ಬೀದರ್: ಅನ್ನಭಾಗ್ಯ ಯೋಜನೆಯ (AnnaBhagya Scheme) ಪಡಿತರವನ್ನು ನ್ಯಾಯಬೆಲೆ ಅಂಗಡಿಯವರಿಂದಲೇ ಕನ್ನ ಹಾಕಲಾಗುತ್ತಿದೆ.
ಗಡಿ ಜಿಲ್ಲೆ ಬೀದರ್ನಲ್ಲಿ (Bidar) ಅನ್ಯಭಾಗ್ಯ ಯೋಜನೆಯ ಪಡಿತರವನ್ನು ನ್ಯಾಯಬೆಲೆ ಅಂಗಡಿಯ ಡೀಲರ್ ರಾಜಾರೋಷವಾಗಿ ಕಾಳಸಂತೆಗೆ ಸಾಗಾಟ ಮಾಡಿ, ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿದೆ.
ನ್ಯಾಯಬೆಲೆ ಅಂಗಡಿಗೆ ಪಡಿತರ ಬರುವುದಕ್ಕೂ ಮೊದಲೇ ಡೀಲರ್ ಇಬ್ರಾಹಿಂ ಅರಣ್ಯ ಪ್ರದೇಶದಲ್ಲೇ ಪಡಿತರನ್ನು ಮಾರಾಟ ಮಾಡುತ್ತಿದ್ದಾನೆ. ಅಕ್ರಮವಾಗಿ ಪಡಿತರ ಸಂಗ್ರಹಿಸಿ ಕಾಳಸಂತೆ ಪಾಲಾಗುತ್ತಿದ ಲಾರಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದೆ. ಲಾರಿಯನ್ನು ಬೆನ್ನಟ್ಟಿ ಗ್ರಾಮಸ್ಥರು ಶಾಕ್ ಮುಟ್ಟಿಸಿದ್ದಾರೆ.
ಜಿಲ್ಲೆಯ ಮಿರ್ಜಾಪುರ್ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ಕೇಳಿದಾಗ ಏನೇನು ಕಾರಣಗಳನ್ನು ಹೇಳಿ ಅಕ್ಕಿಯನ್ನು ಕೊಡದೇ ಗ್ರಾಮಸ್ಥರಿಗೆ ದೋಖಾ ಮಾಡುತ್ತಿದ್ದ. ಲಕ್ಷಾಂತರ ಮೌಲ್ಯದ ಪಡಿತರವನ್ನು ಲಾರಿಯಲ್ಲಿ ತುಂಬಿಕೊಂಡು ಕಾಳಸಂತೆಗೆ ತೆಗೆದುಕೊಂಡು ಹೋಗುತ್ತಿದ್ದಾಗ ಗ್ರಾಮಸ್ಥರು ತಡೆದು ನಿಲ್ಲಿಸಿದ್ದಾರೆ. ಇದನ್ನೂ ಪ್ರಶ್ನೆ ಮಾಡಿದಾಗ ಏನು ಮಾಡಿಕೊಳ್ಳುತ್ತೀರಾ ಮಾಡಿಕೊಳ್ಳಿ ಎಂದು ಆವಾಜ್ ಹಾಕಿದ್ದಾನೆ. ಈ ವೇಳೆ ನ್ಯಾಯಬೆಲೆ ಅಂಗಡಿಯ ಡೀಲರ್ ಜೊತೆಗೆ ಗ್ರಾಮಸ್ಥರು ವಾಗ್ವಾದ ಮಾಡಿದ್ದಾರೆ.