ಕಲಬುರಗಿ: ಸನ್ನಡತೆ ಆಧಾರದ (Good Conduct) ಮೇಲೆ ಜೀವಾವಧಿ ಶಿಕ್ಷೆಗೆ (Life-Term Prisoners) ಗುರಿಯಾಗಿದ್ದ ಆರು ಜನ ಖೈದಿಗಳು ಬಿಡುಗಡೆಯಾಗಿದ್ದಾರೆ.
ಸಾಬಣ್ಣ ಬನಾರ್, ಖಾಜಾಸಾಬ್, ಶಿವಶಂಕರ್, ಬಸವರಾಜ, ರವಿ, ಬೀರಪ್ಪ ಹಾಗೂ ಅಬೀದಾ ಬೇಗಂ ಕಲಬುರಗಿ ಸೆಂಟ್ರಲ್ ಜೈಲಿನಿಂದ (Kalaburagi Central Jail) ಬಿಡುಗಡೆಯಾಗಿದ್ದಾರೆ.
ಜೈಲಿನಲ್ಲಿ ಉತ್ತಮ ನಡತೆ ತೋರಿದ ಹಿನ್ನೆಲೆಯಲ್ಲಿ ಕಾರಾಗೃಹ ಇಲಾಖೆ ಅವಧಿ ಪೂರ್ವ ಬಿಡುಗಡೆ ಮಾಡಿದೆ. ಕಾರಾಗೃಹ ಡಿಜಿ ನಿರ್ದೇಶನದ ಮೇರೆಗೆ ಕಲಬುರಗಿ ಜೈಲು ಅಧೀಕ್ಷಕಿ ಆರ್. ಅನಿತಾ ಬಿಡುಗಡೆಗೊಳಿಸಿ ಆದೇಶಿಸಿದ್ದಾರೆ.