Ad imageAd image

ತಂಬಾಕು ಸೇವನೆಯು ದುಷ್ಪರಿಣಾಮ ಬಿರುವುದು, ಜಾಗೃತಿ ಅವಶ್ಯ: ಪ್ರಾ.ಮನೋಜ ಕಟಗೇರಿ

ratnakar
ತಂಬಾಕು ಸೇವನೆಯು ದುಷ್ಪರಿಣಾಮ ಬಿರುವುದು, ಜಾಗೃತಿ ಅವಶ್ಯ: ಪ್ರಾ.ಮನೋಜ ಕಟಗೇರಿ
WhatsApp Group Join Now
Telegram Group Join Now

ಚಡಚಣ: ತಂಬಾಕು ಸೇವೆನೆಯಿಂದ ಜನರು ಕ್ಯಾನ್ಸರನಂತಹ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದು ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವದು ಅವಶ್ಯವಾಗಿದೆ ಎಂದು ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಮನೋಜ ಕಟಗೇರಿ ಹೇಳಿದರು

ಸಂಗಮೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ ಮತ್ತು ಆರಕ್ಷಕ ಠಾಣೆ ಚಡಚಣ ಇವರು ಸಂಯುಕ್ತ ಆಶ್ರಯದಲ್ಲಿ ನಡೆದ ಜಾಗ್ರತಿ ಜಾಥಾವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದು ಪ್ರತಿ ಕುಟುಂಬಗಳಲ್ಲಿ ತಂಬಾಕು, ಗುಟ್ಕಾ ಮತ್ತು ಸಿಗರೇಟ ಸೇದವ ಜನರಿದ್ದು, ಅವರು ತಮಗೆ ಗೊತ್ತಿಲ್ಲದಂತೆ ಈ ಮಾರಕ ರೋಗಕ್ಕೆ ತುತ್ತಾಗುತ್ತಿದ್ದಾರೆ. ಜಗತ್ತಿನಲ್ಲಿ ಪ್ರತಿ ವರ್ಷ ಸುಮಾರು 80 ಲಕ್ಷ ಮತ್ತು ಪ್ರತಿ ದಿನ 22 ಸಾವಿರ ಜನ ಈ ಮಾರಕ ತಂಬಾಕು ಸೇವನೆಯಿಂದ ತಮ್ಮ ಜೀವ ಕಳೆದುಕೊಳ್ಳುತ್ತಿದ್ದಾರೆ.

ಆದ್ದರಿಂದ ವಿದ್ಯಾರ್ಥಿಗಳು ತಮ್ಮ ಕುಟುಂಬ ಮತ್ತು ನೆರೆ ಹೊರೆಯಲ್ಲಿ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಬೇಕೆಂದು ಹೇಳಿದರು.

ಚಡಚಣದ ಪ್ರಮುಖ ಸ್ಥಳಗಳಲ್ಲಿ ಸಂಚರಿಸಿದ ಜಾಥಾದಲ್ಲಿ సుమారు 800 ವಿದ್ಯಾರ್ಥಿಗಳು ತಂಬಾಕು ವಿರೋಧಿ ಘೋಷಣೆಗಳನ್ನು ಕೂಗಿ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಪ್ರಯತ್ನ ಮಾಡಿದರು.

ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸಹಾಯಕ ಸಬ್ ಇನಿಸ್ಪೆಕ್ಷರಗಳು, ಉಪನ್ಯಾಸಕರುಗಳು ಮತ್ತು ಸಿಬ್ಬಂದಿ ಹಾಜರಿದ್ದರು.

WhatsApp Group Join Now
Telegram Group Join Now
Share This Article