Join WhatsApp | Join Telegram | Twitter | Facebook
___________________________________________________
Website Designed By | KhushiHost | Latest Version 8.1 | Need A Similar Website? Contact Us Today: +91 9060329333, 9886068444 | [email protected] | www.khushihost.com| Proudly Hosted By KhushiHost | Speed And Performance | 10 vCPU | 60 GB RAM | Powerful Cloud VPS Server |
ಬೆಂಗಳೂರು: ಬಿಪಿಎಲ್ (ಬಿಪಿಎಲ್ ಕಾರ್ಡ್) ಹಾಗೂ ಎಪಿಎಲ್ (ಎಪಿಎಲ್ ಕಾರ್ಡ್ )ಯಾವ ಕಾರ್ಡ್ ರದ್ದಾಗಿಲ್ಲ. ಈ ಬಗ್ಗೆ ಯಾರೂ ಭಯ ಪಡುವುದು ಬೇಡ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ (ಕೆ.ಎಚ್. ಮುನಿಯಪ್ಪ) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಅವರಿದ್ದಾರೆ. ಈ ವೇಳೆ, 20-25% ಅರ್ಹರಲ್ಲದವರು ಬಿಪಿಎಲ್ಗೆ ಸೇರಿದ್ದಾರೆ. ಬಡವರಲ್ಲದವರು ಹಾಗೂ ಅರ್ಹರಲ್ಲದವರೂ ಕೂಡ ಇದರಲ್ಲಿ ಇದ್ದಾರೆ. 80% ರಾಜ್ಯದಲ್ಲಿ ಬಡವರ ಪ್ರಮಾಣ ಇದೆ. ಇದು ಸಾಧ್ಯವಾ? ಕರ್ನಾಟಕ ರಾಜ್ಯದಲ್ಲಿ 80% ಬಡವರಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.
ಯಾವುದೇ ಕಾರಣಕ್ಕೂ ಬಿಪಿಎಲ್ ರದ್ದು. ಇದಕ್ಕೆ ರಾಜಕೀಯ ಬೆರೆಸಿ ದೊಡ್ಡ ಗದ್ದಲ ಮಾಡ್ತಿದ್ದಾರೆ. ಯಾರು ಬಡತನ ರೇಖೆಗಿಂತ ಕೆಳಗಿದ್ದಾರೆ, ಯಾರು ಮೇಲಿದ್ದಾರೆ ಸತ್ಯವಾದ ಮಾಹಿತಿ ಹೊರಗೆ ಬಿಡುತ್ತೇನೆ. ಬಿಜೆಪಿಯವರು (ಬಿಜೆಪಿ) ಸುಮ್ಮನೆ ತರಲೆ ಮಾಡ್ತಿದ್ದಾರೆ. ಬಿಪಿಎಲ್ನವರು ಯಾರೂ ಕೂಡ ಭಯಪಡಬೇಕಾಗಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ನಿಜವಾದ ಬಿಪಿಎಲ್ನವರಿಗೆ ಯಾರಿಗೂ ತೊಂದರೆ ಆಗುವುದಿಲ್ಲ. ಅಕಸ್ಮಾತ್ ಅರ್ಹರಿದ್ದು ಬಿಪಿಎಲ್ ನಿಂದ ಕೈ ಬಿಟ್ಟರೆ, ಅಂತವರಿಗೆ ಮತ್ತೆ ಬಿಪಿಎಲ್ ಕಾರ್ಡ್ ಸಿಗುವ ವ್ಯವಸ್ಥೆ ಇರುತ್ತದೆ. 15-20 ದಿನಗಳಲ್ಲಿ ಸಂಪೂರ್ಣ ಪರಿಹಾರವಾಗುತ್ತದೆ. ಈ ಬಗ್ಗೆ ಬುಧವಾರ ಮಾತಾಡುತ್ತೇನೆ. ಈ ಬಗ್ಗೆ ಅಂಕಿ ಅಂಶ ಕೊಡುತ್ತೇನೆ. ಹೊಸ ಕಾರ್ಡ್ ಕೂಡ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
Sign in to your account