ಬಾಗಲಕೋಟೆ : ಬೌದ್ಧಿಕ ಮಟ್ಟದ ಬೆಳವಣಿಗೆ ಮತ್ತು ನಾಯಕತ್ವದ ಗುಣಗಳನ್ನು ಕಲಿಯಲು ಎನ್.ಎಸ್.ಎಸ್ ಶಿಬಿರಗಳು ವಿದ್ಯಾರ್ಥಿಗಳಿಗೆ ಅತ್ಯವಶ್ಯಕ ಎಂದು ಬಾಗಲಕೋಟೆಯ ತೋಟಗಾರಿಕೆ ವಿಶ್ವ ವಿದ್ಯಾಲಯದ ಎನ್.ಎಸ್.ಎಸ್ ಸಂಯೋಜಕರಾದ ಡಾ. ವಸಂತ್ ಗಾಣಿಗೇರ ಹೇಳಿದರು.
ನಗರದ ಬಸವೇಶ್ವರ ಪದವಿ ಪೂರ್ವ ಕಲಾ ಮಹಾವಿದ್ಯಾಲಯದಿಂದ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಮುಚಖಂಡಿಯಲ್ಲಿ ಆಯೋಜಿಸಿದ್ದ ವಾರ್ಷಿಕ ವಿಶೇಷ ಶಿಬಿರವನ್ನು ಉಧ್ಘಾಟಿಸಿ ಅವರು ಮಾತನಾಡಿ ಎನ್.ಎಸ್.ಎಸ್ ಶಿಬಿರ ವಿದ್ಯಾರ್ಥಿಗಳಿಗೆ ಜ್ಞಾನವನ್ನು ಕಲ್ಪಿಸುವ ವೇದಿಕೆ. ಶಿಬಿರಗಳಿಂದ ವಿದ್ಯಾರ್ಥಿಗಳಿಗೆ ಸಂವಹನ ಕೌಶಲ ಬೆಳೆಯುತ್ತವೆ . ವಿದ್ಯಾರ್ಥಿಯಾದವನು ಒಂದು ಗುರಿಯನ್ನು ನಿಶ್ಚಿತವಾಗಿ ಇಟ್ಟುಕೊಂಡರೆ ಮಾತ್ರ ನಾವು ಸಾಧನೆ ಮಾಡಬಲ್ಲೆವು. ನಿರ್ದಿಷ್ಟ ಗುರಿಯತ್ತ ಸಾಗಿ ಕ್ರಿಯಾಶೀಲರಾಗಿ ಎಂದರು.
ಬಿವ್ಹಿವ್ಹಿ ಸಂಘದ ಸದಸ್ಯರಾದ ಪ್ರಭುಸ್ವಾಮಿ ಸರಗಣಾಚಾರಿ ಮಾತಾನಾಡಿ ಗಾಂಧೀಜಿಯವರು ಕನಸಿನ ರಾಮರಾಜ್ಯವಾಗಬೇಕಾದರೆ ಹಳ್ಳಿಗಳ ಉದ್ದಾರ ಯುವಜನತೆ ಉದ್ದೇಶವಾಗಬೇಕು ಅದು ಇಂತಹ ರಾಷ್ಟಿçÃಯ ಸೇವಾ ಯೋಜನೆಯ ಶಿಬಿರದಿಂದ ಸಾಧ್ಯ ಎಂದರು.
ಪ್ರಾಚಾರ್ಯರಾದ ಎಸ್. ಆರ್. ಮೂಗನೂರಮಠ ಅವರು ಮಾತನಾಡಿ ಸ್ವಯಂ ಸೇವಕರು ನಿಸ್ವಾರ್ಥ ಮನೋಭಾವನೆಯಿಂದ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಉಜ್ವಲ ಭಾರತ ನಿರ್ಮಾಣ ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಸಂಚಾಲಕರಾದ ಡಾ. ಆರ್.ಎಮ್.ಬೆಣ್ಣೂರ,ಪ್ರಾಧ್ಯಾಪಕರಾದ ಆರ್.ಆರ್. ಅರಶಿಣಗೋಡಿ, ಎಸ್. ಎಮ್. ಗೌಡರ, ವಿ. ಆರ್.ಹಿರೇಮಠ, ಶ್ರೇಯಾ ಜೋರಾಪುರ ಡಾ.ಎಮ್.ಎಚ್.ವಡ್ಡರ,ಸಂತೋಷ ಸುಭಂಜಿ ಸೇರಿದಂತೆ ಪ್ರಾಧ್ಯಾಪಕವರ್ಗ ಮತ್ತು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.