ಬೆಳಗಾವಿ: ಕೆಲವು ತಿಂಗಳಗಳಿಂದ ಬೆಳಗಾವಿ ಮಹಾನಗರ ಪಾಲಿಕೆ ಸ್ಮಾರ್ಟ್ ಸಿಟಿ ಹಾಗೂ ಶಾಹಪುರ ಹಾತತ್ಮ ಫುಲೆ ರಸ್ತೆ ಕುರಿತು ನಡೆಯುತ್ತಿರುವ ಚರ್ಚೆಗೆ ಶನಿವಾರ ಬೆಳಗ್ಗೆ ವಿರಾಮ ಬಿದ್ದಂತಿದೆ.
ಬೆಳಗಾವಿ ಅಭಿವೃದ್ಧಿ ಆಗಬೇಕು ರಸ್ತೆಗಳು ಹಾಗೂ ಚರಂಡಿಗಳು ಹಾಗೂ ನಗರ ಸೌಂದರ್ಯೀಕರಣ ಆಗಬೇಕು ಎನ್ನುವುದು ಬೆಳಗಾವಿ ಜನತೆಯ ಬಯಕೆ. ಅದರೆ ಅಭಿವೃದ್ಧಿ ಕಾರ್ಯಕ್ರಮಗಳು ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯಿಂದಾಗಿ ಬೆಳಗಾವಿ ಜನತೆಯ ತೆರಿಗೆ ಹಣ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಕೋಟ್ಯಾಂತರ ರೂಪಾಯಿಗಳಿಂದ ನಿರ್ಮಾಣವಾದ ಮಹಾತ್ಮ ಫುಲೆ ರಸ್ತೆ ಹೈಕೋರ್ಟ್ ಆದೇಶದಂತೆ ಬಾಳಸಾಹೇಬ್ ಪಾಟೀಲ್ ಅವರ ಮಾಲೀಕತ್ವಕ್ಕೆ ಸೇರಿತು.
ಬೆಳಗಾವಿ ಮಹಾನಗರ ಪಾಲಿಕೆ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಬೆಳಗಾವಿ ನಗರದ ಶಹಪುರ್ ಮಹಾತ್ಮ ಪುಲೆ ರಸ್ತೆ ನಿರ್ಮಾಣ ಮಾಡಲು ಯೋಜನೆ ಹಮ್ಮಿಕೊಂಡಿತು ಆದರೆ, ರಸ್ತೆಯ ಅಕ್ಕಪಕ್ಕ ಗಳಲ್ಲಿ ಜನವಸತಿ ಇದ್ದವು ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ವರ್ತನೆಯಿಂದ ಮನೆ ಮಾಲೀಕರುಗಳು ತಮ್ಮ ಸ್ವಂತ ಮನೆಗಳನ್ನು ಕಳೆದುಕೊಳ್ಳುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಅದನ್ನು ಪ್ರಶ್ನಿಸಿ ಸ್ಥಳೀಯ ಗ್ರಹವಾಸಿ ಬಹಳ ಸಾಹೇಬ್ ಪಾಟೀಲ್ ಎಂಬವರು ನ್ಯಾಯಾಲಯ ಮೊರೆ ಹೋಗಿದ್ದರು.
ಹೈಕೋರ್ಟ್ ಬಾಳ ಸಾಹೇಬ್ ಪಾಟೀಲ್ ಅವರ ಪರವಾಗಿ ತೀರ್ಪು ನೀಡಿ ಅವರಿಗೆ ಮಹಾನಗರ ಪಾಲಿಕೆ ಪರಿಹಾರ ಸ್ವರೂಪ 20 ಕೋಟಿ ನೀಡಬೇಕು ಅಥವಾ ಜಮೀನು ವಾಪಸ್ ನೀಡಬೇಕೆಂದು ಆದೇಶ ಮಾಡಿತು ಹಾಗೂ ಸಪ್ಟಂಬರ್ 23ರವರೆಗೆ ಇದರಲ್ಲಿ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಮಹಾನಗರ ಪಾಲಿಕೆ ಆಯುಕ್ತರ ತಮ್ಮ ಸ್ವಂತ 5 ಲಕ್ಷ ರೂಪಾಯಿ ಹಾಗೂ ಸೇವಾ ಅವಧಿಯ ಬಡತಿಗಳು ಮತ್ತು ಸೌಲಭ್ಯಗಳನ್ನು ನಿಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡುತ್ತಾ ಹೈಕೋರ್ಟ್ ಆದೇಶ ಮಾಡಿದ್ದು ಅದರಂಗವಾಗಿ 21 ಸೆಪ್ಟಂಬರ್ 2024ರಂದು ಮಹಾನಗರ ಪಾಲಿಕೆ ಸ್ಮಾರ್ಟ್ ಸಿಟಿ ಬೆಳಗಾವಿ ಎ ಸಿ ನೇತೃತ್ವದಲ್ಲಿ ಜಮೀನು ಗುರುತಿಸಿ ಸ್ವಂತ ಹೈಕೋರ್ಟ್ ಆದೇಶದಂತೆ ಜಮೀನಿನ ಮಾಲೀಕರಿಗೆ ಜಮೀನು ಹಸ್ತಾಂತರ ಮಾಡಿ ಮಹಾತ್ಮ ಪುಲೆ ರಸ್ತೆಯನ್ನು ಸಂಪೂರ್ಣವಾಗಿ ಬಂದ್ ಮಾಡಲಾಯಿತು.
ಬೆಳಗಾವಿಯಲ್ಲಿ ನಡೆದಿರುವ ಅಪರೂಪದ ಘಟನೆ ಹಾಗೂ ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ ಪ್ರಜೆ ಸರ್ವೋಪರ ಆಗಿದ್ದಾರೆ ಎಂದು ಮತ್ತೊಮ್ಮೆ ಸಂವಿಧಾನ ಜನಸಾಮಾನ್ಯರ ಹಿತ ಕಾಪಾಡುವುದರಲ್ಲಿ ಯಶಸ್ವಿಯಾಗಿದೆ