Ad imageAd image

ಪ್ರೇಮಿ ಮದುವೆಗೆ ನಿರಾಕರಿಸಿದ ಆರೋಪ- ಯುವತಿ ಆತ್ಮಹತ್ಯೆಗೆ ಶರಣು

ratnakar
ಪ್ರೇಮಿ ಮದುವೆಗೆ ನಿರಾಕರಿಸಿದ ಆರೋಪ- ಯುವತಿ ಆತ್ಮಹತ್ಯೆಗೆ ಶರಣು
WhatsApp Group Join Now
Telegram Group Join Now

ಬಾಗಲಕೋಟೆ: ಪ್ರೇಮಿಯೊಬ್ಬ ಪ್ರಿಯತಮೆಯನ್ನು ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಯುವತಿಯ ಮನೆಯವರು ಆರೋಪಿಸಿರುವ ಘಟನೆ ಬೀಳಗಿ (Beelagi) ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.

ರುಕ್ಕವ್ವ (19) ವಡವಾಣಿ ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ಅ.02 ರಂದು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಳು. ಯುವತಿಯ ತಂದೆ ರುದ್ರಪ್ಪ ನನ್ನ ಮಗಳ ಸಾವಿಗೆ ಪ್ರೀತಿಸಿ ಕೈಕೊಟ್ಟ ಶಂಕ್ರಪ್ಪ ಪತ್ತಾರ ಕಾರಣ ಎಂದು ಆರೋಪಿಸಿ ಬೀಳಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಇಲ್ಲಿಯವರೆಗೆ ಬೀಳಗಿ ಪೊಲೀಸರು ಆತನನ್ನ ಬಂಧಿಸಿಲ್ಲ ಎಂದು ಆರೋಪಿಸಿ ಯುವತಿಯ ತಂದೆ ಸೋಮವಾರ ಬಾಗಲಕೋಟೆ ಎಸ್‌ಪಿ ಕಚೇರಿಯ ಮೆಟ್ಟಿಲೇರಿದ್ದಾರೆ.

ಸುಮಾರು ವರ್ಷಗಳಿಂದ ಯುವಕ ಶಂಕ್ರಪ್ಪ ಪತ್ತಾರ ನನ್ನ ಮಗಳನ್ನು ಪ್ರೀತಿಸುತ್ತಿದ್ದ. ಆದರೆ ಮದುವೆ ಆಗಲು ನಿರಾಕರಿಸಿದ್ದ. ನನ್ನ ಮಗಳ ಸಾವಿಗೆ ಶಂಕ್ರಪ್ಪ ಮಾಡಿದ ನಿರಾಕರಣೆಯೇ ಕಾರಣ ಎಂದು ಪ್ರಿಯಕರ ಮಾಡಿದ ವಾಟ್ಸಪ್ ಮೆಸೇಜ್, ಫೋಟೋಗಳನ್ನ ಸಾಕ್ಷಿಯಾಗಿ ಇಟ್ಟುಕೊಂಡು ದೂರು ನೀಡಲು ಯುವತಿಯ ತಂದೆ ಮುಂದಾಗಿದ್ದಾರೆ.

ಪ್ರಕರಣ ದಾಖಲಾಗಿ ಒಂದು ತಿಂಗಳು ಕಳೆದರೂ ಆರೋಪಿ ಶಂಕ್ರಪ್ಪನನ್ನ ಬೀಳಗಿ ಪೊಲೀಸರು ಬಂಧಿಸಿಲ್ಲ. ಬದಲಾಗಿ ಆರೋಪಿಗಳಿಗೆ ಪೊಲೀಸರು ಸಹಕಾರ ನೀಡಿದ್ದಾರೆ. ಆತನಿಗೆ ಜಾಮೀನು ಸಿಗುವಂತೆ ಮಾಡಿದ್ದಾರೆ ಎಂದು ಯುವತಿಯ ತಂದೆ ಆರೋಪಿಸಿದ್ದಾರೆ.

ಹೀಗೆ ಆರೋಪಿಗಳು ಜಾಮೀನು ಪಡೆದು ಓಡಾಡುತ್ತಿರುವುದನ್ನ ಕಂಡ ರುದ್ರಪ್ಪ, ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಎಸ್ಪಿ ಅಮರನಾಥ್ ರೆಡ್ಡಿಗೆ ಮನವಿ ಮಾಡಿಕೊಂಡಿದ್ದಾರೆ.

WhatsApp Group Join Now
Telegram Group Join Now
Share This Article