ಬೆಳಗಾವಿ: ಅನುಗೋಳ ನಗರದಲ್ಲಿ ಸ್ಥಾಪನೆಯಾಗಿರುವ ಛತ್ರಪತಿ ಸಂಭಾಜಿ ಮಹಾರಾಜ್ ಪ್ರತಿಮೆ ಅನಾವರಣ ಕುರಿತು ಶಾಸಕ ಅಭಯ್ ಪಾಟೀಲ್ ಅವರ ಹೆಸರು ಹೇಳದೆ ಬೆಳಗಾವಿ ಉತ್ತರ ಮತಕ್ಷೇತ್ರ ಶಾಸಕ ಆಸಿಫ್ (ರಾಜು )ಸೆಟ್ ಸಣ್ಣ ಸಣ್ಣ ವಿಷಯಗಳಲ್ಲಿ ನಾನು ದೊಡ್ಡವ ಎಂಬ ಅಹಂಕಾರ ಇರಬಾರದು ಎಂದು ಮಾತಿನ ಚಾಟಿಬೀಸಿದ್ದಾರೆ
ಇಂದು ಕಚೇರಿಯಲ್ಲಿ ಆಸಿಫ್ (ರಾಜು )ಸೆಟ್ ಫೌಂಡೇಶನ್ ಅನಾವರಣ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ರಾಷ್ಟ್ರ ನಾಯಕರಿಗಳನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಆದರೆ ಈ ಸಂದರ್ಭದಲ್ಲಿ ಶಿಕ್ಷಣ, ಆರೋಗ್ಯ, ಹಾಗೂ ಮೂಲಭೂತ ಸೌಕರ್ಯಗಳ ಕಡೆ ನಾವು ಹೆಚ್ಚಿನ ಗಮನ ಹರಿಸಬೇಕಾಗಿದೆ ವಿನಾಕಾರಣ ಬೇರೆ ವಿಷಯಗಳ ಕುರಿತು ರಾಜಕಾರಣ ಮಾಡಬಾರದು ಅನುಗೋಳ ದಲ್ಲಿ ಛತ್ರಪತಿ ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣಗೊಳ್ಳಬೇಕಾಗಿದ್ದು ಆ ಸಂದರ್ಭದಲ್ಲಿ ಜಿಲ್ಲಾ ಆಡಳಿತ ಮತ್ತು ಮಹಾನಗರ ಪಾಲಿಕೆ ಪ್ರತಿಮೆ ಅನಾವರಣಗೊಳಿಸಲು ಅನುಮತಿ ಇರಲಿಲ್ಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರುಗಳಾದ ಸತೀಶ್ ಜಾರಕಿಹೊಳಿ ಕೂಡ ನಗರದಲ್ಲಿ ಉಪಸ್ಥಿತರಿರಲಿಲ್ಲ ಪ್ರತಿಮೆ ಅನಾವರಣಗೊಳಿಸಬೇಕಾದರೆ ಸರ್ಕಾರಿ ಶಿಷ್ಟಾಚಾರ ಪಾಲನೆಗೊಳ್ಳಬೇಕಾಗಿತ್ತು ಆದರೆ ಸರ್ಕಾರಿ ಶಿಷ್ಟಾಚಾರವನ್ನು ಪಾಲಿಸದೆ ಅನಾವರಣಗೊಂಡಿದ್ದು ಎಷ್ಟು ಸರಿ ? ಮತ್ತು ಕನ್ನಡದ ನೆಲದಲ್ಲಿ ಹೊರಗಿನಿಂದ ಬಂದು ಜೈ ಮಹಾರಾಷ್ಟ್ರ ಅನ್ನುವುದು ಎಷ್ಟರಮಟ್ಟಿಗೆ ಸರಿ ? ಎಂದು ಶಾಸಕ ಸಟ್ ಪ್ರಶ್ನೆ ಮಾಡಿದರು.
ಈ ಕಡೆ ಇತಿಹಾಸ ಪುರುಷರ ಗಳ ಪ್ರತಿಮೆ ಪ್ರತಿಷ್ಠಾನಗೋಸ್ಕರ ಸಚಿವ ಸತೀಶ್ ಜಾರಕಿಹೊಳಿ ಅವರು ಡಿಸಿ ಕಚೇರಿ ಅಭಿವೃದ್ಧಿ ಹಾಗೂ ವೀರ ರಾಣಿ ಕಿತ್ತೂರು ಚೆನ್ನಮ್ಮ ಛತ್ರಪತಿ ಸಂಭಾಜಿ ಮಹಾರಾಜರ ನಗರದ ಪ್ರವೇಶ ದ್ವಾರದಲ್ಲಿ ಕೋಟೆ ಕೆರೆ ಪ್ರದೇಶದಲ್ಲಿ ಬುದ್ಧನ ಪ್ರತಿಮೆ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆಗಳನ್ನು ಪ್ರತಿಷ್ಠಾನ ಮಾಡಲು 200 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕ ಆಸಿಫ್ ರಾಜು ಸೆಟ್ ಹಾಗೂ ಕಾಂಗ್ರೆಸ್ ಯುವ ನಾಯಕ ಅಮನ್ ಸೆಟ್ ಉಪಸ್ಥಿತರಿದ್ದರು.