ರಾಜ್ಯ ಬಿಜೆಪಿಯಲ್ಲಿ ಉಂಟಾಗಿರೋ ಆಂತರಿಕ ಕಲಹಕ್ಕೆ ಇಂದು ಬ್ರೇಕ್ ಬೀಳೋ ಸಾಧ್ಯತೆಯಿದೆ. ವಿಜಯಪುರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಅವರ ಟೀಮ್ ಈಗಾಗಲೇ ದೆಹಲಿಯಲ್ಲಿ ಒಂದುಗೂಡಿದ್ದಾರೆ. ಬಿಜೆಪಿಯ ರಮೇಶ್ ಜಾರಕಿಹೊಳಿ, ಕುಮಾರ ಬಗಾರಪ್ಪ ಸೇರಿ ಹಲವರು ಸಭೆಯನ್ನು ಮಾಡುತ್ತಿದ್ದಾರೆ.
ಜೆಪಿಸಿ ಬಿಜೆಪಿ ಶಿಸ್ತು ಪಾಲನಾ ಸಮಿತಿ ಯತ್ನಾಳ್ಗೆ ಶೋಕಾಸ್ ನೋಟಸ್ ನೀಡಿತ್ತು. ಇಂತಿಷ್ಟು ದಿನಗಳವೊಳಗೆ ಉತ್ತರಿಸುವಂತೆ ತಿಳಿಸಲಾಗಿದೆ. ಶೋಕಾಸ್ ನೋಟಿಸ್ ಬಂದರೂ ದೆಹಲಿಗೆ ತಮ್ಮ ಟೀಮ್ನೊಂದಿಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೆರಳಿದ್ದಾರೆ. ದೆಹಲಿಯಲ್ಲಿ ಬಿಜೆಪಿಯ ಹಿರಿಯ ನಾಯಕರ ಭೇಟಿ ಮಾಡಿ ರಾಜ್ಯ ಬಿಜೆಪಿಯ ಪರಿಸ್ಥಿತಿ ಹಾಗೂ ರಾಜ್ಯ ರಾಜಕೀಯದ ಬಗ್ಗೆ ವಿವರಣೆ ನೀಡಬಹುದು ಎನ್ನಲಾಗಿದೆ.
ಕಳೆದವಾರ ದೆಹಲಿಯಿಂದ ಕರೆ ಬಂದರೂ ನಾನು ಹೋಗಲ್ಲ ನಮ್ಮ ಟೀಮ್ನೊಂದಿಗೆ ಬಂದು ಎಲ್ಲ ವಿವರಣೆ ನೀಡುತ್ತನೆಂದು ಹೇಳಿಕೆ ನೀಡಿದ್ದರು. ಈದೀಗ ಹೆದಲಿಗೆ ತೆರಳಿರೋ ಯತ್ನಾಳ್ ಎಂಡ್ ಟೀಮ್ ದೆಹಲಿ ರಸಹ್ಯ ಸಭೆ ಮಾಡಲಾಗಿದೆ . ಹೈಕಮಾಂಡ್ ಮುಂದೆ ಯಾವೆಲ್ಲಾ ಅಂಶಗಳನ್ನು ಉಲ್ಲೇಖ ಮಾಡಬೇಕು. ಉಪ ಚುನಾವಣೆ ಸೋಲು ಹೇಗಾಯಿತು? ರಾಜ್ಯಾಧ್ಯಕ್ಷರ ಮತ್ತು ಇತರ ನಾಯಕರ ಒಡನಾಟ ಹೇಗಿದೆ ಎಂಬುವುದರ ಬಗ್ಗೆ ಚ್ಚೆ ನಡೆಸಬಹದು ಎನ್ನಲಾಗಿದೆ.