ಕಾರವಾರ: ನಡು ರಸ್ತೆಯಲ್ಲಿ ಗೋವಿನ ತಲೆಯೊಂದು ಬಿದ್ದಿರುವಂತಹ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಹೆಗಡೆಕಟ್ಟಾ ಗ್ರಾಮದಲ್ಲಿ ಈ ಘಟನೆ ಕಂಡು ಬಂದಿದ್ದು, ಸದ್ಯ ಆತಂಕ ಸೃಷ್ಟಿಸಿದೆ.
ಅಪರಿಚಿತರು ಗೋವಿನ ತಲೆ ಕತ್ತರಿಸಿ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ. ಇನೊಂದೆಡೆ ಪೊದೆಯಲ್ಲಿ ಎಸೆದಿದ್ದ ಗೋವಿನ ತಲೆಯನ್ನ ಕಚ್ಚಿ ತಂದು ಶ್ವಾನಗಳು ರಸ್ತೆ ಬಿಸಾಡಿವೆ ಎನ್ನಲಾಗುತ್ತಿದೆ.
ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.