Ad imageAd image

ಜಿಲ್ಲಾಡಳಿತದಿಂದ ಸಂವಿಧಾನ ದಿನಾಚರಣೆ

ratnakar
ಜಿಲ್ಲಾಡಳಿತದಿಂದ ಸಂವಿಧಾನ ದಿನಾಚರಣೆ
WhatsApp Group Join Now
Telegram Group Join Now

ಬೆಳಗಾವಿ: ಜಿಲ್ಲಾ ಆಡಳಿತದ ವತಿಯಿಂದ ಭಾರತ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ನಗರದ ಭಾರತರತ್ನ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಉದ್ಯಾನವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನು ಉತ್ತರ ಮತಕ್ಷೇತ್ರದ ಶಾಸಕ ಆಸೀಫ್ (ರಾಜು )ಸೆಟ್ ಉದ್ಘಾಟಿಸಿ ಮಾತನಾಡಿದರು. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶ ಸ್ವತಂತ್ರವಾದ ನಂತರ ಪ್ರತಿಯೊಬ್ಬರಿಗೆ ಮೂಲಭೂತ ಹಕ್ಕುಗಳನ್ನು ಸಂವಿಧಾನದ ಮೂಲಕ ನೀಡಿದ್ದಾರೆ. ಸಂವಿಧಾನ ನಮಗೆ ಸಾಮಾಜಿಕ ನ್ಯಾಯ ಹಾಗೂ ಶಿಕ್ಷಣದ ಅಧಿಕಾರ ಧಾರ್ಮಿಕ ಹಾಗೂ ಮೂಲಭೂತ ಅಧಿಕಾರವನ್ನು ನೀಡುತ್ತದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೀತಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಅವರ ಜಯಂತಿ ಪುಣ್ಯತಿಥಿ ಸಂವಿಧಾನದ ದಿನಾಚರಣೆ ನಿಮಿತ್ತ ನಾವು ಗೌರವ ನೀಡುತ್ತೇವೆ ಆದರೆ ಮರುದಿನ ನಾವು ಅವರನ್ನು ಮರೆಯುತ್ತೇವೆ ಅವರ ಪರಿಶ್ರಮದಿಂದ ಇಂದು ನಾವು ಗೌರವ ಹಾಗೂ ಸಮಾನತೆಯಿಂದ ಬದುಕುತ್ತಿದ್ದೇವೆ. ಅವರ ಹೆಸರಿನಲ್ಲಿ ಸಿಗುತ್ತಿರುವ ಕೆಲಸ ಕಾರ್ಯಗಳನ್ನು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿಶ್ರಮ ಇದೆ ಅದನ್ನು ನಾವು ನೆನಪಿಸಿಕೊಳ್ಳುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ನಾವು ಸಂವಿಧಾನವನ್ನು ಸಂರಕ್ಷಿಸಬೇಕು ಮತ್ತು ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸಬೇಕು ಎಂದು ಕರೆ ಕೊಟ್ಟರು ಹಾಗೂ ಡಾಕ್ಟರ್ ಚಂದ್ರಕಾಂತ್ ವಾಗುಮೊರೆ ಉಪನ್ಯಾಸಕರು ಸಂವಿಧಾನದ ಕುರಿತು ಮತ್ತು ಐತಿಹಾಸಿಕ ಘಟನೆಗಳ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಆಸಿಫ್ (ರಾಜು )ಸೆಟ್, ಬೆಳಗಾವಿ ಮಹಾನಗರ ಪಾಲಿಕೆ ಮಹಾಪೌರು ಸವಿತಾ ಕಾಂಬಳೆ, ಮಹಾನಗರ ಪಾಲಿಕೆಯ ಆಡಳಿತ ಪಕ್ಷದ ನಾಯಕ ಗಿರೀಶ್ ದೊಂಗಡಿ, ನಗರಸೇವಕರುಗಳಾದಂತ ಶ್ರೇಯಸ್ ನಕಾಡಿ, ಸಂದೀಪ್ ಜೇರಿಗೆಹಾಳ್ ವೀಣಾ ಬಿಜಾಪುರ, ಶ್ರೀಶೈಲ್ ಕಾಂಬ್ಳೆ ,ಸಾಮಾಜಿಕ ಕಾರ್ಯಕರ್ತರಾದ ಶಿವಾಜಿ ಕಾಂಗಣೆಕರ್ ಬೆಳಗಾವಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ರಾಹುಲ್ ಸಿಂಧೆ ಡಾ.ಚಂದ್ರಕಾಂತ್ ವಾಘ್ಮೋರೆ ಉಪನ್ಯಾಸಕರು ಹಾಗೂ ಸಮುದಾಯದ ಮುಖಂಡರುಗಳು ಶಾಲಾ ವಿದ್ಯಾರ್ಥಿಗಳು ಮುಂತಾದವರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article