ಕ್ಷೇತ್ರದ ಅಭಿವೃದ್ಧಿಗಾಗಿ ಡಾ. ನಿಂಬಾಳ್ಕರ್‌ ಅವರನ್ನು ಗೆಲ್ಲಿಸಿ: ಸಚಿವ ಸತೀಶ್‌ ಜಾರಕಿಹೊಳಿ

Mar 23, 2024 - 16:57
Mar 23, 2024 - 17:01
 18
Google  News Join WhatsApp Join Telegram Live

ಕ್ಷೇತ್ರದ ಅಭಿವೃದ್ಧಿಗಾಗಿ ಡಾ. ನಿಂಬಾಳ್ಕರ್‌ ಅವರನ್ನು ಗೆಲ್ಲಿಸಿ: ಸಚಿವ ಸತೀಶ್‌ ಜಾರಕಿಹೊಳಿ

Panchayat Swaraj Samachar News Desk.

ಬೆಳಗಾವಿ: ಈ ಭಾಗದ ಅಭಿವೃದ್ದಿಗೆ ಕೈ ಅಭ್ಯರ್ಥಿ ಡಾ. ಅಂಜಲಿ ನಿಂಬಾಳಕರಗೆ ಕೈ ಬಲ ಪಡಿಸಲು ಕಾರ್ಯಕರ್ತರು ಮುಂದಾಗಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಕರೆ ನೀಡಿದರು.

ಖಾನಾಪುರ ಪಟ್ಟಣದ ಶುಭಂ ಗಾರ್ಡನನಲ್ಲಿ ನಡೆದ ಉತ್ತರ ಕನ್ನಡ ಲೋಕಸಭೆ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ ಅವರಿಗೆ ಕಳೆದ 9 ತಿಂಗಳುಗಳಲ್ಲಿ ಪಕ್ಷ ಮತ್ತೊಂದು ಅವಕಾಶ ನೀಡಿದೆ. ಆದ್ದರಿಂದ ಕಾರ್ಯಕರ್ತರು ಹಾಗೂ ಕ್ಷೇತ್ರದ ಮತದಾರರು ನಿಂಬಾಳ್ಕರ ಅವರಿಗೆ ಹೆಚ್ಚು ಮತಗಳನ್ನು ನೀಡಿ ಕ್ಷೇತ್ರ ಅಭಿವೃದ್ಧಿ ಮಾಡಲು ಒಂದು ಅವಕಾಶ ನೀಡಬೇಕು ಎಂದು ಹೇಳಿದರು.

ಕಾಂಗ್ರೆಸ್ ಗ್ಯಾರಂಟಿ ಪ್ರತಿ ಮನೆಗೆ ತಿಳಿಸಿ: ಕಾಂಗ್ರೆಸ್ ನುಡಿದಂತೆ ನಡೆದಿದೆ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ವಿಧಾನಸಭೆ ಚುನಾವಣೆಗೂ ಮುನ್ನ ಘೋಷಿಸಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಮುಖ್ಯವಾಗಿ ಕಾಂಗ್ರೆಸ್ ಸರ್ಕಾರ ಮಹಿಳೆಯರನ್ನು ಗಮನದಲ್ಲಿಟ್ಟುಕೊಂಡು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಇದನ್ನು ಮನೆಮನೆಗೆ ತಲುಪಿಸುವ ಮೂಲಕ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಸಹಕರಿಸಬೇಕು. ಕಾಂಗ್ರೆಸ್‌ ಕಾರ್ಯಕರ್ತರು ಅಭಿವೃದ್ಧಿ ಹಾಗೂ ಪಕ್ಷ ದ ತತ್ವ ಸಿದ್ಧಾಂತಗಳನ್ನು ಜನರಿಗೆ ಮುಟ್ಟಿಸುವ ಮೂಲಕ ಬೂತ ಮಟ್ಟದಿಂದ ಪಕ್ಷ ಸಂಗಟಿಸಲು ಕಾರ್ಯಕರ್ತರು ಸಿದ್ದರಾಗಬೇಕು ಎಂದು ಕಾರ್ಯಕರ್ತರಿಗೆ ಸಲಹೆ ನೀಡಿದರು.

ಬಡ ಜನರ ಸಮಸ್ಯೆ ಸ್ಪಂದಿಸದ ಬಿಜೆಪಿ: ಬಡ ಜನ, ಕಾರ್ಮಿಕರು ಸೇರಿದಂತೆ ರೈತರ ಸಮಸ್ಯೆಗಳ ಕುರಿತು ಬಿಜೆಪಿ ಯಾವತ್ತು ಚರ್ಚೆ ಮಾಡಿಲ್ಲ. ಏನೆ ಇದ್ದರು ಇರಡು ಧರ್ಮಗಳ ಮಧ್ಯೆ ಜಗಳ ಹಚ್ಚುವ ಕೆಲಸ ಬಿಜೆಪಿ ಮಾಡಿದೆ. ಅಲ್ಲದೇ ಕೇಂದ್ರ ಸರ್ಕಾರ ಮಿತಿಮೀರಿದ ಭ್ರಷ್ಟಾಚಾರದಿಂದ ಜನ ಬೇಸತ್ತಿದ್ದಾರೆ. ಸುಳ್ಳು ಭರವಸೆ, ಜಾತಿಗಳ ಮಧ್ಯೆ ವಿಷಬೀಜ ಬಿತ್ತುವಿಕೆ, ದಿನಬಳಕೆ ವಸ್ತುಗಳ ಬೆಲೆ ಏರಿಸಿ ಜನರನ್ನು ಸಂಕಷ್ಟಕ್ಕೆ ದೂಡಿದ್ದಾರೆ. ವಿವಿಧ ಧರ್ಮ ಮತ್ತು ಜಾತಿಗಳ ಜನರ ನಡುವೆ ನಿರ್ಣಾಯಕ ನೀತಿ ಅನುಸರಿಸುತ್ತಿರುವ ಬಿಜೆಪಿ ಸರ್ಕಾರದ ಕೆಟ್ಟ ಆಡಳಿತದಿಂದ ರಾಜ್ಯದ ಜನರು ಬೇಸತ್ತು ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ತಂದಿದ್ದಾರೆ. ಆದರೂ ಸಹ ಬಿಜೆಪಿಯು ಜನರನ್ನು ಧರ್ಮದ ಆಧಾರದ ಮೇಲೆ ವಿಭಜಿಸಲು ಪ್ರಯತ್ನಿಸುತ್ತಿದೆ. ಒಂದಿಲ್ಲೊಂದು ಕಾರಣಕ್ಕಾಗಿ ಸಾರ್ವಜನಿಕ ಶಾಂತಿಯನ್ನು ಕದಡಲು ಪ್ರಯತ್ನಿಸುತ್ತಿದೆ. ಆದ್ದರಿಂದ ಕೈ ಕಾರ್ಯಕರ್ತರು ಬಿಜೆಪಿಯವರ ದುರಾಡಳಿತ ಹಾಗೂ ಕಾಂಗ್ರೆಸ್ ಸಸರ್ಕಾರ ಅವಧಿಯಲ್ಲಿ ಕೈಗೊಂಡಿರುವ ಹಲವಾರು ಜನಪರ ಯೋಜನೆಗಳ ಬಗ್ಗೆ ಮನೆ ಮನೆಗೆ ತೆರಳಿ ಜನರಿಗೆ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದರು.

ಲೋಕಸಭೆಯಲ್ಲಿ ಗೆಲ್ಲಿಸಿದರೆ ಹೆಚ್ಚು ಯೋಜನೆ ಜಾರಿ: ಲೋಕಸಭೆಯಲ್ಲಿ ನಮ್ಮ ಸರ್ಕಾರ ಬಂದರೆ ನಿಮ್ಮ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗುವುದು. ಸಬ್ಸಿಡಿಯಲ್ಲಿ 1 ಲಕ್ಷದವರೆಗೆ ಉದ್ಯೋಗ ಮಾಡಲು ಅವಕಾಶ, ವೈದ್ಯಕೀಯ ಸೌಲಭ್ಯ , ಶಿಕ್ಷಣ ಸೌಲಭ್ಯ ಸೇರಿದಂತೆ ಇನ್ನೂಳಿದ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗುವುದು. ಮುಖ್ಯವಾಗಿ ಈ ಕ್ಷೇತ್ರಕ್ಕೆ ಬೇಕಾಗಿರುವ ರಸ್ತೆ ಸುಧಾರಣೆ ಸೇರಿದಂತೆ ವಿವಿಧ ಕಾಮಗಾರಿ ನಡೆಸಲು ಮತದಾರರು ಕೈ ಅಭ್ಯರ್ಥಿಗೆ ಹೆಚ್ಚು ಮತ ನೀಡಲು ಮುಂದಾಗಬೇಕು. ಅಂದಾಗ ಮಾತ್ರ ಹೆಚ್ಚೆಚ್ಚು ಯೋಜನೆ ಜಾರಿಗೆ ತಂದು ಕ್ಷೇತ್ರ ಅಭಿವೃದ್ಧಿ ಮಾಡಲು ಸಹಾಯಕವಾಗುತ್ತದೆ ಎಂದರು.

ಅಧಿಕಾರಕ್ಕೆ ಬಂದ 9 ತಿಂಗಳಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ: ಗೋವಾದಿಂದ ಬೆಳಗಾವಿಗೆ ಬರುವ ರಸ್ತೆ ಅಭಿವೃದ್ಧಿಗೆ ಸಾಕಷ್ಟು ಚಿಂತನೆ ಮಾಡಲಾಗಿದೆ. ಅಲ್ಲದೇ ಖಾನಾಪುರದಿಂದ ಶಿರಸಿವರಗೆ ಉತ್ತಮ ರಸ್ತೆ ಮಾಡಲು ಒಂದು ಯೋಜನೆ ಹಾಕಲಾಗಿದೆ. ಹೀಗೆ ನಾವು ಅಧಿಕಾರಕ್ಕೆ ಬಂದ ನಂತರ ರಸ್ತೆ, ಬ್ರಿಜ್ಜ್‌ ಸೇರಿದಂತೆ ವಿವಿಧ ಕಾಮಗಾರಿಗೆ ಚಾಲನೆ ನೀಡಲಾಗದ್ದು, ಜನರಿಗೆ ಉಪಯುಕ್ತವಾಗುವ ಕಾಮಗಾರಿಗಳನ್ನು ನಮ್ಮ ಕಾಂಗ್ರೆಸ್‌ ಸರ್ಕಾರದಿಂದ ಮಾಡಲಾಗುತ್ತಿದೆ. ಮುಖ್ಯವಾಗಿ ಖಾನಾಪುರ ಕ್ಷೇತ್ರಕ್ಕೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ನಮ್ಮ ಸರ್ಕಾರ ಹಾಕಿಕೊಂಡು ಯೋಜನೆ ರೂಪಿಸಿದೆ. ಅದ್ದರಿಂದ ಈ ಭಾಗದ ಕೈ ಅಭ್ಯರ್ಥಿ ಅಂಜಲಿ ನಿಂಬಾಳ್ಕರ ಅವರನ್ನು ಲೋಕಸಭೆಗೆ ಆಯ್ಕೆ ಮಾಡುವದರ ಮೂಲಕ ಖಾನಾಪುರ ಕ್ಷೇತ್ರದ ಮೊದಲ ಲೋಕಸಭೆ ಅಭ್ಯರ್ಥಿ ಎಂದು ಇತಿಹಾಸವನ್ನು ದಾಖಲು ಮಾಡಬೇಕು ಎಂದು ಹೇಳಿದರು.

ಕಾಂಗ್ರೆಸ್‌ ಸೇರ್ಪಡೆಯಾದ ಜೆಡಿಎಸ್-ಬಿಜೆಪಿ ಕಾರ್ಯಕರ್ತರು: ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ ಯೋಜನೆಗಳನ್ನು ಮೆಚ್ಚಿ ಸ್ಥಳೀಯ ಜೆಡಿಎಸ್‌ ಹಾಗೂ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಸಚಿವ ಸತೀಶ್ ಜಾರಕಿಹೊಳಿ ಸಮ್ಮುಖದಲ್ಲೇ‌ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು. ಈ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ, ಕೈ ಅಭ್ಯರ್ಥಿ ಅಂಜಲಿ ನಿಂಬಾಳ್ಕರ, ಶಾಸಕ ಆಸೀಫ ಸೇಠ, ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ, ರಿಯಾಜ್ ಪಟೇಲ್, ಡಾ.ಜವಳಿ, ಆಲಿಮ್ ಅತ್ತಾರ,ಸಾಧಿಕ ಬಡೆಗರ,ಮಝರ ಖಾನಾಪೂರ, ಪ್ರಕಾಶ ,ಪ್ರಕಾಶ ಮಾದರ,ಲಾಲ ಪಟೇಲ್, ರಫೀಕ್ ವಾರಿಮನಿ ಸೇರಿದಂತೆ ನೂರಾರು ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಮುಖಂಡರು ಇದ್ದರು.

Google News Join Facebook Live 24/7 Help Desk

Tags: