Ad imageAd image

ಇಡಿ ಪತ್ರ ಮಾಧ್ಯಮ ಸೃಷ್ಟಿ – ಪ್ರಶ್ನೆ ಕೇಳಿದ್ದಕ್ಕೆ ಬೈರತಿ ಸುರೇಶ್‌ ಗರಂ

ratnakar
ಇಡಿ ಪತ್ರ ಮಾಧ್ಯಮ ಸೃಷ್ಟಿ – ಪ್ರಶ್ನೆ ಕೇಳಿದ್ದಕ್ಕೆ ಬೈರತಿ ಸುರೇಶ್‌ ಗರಂ
WhatsApp Group Join Now
Telegram Group Join Now

ಬೆಳಗಾವಿ: ಮುಡಾ ಅಕ್ರಮದ (MUDA Scam) ಬಗ್ಗೆ ಜಾರಿ ನಿರ್ದೇಶನಾಲಯ (ED) ಲೋಕಾಯುಕ್ತಕ್ಕೆ ಬರೆದ ಪತ್ರದ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ (Byrathi Suresh) ಗರಂ ಆಗಿದ್ದಾರೆ.

ಇಡಿ ಪತ್ರದ ಬಳಿಕ ಮಾಧ್ಯಮಗಳ ಕೈಗೆ ಸಿಗದೇ ನಾಪತ್ತೆಯಾಗಿದ್ದ  ಬೆಳಗಾವಿ ಅಧಿವೇಶನದಲ್ಲಿ ಪ್ರಕರಣ ನ್ಯಾಯಾಲಯದಲ್ಲಿದೆ. ನಾನೇನು ನೇಣು ಹಾಕೊಳ್ಳೊಕ್ಕೆ ಆಗುತ್ತಾ? ನಾನು ಯಾರ ಕೈಗೂ ಸಿಗದೇ ಹೋಗಿಲ್ಲ. ನಾನು ಎಲ್ಲಿಯೂ ತಪ್ಪಿಸಿಕೊಂಡು ಹೋಗಿಲ್ಲ. ನಾನು ಎಲ್ಲರಿಗೂ ಸಿಗುತ್ತಿದ್ದೇನೆ ಎಂದು ಬೈರತಿ ಸಮರ್ಥನೆ ನೀಡಿದರು.

ಇಡಿ ಪತ್ರದ ಬಗ್ಗೆ ಕೇಳಿದ್ದಕ್ಕೆ, ಎಲ್ಲವೂ ಸುಳ್ಳು. ನನ್ನ ವಿರುದ್ಧ ವರದಿ ಕೊಟ್ಟಿಲ್ಲ. ಯಾವ ಅಧಿಕಾರಿ 144 ಫೈಲ್ ತಗೆದುಕೊಂಡು ಹೋಗಿದ್ದಾರೆ? ನಾನು ಅಲ್ಲಿಗೆ ಹೋಗಿದ್ದೆ ಅಂತ ಯಾರು ಹೇಳಿದ್ದಾರೆ? ಮುಡಾ ಅಕ್ರಮದಲ್ಲಿ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿ ಕೆಂಡಾಮಂಡಲವಾದರು

 

WhatsApp Group Join Now
Telegram Group Join Now
Share This Article