Ad imageAd image

ಜಮ್ಮು-ಕಾಶ್ಮೀರದಲ್ಲಿ ಮೊದಲ ಖಾತೆ ತೆರೆದ ಆಮ್ ಆದ್ಮಿ ಪಕ್ಷ

mahantesh
ಜಮ್ಮು-ಕಾಶ್ಮೀರದಲ್ಲಿ ಮೊದಲ ಖಾತೆ ತೆರೆದ ಆಮ್ ಆದ್ಮಿ ಪಕ್ಷ
WhatsApp Group Join Now
Telegram Group Join Now

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ತನ್ನ ಖಾತೆಯನ್ನು ತೆರೆದಿದೆ. ದೋಡಾದಲ್ಲಿ   ಪಕ್ಷವು ವಿಜಯವನ್ನು ಸಾಧಿಸಿದೆ. ರಾಜ್ಯದಲ್ಲಿ ತನ್ನ ಅಸ್ತಿತ್ವವನ್ನು ದಾಖಲಿಸಿದೆ. ಎಎಪಿಯ ಮೆಹರಾಜ್ ಮಲಿಕ್ ದೋಡಾ ಕ್ಷೇತ್ರದಿಂದ ಗೆದ್ದಿದ್ದಾರೆ. ಮಲಿಕ್ 22944 ಮತಗಳನ್ನು ಪಡೆದು 18174 ಮತಗಳನ್ನು ಪಡೆದ ರಾಣಾ ಅವರನ್ನು 4770 ಮತಗಳ ಭಾರೀ ಅಂತರದಿಂದ ಸೋಲಿಸಿದರು.

ನ್ಯಾಷನಲ್ ಕಾನ್ಫರೆನ್ಸ್‌ನ ಖಾಲಿದ್ ನಜೀಬ್ ಸುಹರ್ವರ್ಡಿ 12975 ಮತಗಳನ್ನು ಪಡೆದು ದೋಡಾದ ಮೂರನೇ ಸ್ಥಾನದಲ್ಲಿದ್ದಾರೆ. ಮಾರ್ಚ್ 2022 ರಲ್ಲಿ ದೋಡಾ ನಗರದಲ್ಲಿ ಮಲಿಕ್ ಮೊದಲ ಬಾರಿಗೆ ಬೃಹತ್ ರ್ಯಾಲಿಯನ್ನು ಆಯೋಜಿಸಿದಾಗ ಆಮ್​ ಆದ್ಮಿ ಪಕ್ಷ ಜಮ್ಮು ಪ್ರಾಂತ್ಯದ ಚೆನಾಬ್ ಕಣಿವೆ ಪ್ರದೇಶದಲ್ಲಿ ತನ್ನ ಅಸ್ತಿತ್ವವನ್ನು ತೋರಿಸಿತ್ತು.

ದೋಡಾ ಜಿಲ್ಲಾ ಅಭಿವೃದ್ಧಿ ಮಂಡಳಿಯ ಸದಸ್ಯ ಮಲಿಕ್, ಸ್ಥಳೀಯ ಆಡಳಿತದ ವಿರುದ್ಧ ಪ್ರತಿಭಟನೆ ನಡೆಸಿ ಆಗಾಗ ಸುದ್ದಿಯಲ್ಲಿದ್ದರು. ಇದರಿಂದಾಗಿ ಕೆಲ ಕಂದಾಯ ಅಧಿಕಾರಿಗಳ ಕಚೇರಿಗಳನ್ನು ಬಂದ್ ಮಾಡಿ ಅಥವಾ ರಸ್ತೆ ತಡೆ ನಡೆಸಿ ಪೊಲೀಸ್ ಕೇಸುಗಳನ್ನು ಎದುರಿಸುತ್ತಿದ್ದಾರೆ.

ಸೆಪ್ಟೆಂಬರ್ 18, 2024 ರಂದು ಆರಂಭಿಕ ಹಂತದಲ್ಲಿ ದೋಡಾ ಕ್ಷೇತ್ರದಲ್ಲಿ ಅಸೆಂಬ್ಲಿ ಚುನಾವಣೆಗಳು ನಡೆದವು. ಬಿಜೆಪಿಯಿಂದ ಗಜಯ್ ಸಿಂಗ್ ರಾಣಾ, ಕಾಂಗ್ರೆಸ್ ಪ್ರತಿನಿಧಿಸುವ ಶೇಖ್ ರಿಯಾಜ್ ಅಹ್ಮದ್, ಡಿಪಿಎಪಿಯಿಂದ ಅಬ್ದುಲ್ ಮಜೀದ್ ವಾನಿ ಮತ್ತು ಎಎಪಿಯಿಂದ ಮೆಹರಾಜ್ ಮಲಿಕ್ ಈ ಸ್ಥಾನಕ್ಕೆ ಪ್ರಮುಖ ಅಭ್ಯರ್ಥಿಗಳಾಗಿದ್ದರು. ಆದರೆ, ಅಂತಿಮವಾಗಿ ಎಎಪಿಯ ಮೆಹರಾಜ್ ಮಲಿಕ್ ಮತ್ತು ಬಿಜೆಪಿಯ ಗಜಯ್ ಸಿಂಗ್ ರಾಣಾ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಇದರಲ್ಲಿ ಮೆಹರಾಜ್ ಮಲಿಕ್ ಗೆಲುವಿನ ನಗೆ ಬೀರಿದ್ದಾರೆ.

ಮೆಹ್ರಾಜ್ ಮಲಿಕ್ ಅವರನ್ನು ದೋಡಾ ಪ್ರದೇಶದ ಜನಪ್ರಿಯ ನಾಯಕ ಎಂದು ಪರಿಗಣಿಸಲಾಗಿದೆ.ದೋಡಾ ವಿಧಾನಸಭಾ ಕ್ಷೇತ್ರವನ್ನು ಎರಡು ಸ್ಥಾನಗಳಾಗಿ ವಿಂಗಡಿಸಲಾಗಿದೆ, ಅದರಲ್ಲಿ ಒಂದು ದೋಡಾ ಮತ್ತು ಇನ್ನೊಂದು ದೋಡಾ ವೆಸ್ಟ್. ದೋಡಾ ಪ್ರದೇಶವು ಮುಸ್ಲಿಂ ಪ್ರಾಬಲ್ಯ ಹೊಂದಿದ್ದು, ದೋಡಾ ಪಶ್ಚಿಮವು ಹಿಂದೂ ಪ್ರಾಬಲ್ಯದ ಸ್ಥಾನವಾಗಿದೆ ಮತ್ತು 2014 ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ದೋಡಾ ಸ್ಥಾನವನ್ನು ಗೆದ್ದಿತ್ತು.

ದೋಡಾ ವಿಧಾನಸಭಾ ಕ್ಷೇತ್ರವು ಜಮ್ಮು ಮತ್ತು ಕಾಶ್ಮೀರದ ಚೆನಾಬ್ ಕಣಿವೆ ಪ್ರದೇಶದಲ್ಲಿದೆ. ರಾಜಕೀಯ ಮತ್ತು ಭೌಗೋಳಿಕ ದೃಷ್ಟಿಕೋನದಿಂದ ಇದು ಅತ್ಯಂತ ಮಹತ್ವದ್ದಾಗಿದೆ.

ಈ ಪ್ರದೇಶವು ಜಮ್ಮು ವಿಭಾಗದ ದೋಡಾ ಜಿಲ್ಲೆಯ ಭಾಗವಾಗಿದೆ ಮತ್ತು ಇಲ್ಲಿನ ಜನಸಂಖ್ಯೆಯು ಪ್ರಧಾನವಾಗಿ ಗ್ರಾಮೀಣ ಮತ್ತು ಗುಡ್ಡಗಾಡು ಪ್ರದೇಶವಾಗಿದೆ, ಇದು ಒಂದು ವಿಶಿಷ್ಟ ಚುನಾವಣಾ ಕ್ಷೇತ್ರವಾಗಿದೆ. ಇತ್ತೀಚಿನ ಚುನಾವಣೆಯಲ್ಲಿ ದೋಡಾ ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಬಿಜೆಪಿ, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.

WhatsApp Group Join Now
Telegram Group Join Now
Share This Article