Ad imageAd image

ಇಂದು ಸತೀಶ್ ಜಾರಕಿಹೊಳಿ, ಸುರ್ಜೇವಾಲ ಪ್ರತ್ಯೇಕ ಭೇಟಿ

ratnakar
ಇಂದು ಸತೀಶ್ ಜಾರಕಿಹೊಳಿ, ಸುರ್ಜೇವಾಲ ಪ್ರತ್ಯೇಕ ಭೇಟಿ
WhatsApp Group Join Now
Telegram Group Join Now

ಸತೀಶ್ ಜಾರಕಿಹೊಳಿ ಇಂದು ಸುರ್ಜೇವಾಲರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಗಾಂಧಿ ಭಾರತ ಸಮಾವೇಶದಲ್ಲಿ ಜಿಲ್ಲಾ ನಾಯಕರ ಕಡೆಗಣನೆ ವಿಚಾರವಾಗಿ ಮತ್ತು ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಅವರು ಸಮಾಲೋಚನೆ ನಡೆಸುವ ನಿರೀಕ್ಷೆ ಇದೆ.

ಜನವರಿ 21 ರಿಂದ 2 ದಿನಗಳ ಕಾಲ ಬೆಳಗಾವಿಯವಲ್ಲಿ ನಡೆಯುವ ‘ಗಾಂಧಿ ಭಾರತ’ ಸಮಾವೇಶ ಪೂರ್ವಭಾವಿ ಸಭೆಗಾಗಿ ಸುರ್ಜೇವಾಲ ದೆಹಲಿಯಿಂದ ಬೆಳಗಾವಿಗೆ ಆಗಮಿಸಿದ್ದಾರೆ. ಎಐಸಿಸಿ ಸಮಾವೇಶದ ಪೂರ್ವ ಸಿದ್ಧತೆಯನ್ನು ಅವರು ಪರಿಶೀಲನೆ ನಡೆಸಲಿದ್ದಾರೆ.

ಮಹಾತ್ಮ ಗಾಂಧಿ ಅವರು ಬೆಳಗಾವಿ ಅಧಿವೇಶನದ ಅಧ್ಯಕ್ಷತೆ ವಹಿಸಿದ ನೂರನೇ ವರ್ಷಾಚರಣೆ ಅಂಗವಾಗಿ ಕಾಂಗ್ರೆಸ್ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಳೆದ ತಿಂಗಳು ನಡೆಯಬೇಕಿದ್ದ ಈ ಕಾರ್ಯಕ್ರಮ, ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನದ ಕಾರಣ ಮುಂದೂಡಿಕೆಯಾಗಿತ್ತು.

ಜನವರಿ 21ಕ್ಕೆ ಬೆಳಗಾವಿಯಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ ಮಾಡಿದ್ದೇವೆ. ಜೈ ಬಾಪು, ಜೈ ಭೀಮ, ಜೈ ಸಂವಿಧಾನ ಕಾರ್ಯಕ್ರಮ ಮತ್ತೊಮ್ಮೆ ಆಯೋಜನೆಯಾಗಿದೆ. ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ ಬರಲಿದ್ದಾರೆ. ದೇಶದ ಕಾಂಗ್ರೆಸ್ ನಾಯಕರು ಕಾರ್ಯಕ್ರಮಕ್ಕೆ ಬರಲಿದ್ದಾರೆ. ಸಂಸತ್​ನಲ್ಲಿ ಅಮಿತ್ ಶಾ ಅವರು ಬರೀ ಅಂಬೇಡ್ಕರ್ ಅವರ ಅಪಮಾನ ಮಾಡಿಲ್ಲ. ಬದಲಿಗೆ ಅಂಬೇಡ್ಕರ್ ವಿಚಾರಧಾರೆ ಪಾಲಿಸುವವರ ಗೇಲಿ ಮಾಡಿದ್ದಾರೆ. ಪದೇ ಪದೇ ಸಂವಿಧಾನ ಅವಮಾನಿಸುವ ಕೆಲಸ ಬಿಜೆಪಿ ಮಾಡುತ್ತಿದೆ. ಸಂವಿಧಾನದ ಅಧಿಕಾರವನ್ನು ಬುಲ್ಡೋಜರ್ ಕೆಳಗೆ ತುಳಿವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಸುರ್ಜೇವಾಲ ವಾಗ್ದಾಳಿ ನಡೆಸಿದರು.

WhatsApp Group Join Now
Telegram Group Join Now
Share This Article