Ad imageAd image

ಆರ್ಥಿಕ ಸಭಲತೆಗೆ ಉದ್ಯೊಗ ಮುಖ್ಯ ಆಯುಧ : ಕೆ.ಎಂ. ಜಾನಕಿ

ratnakar
ಆರ್ಥಿಕ ಸಭಲತೆಗೆ ಉದ್ಯೊಗ ಮುಖ್ಯ ಆಯುಧ : ಕೆ.ಎಂ. ಜಾನಕಿ
WhatsApp Group Join Now
Telegram Group Join Now

ಬಾಗಲಕೋಟೆ: ಉದ್ಯೋಗಂ ಪುರಷ ಲಕ್ಷಣಂ ನಾಣ್ನುಡಿಯಂತೆ ಇಂದು ಉದ್ಯೋಗಂ ಮಾನವ ಲಕ್ಷಣಂ ಆಗಿದ್ದು, ಆರ್ಥಿಕ ಸಭಲತೆಗೆ ಉದ್ಯೋಗವೆ ಮುಖ್ಯ ಆಯುಧವಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಹೇಳಿದರು.

ಅವರು ಬಿ.ವಿ.ವಿ.ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯ, ಗೈಡನ್ಸ್ ಶೇಲ್ ಹಾಗೂ ಬೆಳಗಾವಿ ಸಮರ್ಥನಂ ಅಂಗವಿಕಲ ಸಂಸ್ಥೆ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಘಟಕದ ಸಹಯೋಗದಲ್ಲಿ ಶುಕ್ರವಾರ ಬಸವೇಶ್ವರ ಕಲಾ ಮಹಾವಿದ್ಯಾಲಯದ ಸಭಾಭವನದಲ್ಲಿ ನಡೆದ ಉದ್ಯೋಗಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯೆಗೆ ತಕ್ಕ ಉದ್ಯೋಗ ಬಹುಮುಖ್ಯವಾಗಿದ್ದು, ವಿದ್ಯೆ ಜ್ಞಾನದ ಅರಿವು ನೀಡುತ್ತದೆ, ಜೋತೆಗೆ ಒಂದು ಉದ್ಯೋಗ ಸಿಕ್ಕರೆ ಮನುಷ್ಯನ ಬದುಕು ಪರಿಪೂರ್ಣತೆ ಕಡೆ ಸಾಗುತ್ತದೆ, ಆ ನೀಟ್ಟಿನಲ್ಲಿ ಈ ಉದ್ಯೋಗಮೇಳ ಅತ್ಯುತ್ತಮ ಕಾರ್ಯಕ್ರಮವಾಗಿದೆ ಎಂದರು.

ಉದ್ಯೋಗದಿಂದ ಮನುಷ್ಯನ ಗೌರವ ಹೆಚ್ಚುತ್ತದೆ, ಮೇಳಕ್ಕೆ ಬಂದಿರುವ ಉದ್ಯೋಗಾಕಾಂಕ್ಷಿಗಳಿಗೆ ಒಳ್ಳೆಯ ಉದ್ಯೋಗ ಸಿಗಲಿ, ಉದ್ಯೋಗದಾತರಿಗೂ ಒಳ್ಳೆದಾಗಲಿ, ಇಲ್ಲಿ ವೀಶೇಷಚೇತನರಿಗೆ ಹೆಚ್ಚಿನ ಅವಕಾಶ ಕಲ್ಪಿಸಿದ್ದು ಧನಾತ್ಮಕ ಹೆಜ್ಜೆಯಾಗಿದೆ. ಬಸವೇಶ್ವರ ಕಲಾ ಮಹಾವಿದ್ಯಾಲಯ ಹಾಗೂ ಸಮರ್ಥನಂ ಸಂಸ್ಥೆ ಒಳ್ಳೆಯ ಸದಾವಕಾಶವನ್ನು ನಿರ್ಮಿಸಿರುವುದು ಶ್ಲಾಘನೀಯವ, ವಿಶೇಷ ಚೇತನರಲ್ಲಿ ಇಚ್ಚಾಶಕ್ತಿ ಮತ್ತು ಆತ್ಮವಿಶ್ವಾಸ ಹೆಚ್ಚಾಗಿರುವುದರಿಂದ ಅವರಿಗೆ ಮೂಕ್ತಮನಸ್ಸಿನಿಂದ ಅವಕಾಶಗಳನ್ನು ಕಲ್ಪಿಸುವ ಜವಾಬ್ದಾರಿ ನಮ್ಮೇಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಸಿದ್ದ ಮಾಜಿ ಶಾಸಕರು ಹಾಗೂ ಬಿ.ವಿ.ವಿ.ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಅವರು ಮಾತನಾಡಿ ವಿಶೇಷಚೇತನುರು ಬಹಳ ಪ್ರತಿಭಾವಂತರಾಗಿರುತ್ತಾರೆ, ಈ ಉದ್ಯೋಗಮೇಳದಲ್ಲಿ 200ಕ್ಕೂ ಹೆಚ್ಚು ವಿಶೇಷಚೇತನರು ಹಾಗೂ 300ಕ್ಕೂ ಹೆಚ್ಚು ಇತರರು ಭಾಗವಹಿಸಿರುವುದು ಹೆಮ್ಮೆ ವಿಷಯವಾಗಿದೆ. ಯಾವುದೆ ಉದ್ಯೋಗ ಸಿಕ್ಕರು ಅದನ್ನು ಬಿಡಬಾರದು, ಜೀವನದ ಯಶಸ್ವಿಗೆ ನಾವು ನಮಗೆ ಸಿಕ್ಕ ಮೊದಲ ಉದ್ಯೋಗದಲ್ಲಿ ಮುಂದುವರೆಯಬೇಕು ಅದರಿಂದ ಬೇಳವಣಿಗೆಯನ್ನು ಕಾಣಬಹುದಾಗಿದೆ. ಮೊದಲಿಂದಲೂ ನಮ್ಮ ಸಂಘದಲ್ಲಿ ಶಿಶುವಿಹಾರದಲ್ಲಿ ವಿಶೇಷಚೇತನರಿಗಾಗಿ ಶಾಲೆಯನ್ನು ತೆರೆಯಲಾಗಿದೆ. ವಿಶೇಷಚೇತನರಿಗೆ ನಮ್ಮ ಸಹಾಯ ಸಹರಕಾರ ಇದ್ದೆ ಇರುತ್ತದೆ ಎಂದರು.

ವೇದಿಕೆ ಮೇಲೆ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಸಮರ್ಥನಂ ಅಂಗವಿಕಲರ ಸಂಸ್ಥೆಯ ಅರುಣಕುಮಾರ ಎಂ.ಜಿ. ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗುರುಬಸವ ಸೂಳಿಭಾವಿ, ಆಡಳಿತಾಧಿಕಾರಿ ಡಾ.ವಿಜಯಕುಮಾರ ಕಟಗಿಹಳ್ಳಿಮಠ, ಪ್ರಾಚಾರ್ಯ ಎಸ್.ಆರ್.ಮುಗನೂರಮಠ, ಐಕ್ಯೂಎಸಿ ಸಂಯೋಜಕರಾದ ಡಾ.ಎ.ಯು.ರಾಠೋಡ, ಎಸ್.ವಿ,ಕಟ್ಟಿ, ಪಂಡಿತ ಬಿ, ದೀಪಾ ಈಟಿ ಸೇರಿದಂತೆ ಅನೇಕರು ಇದ್ದರು. ಕಾರ್ಯಕ್ರಮದಲ್ಲಿ ಶ್ರೇಯಾ ಜೋರಾಪುರ ಪ್ರಾರ್ಥಿಸಿದರು, ಕೆಂಗಲಗುತ್ತಿರವರು ಕಾರ್ಯಕ್ರಮ ನೀರೂಪಿಸಿದರು.

ಉದ್ಯೋಗ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ: ಉದ್ಯೋಗಮೇಳಕ್ಕೆ ಉದ್ಯೋಗದಾತ ಸಂಸ್ಥೆಗಳು ಮತ್ತು ಉದ್ಯೋಗಾಕಾಂಕ್ಷಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯಾದಂತ ಇರುವ ಸುಮಾರು 36 ಸಂಸ್ಥೆಗಳು ಮೇಳದಲ್ಲಿ ಪಾಲ್ಗೊಂಡಿದ್ದು ಸಾವಿರಕ್ಕು ಹೆಚ್ಚು ಜನ ಆಕಾಂಕ್ಷಿಗಳು ಸಂದರ್ಶನಕ್ಕೆ ಹಾಜರಾಗಿದ್ದರು.

WhatsApp Group Join Now
Telegram Group Join Now
Share This Article