Ad imageAd image

2028 ಕ್ಕೆ ಸತೀಶ್ ಜಾರಕಿಹೊಳಿಯೇ CM ಆಗಲಿ – ಲಖನ್ ಜಾರಕಿಹೊಳಿ

ratnakar
2028 ಕ್ಕೆ ಸತೀಶ್ ಜಾರಕಿಹೊಳಿಯೇ CM ಆಗಲಿ – ಲಖನ್ ಜಾರಕಿಹೊಳಿ
WhatsApp Group Join Now
Telegram Group Join Now

ಬೆಳಗಾವಿ: ಸದ್ಯ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. 2028 ರವರೆಗೆ ಸಿದ್ದರಾಮಯ್ಯ ಸಿಎಂ ಆಗಲಿದ್ದಾರೆ‌. ಮುಂದಿನ ದಿನಗಳಲ್ಲಿ ಸತೀಶ್ ಜಾರಕಿಹೊಳಿ ಸಿಎಂ ಆಗಲಿ. ಸತೀಶ್ ಜಾರಕಿಹೊಳಿ ಸಿಎಂ ಆದರೆ ಸಂತೋಷ‌ ಎಂದು ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಹೇಳಿದ್ದಾರೆ.

ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ” ಉತ್ತರ ಕರ್ನಾಟಕದ ಸದನದಲ್ಲಿ ‌ಚರ್ಚೆ ನಡೆಯುತ್ತಿದೆ.‌ 14 ಜಿಲ್ಲೆಗೆ 50 ಸಾವಿರ ಕೋಟಿ ಬಜೆಟ್ ಘೋಷಣೆ ಮಾಡಬೇಕು. ಉತ್ತರ ಕರ್ನಾಟಕಕ್ಕೆ ವಿಶೇಷ ಪರಿಹಾರ ಘೋಷಣೆ ಮಾಡಿದ್ರೆ ಅನುಕೂಲ ಆಗುತ್ತೆ ” ಎಂದರು.

ಜಿಲ್ಲಾ ವಿಭಜನೆ ವಿಚಾರವಾಗಿ ಮಾತನಾಡಿದ ಅವರು, ಗೋಕಾಕ್ ಜಿಲ್ಲೆ ಬಗ್ಗೆ ತಾಂತ್ರಿಕ ಸಮಸ್ಯೆ ಇದೆ. ವಿಭಜನೆ ಇಲ್ಲ ಎಂದು ಸರ್ಕಾರ ಹೇಳಿದೆ. ಆದರೆ, ಚಿಕ್ಕೋಡಿ, ಬೈಲಹೊಂಗಲ, ಗೋಕಾಕ ಜಿಲ್ಲೆ ಆಗಬೇಕು ಎಂದು ಒತ್ತಾಯಿಸಿದರು.

ಬಿಜೆಪಿಯಲ್ಲಿ ರಮೇಶ ಜಾರಕಿಹೊಳಿ ರೆಬಲ್ ಆಗಿರುವ ವಿಚಾರವಾಗಿ ಮಾತನಾಡಿದ ಅವರು, ಪಕ್ಷ ವಿರೋಧಿ ಅಲ್ಲ, ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಯಮಕನಮರಡಿ ನಾಗನೂರ ಕೆ.ಎಂ. ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ 10 ಸ್ಥಾನಗಳಿಗೆ ಚುನಾವಣೆ ಜರುಗಿ ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ರಮೇಶ ಕತ್ತಿ ಮತ್ತು ಸಚಿವ ಸತೀಶ್‌ ಜಾರಕಿಹೊಳಿ ಬೆಂಬಲಿತ 10 ಜನ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

WhatsApp Group Join Now
Telegram Group Join Now
Share This Article