Ad imageAd image

ಇಂದಿನಿಂದ ಸಿಎಂ ವಿರುದ್ಧ ಮುಡಾ ತನಿಖೆ ಆರಂಭ

ratnakar
ಇಂದಿನಿಂದ ಸಿಎಂ ವಿರುದ್ಧ ಮುಡಾ ತನಿಖೆ ಆರಂಭ
WhatsApp Group Join Now
Telegram Group Join Now

ಬೆಂಗಳೂರು:ಲೋಕಾಯುಕ್ತ ಪೊಲೀಸರು (Lokayukta Police) ತನಿಖೆ ಆರಂಭಿಸಲಿದ್ದಾರೆ. ಈಗಾಗಲೇ ಲೋಕಾಯುಕ್ತದಲ್ಲಿ ಎಫ್‌ಐಆರ್ ದಾಖಲಾಗಿದ್ದು ಮೊದಲು ದೂರುದಾರರಿಗೆ ನೋಟಿಸ್‌ ನೀಡಿ ವಿಚಾರಣೆ ನಡೆಸಲಿದೆ. ದೂರುದಾರರ ಬಳಿ ದಾಖಲೆಯನ್ನು ಪೊಲೀಸರು ಸಂಗ್ರಹಿಸಲಿದ್ದಾರೆ.

ಇನ್ನೊಂದು ಕಡೆ ನಿವೃತ್ತ ನ್ಯಾ. ದೇಸಾಯಿ ತನಿಖಾ ಸಮಿತಿ ಬಳಿಯಿರುವ ದಾಖಲೆ ಪಡೆಯಲು ಕಾನೂನು ಪ್ರಕ್ರಿಯೆ ಆರಂಭವಾಗಲಿದೆ. ಆ ದಾಖಲೆಗಳು ಸಿಕ್ಕ ಮೇಲೆ ಆರೋಪಿಗಳಿಗೆ ಹಂತ ಹಂತವಾಗಿ ನೋಟಿಸ್ ಜಾರಿ ಮಾಡುವ ಸಾಧ್ಯತೆಯಿದೆ.

ಹಗರಣ ಸಂಬಂಧ ಸಿಆರ್‌ಪಿಸಿ ಸೆಕ್ಷನ್ 156(3) ಅಡಿ ತನಿಖೆ ನಡೆಸಿ ಮೂರು ತಿಂಗಳಲ್ಲಿ ವರದಿ ನೀಡುವಂತೆ ಮೈಸೂರಿನ ಲೋಕಾಯುಕ್ತ ಪೊಲೀಸರಿಗೆ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಆದೇಶ ನೀಡಿದ್ದರು.

ಯಾರ ವಿರುದ್ಧ ಎಫ್‌ಐಆರ್‌?
* ಸಿದ್ದರಾಮಯ್ಯ, ಮುಖ್ಯಮಂತ್ರಿ (A1)
* ಪಾರ್ವತಿ ಬಿಎಂ, ಸಿದ್ದರಾಮಯ್ಯ ಪತ್ನಿ(A2)
* ಮಲ್ಲಿಕಾರ್ಜುನ ಸ್ವಾಮಿ, ಸಿದ್ದರಾಮಯ್ಯ, ಬಾಮೈದ(A3)
* ದೇವರಾಜು, ಮಾರಾಟಗಾರ, ನಕಲಿ ಭೂ ಮಾಲೀಕ (A4)
* ಇತರರು‌

 

WhatsApp Group Join Now
Telegram Group Join Now
Share This Article