ಬೆಳಗಾವಿ:ಬಿಜೆಪಿ ಪಕ್ಷದಲ್ಲಿರುವ ಅತ್ಯಂತ ಕ್ರಿಯಾಶೀಲ ಸಕ್ರೀಯ ಸದಸ್ಯರನ್ನು ಗುರುತಿಸಿ ಮುಂಬರವು ದಿನಗಳಲ್ಲಿ ಸೂಕ್ತ ಸ್ಥಾನಮಾನ ಒದಗಿಸುವ ಕಾರ್ಯ ನಡೆದಿದ್ದು ಬಿಜೆಪಿ ಕಾರ್ಯಕರ್ತರು ತಮ್ಮ ಕಾರ್ಯಕ್ಷಮತೆಯಿಂದ ಸಕ್ರೀಯ ಸದಸ್ಯತ್ವ ಪಡೆದುಕೊಳ್ಳಬೇಕಂದು ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಹಾಗೂ ಬಿಜೆಪಿ ಸಕ್ರೀಯ ಸದಸ್ಯತ್ವಾ ಜಿಲ್ಲಾ ಸಂಚಾಲಕ ಎಫ್.ಎಸ್.ಸಿದ್ದನಗೌಡರ ಹೇಳಿದರು.
ನಗರದ ಧರ್ಮನಾಥ ವೃತ್ತದಲ್ಲಿರುವ ಗ್ರಾಮಾಂತರ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಶುಕ್ರವಾರ ನಡೆದ ಸಕ್ರಿಯ ಸದಸ್ಯತ್ವ ಅಭಿಯಾನದ ಕಾರ್ಯಾಗಾರದಲ್ಲಿ ಮಾತನಾಡಿ, ರಾಷ್ಟ್ರದಲ್ಲಿ 9ಕೋಟಿಗಿಂತ ಅಧಿಕ ಜನತೆ ಬಿಜೆಪಿ ಸದಸ್ಯತ್ವ ಪಡೆದಿದ್ದು ಇದು ಅ31 ರವರೆಗೆ ಚಾಲ್ತಿಯಲ್ಲಿದೆ. ಮೊಬೈಲ್ ನಂ 8800002024 ಕ್ಕೆ ಮಿಸ್ ಕಾಲ್ ಮಾಡುವದರೊಂದಿಗೆ ಬಿಜೆಪಿ ಸದಸ್ಯರಾಗಬಹುದು.ಈ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.
ರಾಜ್ಯದಲ್ಲಿ 50ಲಕ್ಷಕ್ಕೂ ಹೆಚ್ಚು ಸದಸ್ಯತ್ವವಾಗಿದ್ದು ಬೆಳಗಾವಿ ಗ್ರಾಮಾಂತರ ಜಿಲ್ಲೆಯಲ್ಲಿ 8 ವಿಧಾನಸಭಾ ಕ್ಷೇತ್ರಗಳಲ್ಲಿ 1ಲಕ್ಷ 60 ಸಾವಿರಕ್ಕೂ ಅಧಿಕವಾಗಿ ಬಿಜೆಪಿ ಸದಸ್ಯತ್ವ ನಡೆಯುತ್ತಿದೆ. ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಪಕ್ಷದ ತತ್ವ ಸಿದ್ದಾಂತಗಳನ್ನು ಪ್ರತಿಯೊಬ್ಬರಲ್ಲಿ ಬೆಳೆಸಿ ರಾಷ್ಟ್ರೀಯ ಚಿಂತನೆಗಳಿಗೆ ಕಾರ್ಯಕರ್ತನ್ನು ಸಿದ್ದರಾಗಿಸುವ ಗುರಿ ಬಿಜೆಪಿ ಹೊಂದಿದೆ. ಸಕ್ರಿಯ ಸದಸ್ಯರಾಗುವದರಿಂದ ಪಕ್ಷದ ಪದಾಧಿಕಾರಿ ಚುನಾಯಿತ ಪ್ರತಿನಿಧಿಗಳಾಗಲು ಅರ್ಹರೆ ಹೊಂದಲಾಗುವದು. ಪಕ್ಷಗೋಸ್ಕರ ಹಗಲಿರುಳು ದುಡಿಯುವ ಕಾರ್ಯಕರ್ತರ ಪರಿಶ್ರಮದಿಂದ ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಮೂರನೆ ಬಾರಿ ಅಧಿಕಾರಕ್ಕೆ ಎರಿದೆ. ಈ ಮಹತ್ವದ ಕಾರ್ಯದಲ್ಲಿ ಪಾಲ್ಗೊಂಡಿರುವ ಕಾರ್ಯಕರ್ತರು ಪಕ್ಷದಲ್ಲಿ ಸಲ್ಲಿಸಿದ ಸೇವೆ, ಸಮಾಜಮುಖಿ ಕಾರ್ಯಗಳು ಹಾಗೂ ಜನಪರವಾದ ಸೇವಾಕಾಂಕ್ಷಿಗಳ ಜೋತೆಗೆ ತಮ್ಮ ಕೌಶಲ್ಯ, ಆಸಕ್ತಿಯನ್ನು ಕಲೆಹಾಕಲಾಗುತ್ತಿದೆ. ದೇಶದಲ್ಲಿ ಪ್ರಥಮ ಸಕ್ರಿಯ ಸದಸ್ಯತ್ವವನ್ನು ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೊದಿಯವರು ಪಡೆದುಕೊಂಡಿರುವದು ಕಾರ್ಯಕರ್ತರಿಗೆ ಮತ್ತಷ್ಟು ಹುರುಪು ತಂದಿದೆ. ಸಕ್ರಿಯ ಸದಸ್ಯರಾಗುವ ಪಕ್ಷದ ಕಾರ್ಯಕರ್ತರು ಪ್ರಾಥಮಿಕ ಸದಸ್ಯರ ಸಂಖ್ಯೆಯನ್ನು ತಮ್ಮ ಬೂತ ಮತ್ತು ಕ್ಷೇತ್ರದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಮಾಡಬೇಕೆಂದರು.
ಜಿಲ್ಲಾ ಸಹಸಂಚಾಲಕ ಹಾಗೂ ರಾಜ್ಯ ಸಾಮಾಜಿಕ ಜಾಲತಾಣದ ಸದಸ್ಯ ನೀತಿನ ಚೌಗಲೆ ಮಾತನಾಡಿ, ಸಕ್ರಿಯ ಸದಸ್ಯತ್ವ ಪಾರ್ಮಗಳಲ್ಲಿ ಕೇಳಿರುವ ಎಲ್ಲ ಮಾಹಿತಿಗಳನ್ನು ಸಂಪೂರ್ಣವಾಗಿ ಭರ್ತಿಮಾಡಬೇಕು. ಅಪೂರ್ಣ ಮಾಹಿತಿಯ ಪಾರ್ಮಗಳನ್ನು ತಿರಸ್ಕರಿಸಲಾಗುವದು. ಪಕ್ಷವಿಧಿಸಿದ ಎಲ್ಲ ನಿಯಮಗಳನ್ನು ಪೂರ್ಣಗೊಳಿಸಿ ಸಕ್ರಿಯ ಸದಸ್ಯತ್ವ ಯಶಸ್ವಿಯಾಗಿಸಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ಜಿಲ್ಲಾ ಉಪಾಧ್ಯಕ್ಷ ವಿನಯ ಕದಂ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷರಾದ ಬಸವರಾಜ ಸಾಣಿಕೊಪ್ಪ, ಶ್ರೀಕರ ಕುಲಕರ್ಣಿ, ಮಹಾದೇವ ಶಕ್ಕಿ, ಸುಭಾಷ ಪಾಟೀಲ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಲಕ್ಕಪ್ಪ ಕಾರ್ಗಿ, ಈರಣ್ಣ ಹೊಸಗೌಡ್ರ, ವಿಶಾಲ ಬೋಗೂರ, ಗುಂಡು ತೊಪಿನಕಟ್ಟಿ, ಬಸವರಾಜ ದೊಡಮನಿ, ವಿನಯ ತುರಮರಿ, ಬಸವರಾಜ ಹುಬ್ಬಳ್ಳಿ, ಮಹಾದೇವ ಮುರಗೋಡ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ವಿಠಲ ಸಾಯಣ್ಣವರ, ಗಜಾನನ ಮಹಿಂದ್ರಕರ ಸೇರಿದಂತೆ ಮುಂತಾದವರು ಇದ್ದರು.