ಬೆಳಗಾವಿ ನಗರದ ವ್ಯಾಕ್ಸಿನ್ ಡಿಪೋ ಪರಿಸರದಲ್ಲಿ ಹಿರಿಯ ನಾಗರಿಕ ಮನೋರಂಜನ ಕೇಂದ್ರವನ್ನು ಸ್ಥಾಪನೆ ಮಾಡಲಾಗಿದೆ ಹಿರಿಯ ನಾಗರಿಕ ಮನೋರಂಜನ ಕೇಂದ್ರ ವಿಶೇಷವಾಗಿ ಹಿರಿಯ ನಾಗರಿಕರಿಗೆ ಮಾನಸಿಕ ಮತ್ತು ಶಾರೀರಿಕ ದೃಷ್ಟಿಯಿಂದ ಸದೃಢವಾಗಿರಲು ಈ ಉದ್ದೇಶ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಅಭಯ್ ಪಾಟೀಲ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಾಸಕ ಅಭಯ್ ಪಾಟೀಲ್ ಹೊಸ ಹೊಸ ಕಾರ್ಯಕ್ರಮಗಳನ್ನು ನೀಡುವುದರಲ್ಲಿ ನಿಪುನರಾಗಿದ್ದು ಅದರಲ್ಲಿ ಹಿರಿಯ ನಾಗರಿಕರ ಗೋಸ್ಕರ ಮನುರಂಜನ ಕಾರ್ಯಕ್ರಮ ಕೇಂದ್ರವನ್ನು ಸ್ಥಾಪಿಸುವ ಉದ್ದೇಶದಿಂದಾಗಿ ಕಾರ್ಯ ಯೋಜನೆಯನ್ನು ಹಮ್ಮಿಕೊಂಡಿದ್ದರು ನಾಲ್ಕು ವರ್ಷಗಳ ಕಾಲಾವಧಿಯಲ್ಲಿ ಈ ಯೋಜನೆ ಲೋಕಾರ್ಪಣೆಗೆ ಸಿದ್ಧವಾಯಿತು.
ವ್ಯಾಕ್ಸಿನ್ ಡಿಪೋ ಪರಿಸರದಲ್ಲಿ ಹಳೆಯ ಬ್ರಿಟಿಷ್ ಕಾಲಾವಧಿಯ ಕಟ್ಟಡಗಳನ್ನು ನವೀಕರಣ ಮಾಡಲಾಗಿದ್ದು ಅವುಗಳನ್ನು ಜ್ಞಾನ, ಯೋಗ, ಆಟ ಪಾಠಗಳು ಗೋಸ್ಕರ ಈ ಕಟ್ಟಡಗಳನ್ನು ತಯಾರಿಗೋಳಿಸಲಾಗಿದೆ ಹಾಗೂ ಹಿರಿಯ ನಾಗರಿಕರಿಗೆ ಸಂಗೀತ ಕೇಳುವುದಲ್ಲದೆ ಸಂಗೀತ ಉಪಕರಣಗಳನ್ನು ಬೆಳೆಸಿ ತಮ್ಮ ಹವ್ಯಾಸ ಕಲಿಯನ್ನು ಉಜಾಗರಗೊಳಿಸುವ ಅವಕಾಶ ಕೂಡ ಇಲ್ಲಿ ಲಭ್ಯವಿದೆ.
ಕಳೆದು ನಾಲ್ಕು ವರ್ಷಗಳ ಹಿಂದೆ ಈ ಪರಿಸರದಲ್ಲಿ ದಟ್ಟವಾದ ಗಿಡಗಂಟಿಗಳಿದ್ದು ಇಲ್ಲಿ ನಾಗರಿಕರಿಗೆ ಬೆಳಗಿನ ವಿಹಾರ ಮಾಡಲು ಕೂಡ ಅನಾನುಕೂಲವಾಗಿತ್ತು, ಈಗ ಅದು ಒಂದು ಅದ್ಭುತವಾದ ಸೌಂದರ್ಯ ಹಾಗೂ ವಿವಿಧ ಸೌಲಭ್ಯಗಳ ಕೇಂದ್ರ ವಾಗಿದೆ ಇಲ್ಲಿ ಸ್ಥಳೀಯ ಹಿರಿಯ ನಾಗರಿಕರು ಹಿರಿಯ ನಾಗರಿಕ ಮನೋರಂಜನ ಕೇಂದ್ರ ಸ್ಥಾಪಿಸಿ ಕೊಟ್ಟಿದ್ದಕ್ಕೆ ತಮ್ಮ ಹರ್ಷ ವ್ಯಕ್ತಪಡಿಸುವುದಲ್ಲದೆ ಅವರ ಕಾರ್ಯಕ್ಕೆ ಶಭಾಷ್ ಗಿರಿ ನೀಡಿದ್ದಾರೆ.
ಇದು ಶಾಸಕ ಅಭಯ ಪಾಟೀಲ್ ಅವರ ಕನಸಿನ ಯೋಜನೆಯನ್ನು ಸಾಕಾರಗೊಳಿಸಿರುವ ಸಮಾಧಾನ ಕೂಡ ಶಾಸಕ ಅಭಯ್ ಪಟೇಲ್ ಇದೆ
ಈ ಸಂದರ್ಭದಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ಉಪ ಮಹಾಪೌರ ಆನಂದ್ ಪಾಟೀಲ್, ಮಹಾನಗರ ಪಾಲಿಕೆ ಸದಸ್ಯರುಗಳಾದ ಗಿರೀಶ್ ದೊಂಗಡಿ ,ಸ್ಥಳೀಯ ಹಿರಿಯ ನಾಗರಿಕರು ಉಪಸ್ಥಿತರಿದ್ದರು