Ad imageAd image

ಕಲಬುರಗಿ ಜಿಮ್ಸ್​ ಆಸ್ಪತ್ರೆಯಲ್ಲಿನ ಗಂಡು ಮಗು ಅಪಹರಣ

ratnakar
ಕಲಬುರಗಿ ಜಿಮ್ಸ್​ ಆಸ್ಪತ್ರೆಯಲ್ಲಿನ ಗಂಡು ಮಗು ಅಪಹರಣ
WhatsApp Group Join Now
Telegram Group Join Now

ಕಲಬುರಗಿ: ಜಿಮ್ಸ್ ಆಸ್ಪತ್ರೆಯಲ್ಲಿನ (GIMS) ಒಂದು ದಿನದ ಗಂಡು ಮಗುವನ್ನು ನರ್ಸ್ ವೇಷದಲ್ಲಿ ಬಂದ ಇಬ್ಬರು ಮಹಿಳೆಯರು ಅಪಹರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದ ನಿವಾಸಿಯಾಗಿರುವ ಕಸ್ತೂರಿ ಎಂಬುವರು ಹೆರಿಗೆ ನೋವಿನಿಂದ ಜಿಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದರು.

ಸೋಮವಾರ (ನ.25) ನಸುಕಿನ ಜಾವ 4 ಗಂಟೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಸಂಜೆ ನರ್ಸ್​ ವೇಷದಲ್ಲಿ ಸಂಪೂರ್ಣ ಮುಖ ಮುಚ್ಚಿಕೊಂಡು ಬಂದಿದ್ದ ಇಬ್ಬರು ಮಹಿಳೆಯರು “ರಕ್ತ ತಪಾಸಣೆ ಮಾಡಬೇಕು ಮಗು ಕರೆದುಕೊಂಡು ಬನ್ನಿ” ಎಂದು ಹೇಳಿದ್ದರು.

 

ಕಲಬುರಗಿ ಜಿಮ್ಸ್​ ಆಸ್ಪತ್ರೆಯಲ್ಲಿನ ಗಂಡು ಮಗು ಅಪಹರಣ

ಕಲಬುರಗಿಯ ಜಿಮ್ಸ್ ಆಸ್ಪತ್ರೆಗೆ ನರ್ಸ್ ವೇಷದಲ್ಲಿ ಬಂದ ಇಬ್ಬರು ಮಹಿಳೆಯರು ಒಂದು ದಿನದ ಗಂಡು ಮಗುವನ್ನು ಅಪಹರಿಸಿದ್ದಾರೆ.ರಕ್ತ ತಪಾಸಣೆ ಎಂದು ಹೇಳಿ ಮಹಿಳೆಯರು ಮಗುವನ್ನು ಕರೆದೊಯ್ದು ಪರಾರಿಯಾಗಿದ್ದಾರೆ. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಕಲಬುರಗಿ ಜಿಮ್ಸ್​ ಆಸ್ಪತ್ರೆಯಲ್ಲಿನ ಗಂಡು ಮಗು ಅಪಹರಣ
ಜಿಮ್ಸ್​ ಆಸ್ಪತ್ರೆಗೆ ಸಚಿವ ಭೇಟಿ

Follow us

ದತ್ತಾತ್ರೇಯ ಪಾಟೀಲ, ಕಲಬುರಗಿ
 | Updated By: ವಿವೇಕ ಬಿರಾದಾರUpdated on: Nov 26, 2024 | 10:12 AM

ಕಲಬುರಗಿ, ನವೆಂಬರ್​ 26: ಜಿಮ್ಸ್ ಆಸ್ಪತ್ರೆಯಲ್ಲಿನ (GIMS) ಒಂದು ದಿನದ ಗಂಡು ಮಗುವನ್ನು ನರ್ಸ್ ವೇಷದಲ್ಲಿ ಬಂದ ಇಬ್ಬರು ಮಹಿಳೆಯರು ಅಪಹರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಚಿತ್ತಾಪುರ (Chittapur) ತಾಲೂಕಿನ ರಾವೂರ ಗ್ರಾಮದ ನಿವಾಸಿಯಾಗಿರುವ ಕಸ್ತೂರಿ ಎಂಬುವರು ಹೆರಿಗೆ ನೋವಿನಿಂದ ಜಿಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದರು.

ಸೋಮವಾರ (ನ.25) ನಸುಕಿನ ಜಾವ 4 ಗಂಟೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಸಂಜೆ ನರ್ಸ್​ ವೇಷದಲ್ಲಿ ಸಂಪೂರ್ಣ ಮುಖ ಮುಚ್ಚಿಕೊಂಡು ಬಂದಿದ್ದ ಇಬ್ಬರು ಮಹಿಳೆಯರು “ರಕ್ತ ತಪಾಸಣೆ ಮಾಡಬೇಕು ಮಗು ಕರೆದುಕೊಂಡು ಬನ್ನಿ” ಎಂದು ಹೇಳಿದ್ದರು.

ಇದನ್ನೂ ಓದಿ: ಶಾಸಕ ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ಬಂದ್: ರೈತರ ನೆರವಿಗೆ ಧಾವಿಸಿದ ಕಲಬುರಗಿ ಡಿಸಿ

ಹೀಗಾಗಿ, ಕಸ್ತೂರಿ ಅವರ ಸಂಬಂಧಿ ರಕ್ತ ತಪಾಸಣೆಗಾಗಿ ಮಗುವನ್ನು ತೆಗೆದುಕೊಂಡು ಹೋಗಿದ್ದರು. ಈ ವೇಳೆ ಮಹಿಳೆಯರು ಮಗುವನ್ನು ನಮಗೆ ಕೊಡಿ ಅಂತ ಹೇಳಿದ್ದಾರೆ. ನಂತರ, ಇಬ್ಬರು ಮಹಿಳೆಯರು ಮಗುವನ್ನು ಎತ್ತಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಹೆತ್ತ ಮಗುವನ್ನು ಕಳೆದುಕೊಂಡು ತಾಯಿ‌ ಕಸ್ತೂರಿ ಕಣ್ಣೀರಿಡುತ್ತಿದ್ದಾರೆ. ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಗು ಕಳ್ಳತನವಾದ ವಿಚಾರ ತಿಳಿಯುತ್ತಿದ್ದಂತೆ ಕಲಬುರಗಿಯ ಜಿಮ್ಸ್​ ಆಸ್ಪತ್ರೆಗೆ ಸಚಿವ ಡಾ.ಶರಣಪ್ರಕಾಶ್ ಪಾಟೀಲ್‌ ಭೇಟಿ‌ ನೀಡಿದರು. ಮಗುವಿನ ತಾಯಿ ಮತ್ತು ಸಂಬಂಧಿಕರ ಜೊತೆ ಮಾತನಾಡಿದರು. ಆಸ್ಪತ್ರೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

 

WhatsApp Group Join Now
Telegram Group Join Now
Share This Article