Ad imageAd image

ಬಿಡದಿಯ ವೇಸ್ಟ್ ಟು ಎನರ್ಜಿ ಘಟಕಕ್ಕೆ ಇಂಧನ ಸಚಿವರ ಭೇಟಿ, ಪರಿಶೀಲನೆ

ratnakar
ಬಿಡದಿಯ ವೇಸ್ಟ್ ಟು ಎನರ್ಜಿ ಘಟಕಕ್ಕೆ ಇಂಧನ ಸಚಿವರ ಭೇಟಿ, ಪರಿಶೀಲನೆ
WhatsApp Group Join Now
Telegram Group Join Now

ರಾಮನಗರ: ರಾಜ್ಯದ ಇಂಧನ ಸಚಿವರಾದ ಕೆ.ಜೆ. ಜಾರ್ಜ್ ಅವರು ಅವರು ಜ. 7ರ ಮಂಗಳವಾರ ಬಿಡದಿಯ ವೇಸ್ಟ್ ಟು ಎನರ್ಜಿ ಘಟಕಕ್ಕೆ ಭೇಟಿ ನೀಡಿ ಘಟಕದ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಡದಿಯ ವೇಸ್ಟ್ ಟು ಎನರ್ಜಿ ಘಟಕ ತಿಂಗಳ ಹಿಂದೆ ಪೂರ್ಣಗೊಂಡಿತ್ತು, ಅದನ್ನು ಸ್ವಾಧೀನಪಡಿಸಿಕೊಂಡಿರಲಿಲ್ಲ, ಅದನ್ನ ನೀವೆ ನಡೆಸಿ ಅದರ ಸಮಸ್ಯೆಗಳಿದ್ದರೆ ತಿಳಿಸಿ ಎಂದು ಘಟಕದವರಿಗೆ ಹೇಳಿದ್ದೆವು, ಅಷ್ಟರಲ್ಲಿ ದುರಾದೃಷ್ಟದಿಂದ ಈ ರೀತಿಯ ಅನಾಹುತ ಸಂಭವಿಸಿದೆ. ಕಾರ್ಮಿಕರಿಗೆ ಸುಟ್ಟಗಾಯಗಳಾಗಿವೆ. ಅವಘಡದ ವಿಚಾರಣೆಗಾಗಿ ಸಮಿತಿಯೊಂದನ್ನು ರಚಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಸದಿಂದ ವಿದ್ಯುತ್ ಉತ್ಪಾದನೆ ಮಾಡುವ ಉಷ್ಣವಿದ್ಯುತ್ ಸ್ಥಾವರದ ಬಾಯ್ಲರ್ ಅನ್ನು ತಾಂತ್ರಿಕ ಪರಿಣತರಿಲ್ಲದೇ ತೆರೆದ ಕಾರಣ ಬೆಂಕಿ ಹಾಗೂ ಬಿಸಿಬೂದಿ ಅಲ್ಲಿದ್ದ ಕಾರ್ಮಿಕರ ಮೇಲೆ ಏಕಾಏಕಿ ಚಿಮ್ಮಿದೆ ಇದರಿಂದಾಗಿ ಇಂತಹ ಅನಾಹುತ ಸಂಭವಿಸಿದೆ ಎಂದರು.

ಇದರಿಂದ ಗಾಯಗೊಂಡಿರುವ ಕಾರ್ಮಿಕರಿಗೆ ಹೆಚ್ಚಿನ ಚಿಕಿತ್ಸೆ ನೀಡುವಂತೆ ಈಗಾಗಲೇ ಆರೋಗ್ಯಾಧಿಕಾರಿಗಳಿಗೆ ತಿಳಿಸಲಾಗಿದೆ. ಚಿಕಿತ್ಸೆಗೆ ಸರ್ಕಾರದಿಂದ ಹಣ ಪಾವತಿಸಲಾಗುವುದು. ಪರಿಹಾರ ವಿತರಣೆಗೆ ಹಾಗೂ ಮುಂದೆ ಇಂತಹ ಅನಾಹುತಗಳು ಆಗದಂತೆ ಘಟಕದ ನಿರ್ದೇಶಕರ ಬಳಿ ಚರ್ಚಿಸಲಾಗುವುದು ಎಂದರು.

ಇಲ್ಲಿ ಸ್ಥಾಪಿಸಿರುವ ವೇಸ್ಟ್ ಟು ಎನರ್ಜಿ ಘಟಕದಿಂದ ವಾಸನೆ ಬರುತ್ತಿದೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವರು, ಈ ಘಟಕದಿಂದ ವಾಸನೆ ಬರುವುದಿಲ್ಲ ಕಸ ತರುವ ಲಾರಿಯಿಂದ ವಾಸನೆ ಬರುತ್ತಿದೆ. ಆದ್ದರಿಂದ ತ್ಯಾಜ್ಯವನ್ನು ಹೊತ್ತು ತರುವ ಲಾರಿಗಳು ತ್ಯಾಜ್ಯವನ್ನು ಮುಚ್ಚಿ ತರಬೇಕು ಎಂದು ತಿಳಿಸಲಾಗಿದೆ ಹಾಗೂ ಕಸ ಸುರಿದು ಹೋಗುವ ಖಾಲಿ ಲಾರಿಯನ್ನು ತಕ್ಷಣ ಅಲ್ಲೇ ಸ್ವಚ್ಛ ಮಾಡಲು ತಿಳಿಸಲಾಗುವುದು. ಇದರಿಂದ ಯಾವುದೇ ವಾಸನೆ ಬರುವುದಿಲ್ಲ ಎಂದು ತಿಳಿಸಿದರು.

ಮಾಗಡಿ ಶಾಸಕರಾದ ಎಚ್.ಸಿ. ಬಾಲಕೃಷ್ಣ, ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಘಟಕದ ಮುಖ್ಯ ಎಂಜಿನಿಯರ್ ಸೂರ್ಯಕಾಂತ್, ಘಟಕದ ಸುಪರಿಟೆಂಡೆAಟ್ ಎಂಜಿನಿಯರ್ ಅನಿತಾ ಸೇರಿದಂತೆ ಘಟಕದ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಹಲವರಿದ್ದರು.

*ರಾಮನಗರ ಜಿಲ್ಲೆಯ ಅಂತಿಮ ಮತದಾರರ ಪಟ್ಟಿ ಬಿಡುಗಡೆ*

*ರಾಮನಗರ, ಜ. 07 (ಕರ್ನಾಟಕ ವಾರ್ತೆ):* ಭಾರತ ಚುನಾವಣಾ ಆಯೋಗವು ರಾಮನಗರ ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯನ್ನು 2025ರ ಜ. 6ರಂದು ಬಿಡುಗಡೆ ಮಾಡಿದೆ. ರಾಮನಗರ ಜಿಲ್ಲೆಯಲ್ಲಿರುವ ನಾಲ್ಕು ವಿಧಾನಸಭಾ ಕ್ಷೇತ್ರಗಳಾದ 182-ಮಾಗಡಿ, 183-ರಾಮನಗರ, 184-ಕನಕಪುರ ಹಾಗೂ 185-ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟಾರೆ 4,53,403 ಪುರುಷ ಮತದಾರರು, 4,74,445 ಮಹಿಳಾ ಮತದಾರರು, 54 ತೃತೀಯ ಲಿಂಗಿ ಮತದಾರರು ಸೇರಿದಂತೆ ಒಟ್ಟಾರೆ 9,27,902 ಮತದಾರರಿದ್ದಾರೆ.

*ವಿಧಾನಸಭಾ ಕ್ಷೇತ್ರವಾರು ಮತದಾರರು*: ಅಂತಿಮ ಮತದಾರರ ಪಟ್ಟಿಯಲ್ಲಿ 182-ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ 1,17,910 ಪುರುಷ ಮತದಾರರು, 1,20,655 ಮಹಿಳಾ ಮತದಾರರು, 19 ತೃತೀಯ ಲಿಂಗಿ ಮತದಾರರಿದ್ದು, ಒಟ್ಟಾರೆ 2,38,584 ಮತದಾರರಿದ್ದಾರೆ, 183-ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ 1,08,793 ಪುರುಷ ಮತದಾರರು, 1,13,626 ಮಹಿಳಾ ಮತದಾರರು, 18 ತೃತೀಯ ಲಿಂಗಿ ಮತದಾರರಿದ್ದು, ಒಟ್ಟಾರೆ 2,22,437 ವ್ಮತದಾರರು, 184-ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ 1,14,371 ಪುರುಷ ಮತದಾರರು, 1,19,260 ಮಹಿಳಾ ಮತದಾರರು ಹಾಗೂ 10 ತೃತೀಯ ಲಿಂಗಿ ಮತದಾರರು ಸೇರಿದಂತೆ ಒಟ್ಟು 2,33,641 ಮತದಾರರಿದ್ದಾರೆ ಹಾಗೂ 185-ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ 1,12,329 ಪುರುಷ ಮತದಾರರು, 1,20,904 ಮಹಿಳಾ ಮತದಾರರು ಹಾಗೂ 7 ತೃತೀಯ ಲಿಂಗಿ ಮತದಾರರು ಸೇರಿದಂತೆ ಒಟ್ಟು 2,33,240 ಮತದಾರರಿದ್ದಾರೆ.

*ಯುವ ಮತದಾರರು:* 182-ಮಾಗಡಿ ವಿಧಾನಸಭಾ ಕ್ಷೇತ್ರದಲ್ಲಿ 1,756 ಪುರುಷ ಮತದಾರರು ಹಾಗೂ 1,473 ಮಹಿಳಾ ಮತದಾರರು ಸೇರಿ ಒಟ್ಟಾರೆ 3,229 ಜನ ಯುವ ಮತದಾರರಿದ್ದಾರೆ.

183-ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ 1,701 ಪುರುಷ ಮತದಾರರು ಹಾಗೂ 1,542 ಮಹಿಳಾ ಮತದಾರರು ಸೇರಿ ಒಟ್ಟಾರೆ 3,243 ಜನ ಯುವ ಮತದಾರರಿದ್ದಾರೆ.

184-ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ 1,746 ಪುರುಷ ಮತದಾರರು ಹಾಗೂ 1,528 ಮಹಿಳಾ ಮತದಾರರು ಸೇರಿ ಒಟ್ಟಾರೆ 3,274 ಜನ ಯುವ ಮತದಾರರಿದ್ದಾರೆ.

185-ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ 2,463 ಪುರುಷ ಮತದಾರರು ಹಾಗೂ 2,372 ಮಹಿಳಾ ಮತದಾರರು ಸೇರಿ ಒಟ್ಟಾರೆ 4,835 ಜನ ಯುವ ಮತದಾರರಿದ್ದಾರೆ. ಒಟ್ಟಾರೆಯಾಗಿ ಜಿಲ್ಲೆಯಲ್ಲಿ 14,581 ಜನ ಯುವ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಅವರು ತಿಳಿಸಿದ್ದಾರೆ.

*10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ*

*ರಾಮನಗರ, ಜ. 07 (ಕರ್ನಾಟಕ ವಾರ್ತೆ)*: ಸ್ವಂತ ಉದ್ಯಮ ಸ್ಥಾಪಿಸಲು ಅನುಸರಿಸಬೇಕಾದ ಕ್ರಮಗಳು, ಸರ್ಕಾರದ ಸ್ವಂತ ಉದ್ಯೋಗ ಯೋಜನೆಗಳು, ಬ್ಯಾಂಕಿನ ವ್ಯವಹಾರ, ಮಾರುಕಟ್ಟೆ ಸಮೀಕ್ಷೆ, ಯೋಜನಾ ವರದಿ ತಯಾರಿಕೆ ಹಾಗೂ ಉದ್ಯಮ ನಿರ್ವಹಣೆ, ಇತ್ಯಾದಿ ವಿಷಯಗಳ ಕುರಿತು ತರಬೇತಿ ನೀಡಲು ಆಸಕ್ತ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಕೌಶಲ್ಯಾಭಿವೃದ್ಧಿ, ಉದ್ಯಮಶೀ¯ತೆ ಹಾಗೂ ಜೀವನೋಪಾಯ ಇಲಾಖೆಯ ಪ್ರಾಯೋಜಕತ್ವದಲ್ಲಿ, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್)ದ ಸ್ವಂತ ಉದ್ಯಮವನ್ನು ಸ್ಥಾಪಿಸಲು ಇಚ್ಚಿಸುವವರಿಗಾಗಿ 10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಜನವರಿ ಮಾಹೆಯಲ್ಲಿ ಚನ್ನಪಟ್ಟಣ ತಾಲ್ಲೂಕು ಪಂಚಾಯ್ತಿಯಲ್ಲಿ ಹಮ್ಮಿಕೊಳ್ಳಲಾಗುವುದು.

18 ವರ್ಷ ದಿಂದ 45 ವರ್ಷದವರಾಗಿರಬೇಕು. ಅರ್ಜಿಯನ್ನು ಜಿಲ್ಲಾ ಕೌಶಲ್ಯಾಭಿವೃಧ್ಧಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ, ನಂ. 208 ಕಂದಾಯ ಭವನ, ಬಿ.ಎಂ ರಸ್ತೆ, ರಾಮನಗರ ಕಚೇರಿಯಲ್ಲಿ ಕಚೇರಿ ವೇಳೆಯಲ್ಲಿ ಪಡೆದು ಜ. 17ರೊಳಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿ, ಜಂಟಿ ನಿರ್ದೇಶಕರ ಕಚೇರಿ, ನಂ. 208 ಕಂದಾಯ ಭವನ, ಬಿ.ಎಂ. ರಸ್ತೆ, ರಾಮನಗರ. ದೂ ಸಂಖ್ಯೆ: 8861944964, 7090299843 ಅಥವಾ 6366093656 ಅನ್ನು ಸಂಪರ್ಕಿಸುವAತೆ ರಾಮನಗರ ಜಿಲ್ಲೆಯ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್)ದ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now
Share This Article