೆ ಮಾತನಾಡಿದ ರೈತ ಪುಂಡಪ್ಪ ಅವರು ಮೆಣಿಸಿನಕಾಯಿ ಬೆಳೆ ಬೆಳೆದು ಆರ್ಥಿಕವಾಗಿ ಕುಗ್ಗಿ ಹೋಗಿದೆ. ಮಾಡಿದ ಸಾಲ ಕುತ್ತಿಗೆ ಬಂದಿತ್ತು.
ಕೈಚೆಲ್ಲಿ ಕುಳಿತರೇ ಆಗಲ್ಲ ಎಂದು ಗ್ರಾಮ ಪಂಚಾಯಿತಿ ಅಧಿಕಾರಗಳಿಂದ ಮಾಹಿತಿ ಪಡೆದು ತೋಟಗಾರಿಕೆ ಇಲಾಖೆಯಲ್ಲಿ ಇದ್ದ ಹಲವು ವಿಧದ ಸಸಿಗಳ ಬಗ್ಗೆ ತಿಳಿದುಕೊಂಡು ಪಪಾಯ ಬೆಳೆಯಲು ಮುಂದಾದೇ ಆದರೇ ಈ ಬಾರಿ ಪಪ್ಪಾಯ ನನ್ನ ಕೈಬಿಡಲಿಲ್ಲ , ನಷ್ಟವಂತೂ ಆಗಲಿಲ್ಲ, ಪಪ್ಪಾಯ ನನ್ನ ಬದುಕನ್ನು ಸುಧಾರಿಸಿದೆ ಎಂದರು. ಹೀಗೆ ನರೇಗಾದಂತಹ ಅದ್ಭುತ ಯೋಜನೆ ನಂಬಿದ ರೈತರ ಬದುಕು ಹಸಿನಾಗಿದೆ.