Ad imageAd image

ಬೆಳಗಾವಿ ಜಿಲ್ಲಾ ಆಡಳಿತ ವತಿಯಿಂದ ಮಹಾನಗರ ಪಾಲಿಕೆ ಮಹಾಪೌರರಿಗೆ ಅಗೌರವ

ratnakar
ಬೆಳಗಾವಿ ಜಿಲ್ಲಾ ಆಡಳಿತ ವತಿಯಿಂದ ಮಹಾನಗರ ಪಾಲಿಕೆ ಮಹಾಪೌರರಿಗೆ ಅಗೌರವ
WhatsApp Group Join Now
Telegram Group Join Now

ಬೆಳಗಾವಿ ಜಿಲ್ಲಾ ಆಡಳಿತ ಮಹಾನಗರ ಪಾಲಿಕೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಭಾರತ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರರಾದ ಸವಿತಾ ಕಾಂಬಳೆ ಅವರಿಗೆ ಕಾರ್ಯಕ್ರಮದ ಆಯೋಜಕರಿಂದ ಅವಮಾನ ಆಗಿರುವ ಘಟನೆ ನಡೆದಿದೆ.

ಬೆಳಗಾವಿ ಜಿಲ್ಲಾ ಆಡಳಿತ ಹಾಗೂ ಮಹಾನಗರ ಪಾಲಿಕೆ ಸಮಾಜ ಕಲ್ಯಾಣ ಇಲಾಖೆ ಬೆಳಗಾವಿ ವತಿಯಿಂದ ಆಯೋಜಿತಗೊಂಡಿರುವ ಕಾರ್ಯಕ್ರಮದಲ್ಲಿ ಸರ್ಕಾರಿ ಶಿಷ್ಟಾಚಾರ ಪಾಲನೆಯಾಗದಿರುವುದು ವಿಷಾದನೀಯ ಎಂದು ಸ್ಥಳೀಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಘಟನೆಯ ವಿವರ ಸಮಾಜ:
ವಿವಿಧ ಗಣ್ಯರಿಗೆ ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಜೊತೆಗೆ ಮಹಾನಗರ ಪಾಲಿಕೆ ಸದಸ್ಯರುಗಳಿಗೆ ಮತ್ತು ಕಾರ್ಯಕ್ರಮದ ಗೌರ್ವಾನ್ವಿತ ಅತಿಥಿಗಳಿಗೆ ಜಿಲ್ಲಾ ಆಡಳಿತದಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಆದರೆ, ಎಲ್ಲರಿಗೂ ಸನ್ಮಾನ ಮಾಡಿದ ಜಿಲ್ಲಾಡಳಿತ ಬೆಳಗಾವಿ ಮಹಾನಗರ ಪಾಲಿಕೆ ಮಹಾಪೌರಾದ ಸವಿತಾ ಕಾಂಬ್ಳಿ ಅವರನ್ನು ಕಡೆಗಣಿಸಿದೆ‌. ಇದು ಉಪಸ್ಥಿತಿ ಇದ್ದ ಜನರಿಗೆ ಆಕ್ರೋಶಕ್ಕೆ ಕಾರಣವಾಯಿತು ಇದನ್ನು ಪ್ರತಿಭಟಿಸಿದ ನಗರಸೇವಕ ಸಂದೀಪ್ ಜರ್ಗಿಹಾಳ ಅವರು ಆಯೋಜಕರಾದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸ್ಥಳದಲ್ಲಿ ತರಾಟೆ ತೆಗೆದುಕೊಂಡರು.

ಅಧಿಕಾರಿಗಳು ಸಮಾಧಾನಪಡಿಸಲು ಹಾಗೂ ಸಮಜಾಯಿಸಿ ನೀಡಲು ಹೋದರು ಕೂಡ ಮಹಾನಗರ ಪಾಲಿಕೆ ಸದಸ್ಯರುಗಳು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಬೆಳಗಾವಿ ಮಹಾನಗರ ಪಾಲಿಕೆ ಮಹಾಪೌರರು ತನಗೆ ಅಗೌರವ ತೋರಿರುವದರಿಂದ ಮನನೊಂದು ಅಲ್ಲಿಂದ ಹೊರಟು ಹೋದರು.

ಅವರ ಜೊತೆಗೆ ಮಹಾನಗರ ಪಾಲಿಕೆ ಸದಸ್ಯರುಗಳಾದ ಸಂದೀಪ್ ಜರ್ಗಿಹಾಳ, ವೀಣಾ ಬಿಜಾಪುರ್, ಗಿರೀಶ್ ದೊಂಗಡಿ, ಶ್ರೀಶೈಲ್ ಕಾಂಬಳೆ ಮತ್ತು ಶ್ರೇಯಸ್ ನಾಡಿ ಮಹಾಪೌರರ ಜೊತೆ ಕಾರ್ಯಕ್ರಮದಿಂದ ಹೊರಟು ಹೋದರು. ಜಿಲ್ಲಾ ಆಡಳಿತ ಹಾಗೂ ಕಾರ್ಯಕ್ರಮದ ಆಯೋಜಕರು ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರಾದ ಸವಿತಾ ಕಾಂಬ್ಳೆ ಒಬ್ಬ ದಲಿತ ಮಹಿಳೆಯನ್ನು ಅವಮಾನಿಸಿರುವುದು ಉಪಸ್ಥಿತರಿದ್ದ ಜನರಿಗೆ ಬೇಸರ ಹಾಗೂ ಆಕ್ರೋಶವಾಗಿದೆ ಎಂದು ಉಪಸ್ಥಿತಿದ್ದ ಜನರು ಕಾರ್ಯಕ್ರಮದ ಆಯೋಜಕರ ಕುರಿತು ತಮ್ಮ ಆಕ್ರೋಶ ಹೊರಹಾಕಿದರು.

WhatsApp Group Join Now
Telegram Group Join Now
Share This Article