ಬೆಳಗಾವಿ: ಎಐಸಿಸಿ ಸಮಿತಿ ಕಾರ್ಯದರ್ಶಿ ಡಾಅಂಜಲಿ ನಿಂಬಾಳ್ಕ ಸಂಸದೆ ಪ್ರಿಯಾಂಕಾ ಸತೀಶ್ ಜಾರಕಿಹೊಳಿ ಸತ್ಕಾರ ಕಾರ್ಯಕ್ರಮದ ಸಾನಿಧ್ಯವನ್ನು ಹಳಿಯಾಳದ ಪೂಜ್ಯ ಮಂಜುನಾಥ್ ಸರಸ್ವತಿ ಶ್ರೀಗಳು ಗೋಸಾವಿ ಮಠ ,ಹಾಗೂ ಅವರೊಳ್ಳ ಬಿಳಕಿ ಶ್ರೀ ಚನ್ನಬಸವ ದೇವರು. ರುದ್ರ ಸ್ವಾಮಿ ಮಠ ಅವರ ಸಾನಿಧ್ಯದಲ್ಲಿ ಬ್ಲಾಕ್ ಖಾನಾಪುರ್ ಕಾಂಗ್ರೆಸ್ ವತಿಯಿಂದ ಡಾ. ಅಂಜಲಿ ನಿಂಬಾಳ್ಕರ್ ಹಾಗೂ ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಸತೀಶ್ ಜಾರಕಿಹೊಳಿ ಸತ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಂಸದೆ ಪ್ರಿಯಾಂಕ ಸತೀಶ್ ಜಾರಕಿಹೊಳಿ ಮಾತನಾಡಿ ಖಾನಾಪುರ್ ಅಭಿವೃದ್ಧಿಗಾಗಿ ನನ್ನ ಸಹಕಾರ ಇದ್ದೇ ಇರುತ್ತೆ ನನ್ನ ತಂದೆ 30 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಪಕ್ಷವನ್ನು ಬೆಳೆಸಿದ್ದಾರೆ. ಸಮಾಜದ ಕಟ್ಟಕಡೆ ವ್ಯಕ್ತಿಗೆ ಕಷ್ಟ ಸುಖಗಳಲ್ಲೂ ಭಾಗಿಯಾಗಿದ್ದಾರೆ ಅವರ ಕೆಲಸಗಳನ್ನು ನಾನು ಬೇರೆಯಾಗಿ ಏನು ಹೇಳು ಅಂತದ್ದಿಲ್ಲ ನನ್ನ ತಂದೆಯಂತೆ ನಾನು ಕೂಡ ಖಾನಾಪುರ ಸರ್ವಾಂಗಿನ ಅಭಿವೃದ್ಧಿಗೆ ಶ್ರಮಿಸುವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕಿ ಡಾ ಅಂಜಲಿ ನಿಂಬಾಳ್ಕರ್ ಮಾತನಾಡಿ ಖಾನಾಪುರ ತಾಲೂಕ ಸರವಾಂಗಿನ ಅಭಿವೃದ್ಧಿಗಾಗಿ ಶಾಸಕ ವಿಠ್ಠಲ್ ಹಲಿಗೆಕರ್ ಅವರಿಗೆ ಸಂಪೂರ್ಣ ಬೆಂಬಲವನ್ನು ನೀಡುತ್ತೇನೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇದೆ ನನ್ನ ಶಕ್ತಿ ಮೀರಿ ನನ್ನ ಕ್ಷೇತ್ರಕ್ಕೆ ಹಾಗೂ ಖಾನಾಪುರ ಜನತೆಯ ಸಲುವಾಗಿ ನಾನು ಕೆಲಸ ಮಾಡುತ್ತೇನೆ , ಉತ್ತರ ಕನ್ನಡ ಲೋಕಸಭಾ ಸಂಸದರು ಖಾನಾಪುರಗೆ ಭೇಟಿ ನೀಡಿದಾಗ ಇವರು ಬೇರೆ ಹಳ್ಳಿಗಳಿಗೆ ಹೋಗಲಿಲ್ಲ, ಅಲ್ಲಿ ರಸ್ತೆಗಳು ಮತ್ತು ಜನರ ಸುಖ-ದುಃಖಗಳನ್ನು ಆಲಿಸಲಿಲ್ಲ ಆದರೆ ಖಾನಾಪುರು ಶಾಸಕರು ಕಾರವಾರ ಸಂಸದರಿಗೆ ಖಾನಾಪುರ್ ರಸ್ತೆಗಳು ಮಳೆಯಿಂದ ಹಾನಿಗೀಡಾದ ಮನೆಗಳಿಗೆ ಏಕೆ ಭೇಟಿ ನೀಡಲಿಲ್ಲ ? ಅದೇ ರೀತಿ ನಮ್ಮ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ ಗುಂಡಿಗಳ ಬಿದ್ದ ರಸ್ತೆಗಳ ನೋಡಲೇಬೇಕೆಂದು ಒತ್ತಡ ಹೆರಿ ನಮ್ಮ ನಾಯಕರಿಗೆ ಎರಡು ಗಂಟೆಗಳ ಕಾಲ ರಸ್ತೆಗಳು ಹಾಗೂ ಗ್ರಾಮಗಳಿಗೆ ಭೆಟ್ಟಿ ನೀಡಿಸಿದ್ದಾರೆ.
ನಮ್ಮ ನಾಯಕರು ಒಂದೇ ಒಂದು ಮಾತನಾಡದೆ ನಿಮ್ಮ ಸಮಸ್ಯೆಗಳನ್ನು ಆಲಿಸಿದ್ದಾರೆ ಆದರೆ ನಿಮ್ಮ ಸಂಸದರಿಗೆ ಮಾತ್ರ ನೀವು ಫೋನಿನ ಮೂಲಕ ಫೋಟೋಗಳನ್ನು ತೋರಿಸುತ್ತೀರಿ ಇದು ಯಾವ ನ್ಯಾಯ ಶಾಸಕರೇ ?ಎಂದುಪ್ರಶ್ನೆ ಕೇಳಿದರು 2018 ರಲ್ಲಿ ನನಗೆ ಬಿದ್ದಿರುವ ಮತಗಳಕ್ಕಿಂತ 2023ರಲ್ಲಿ ಹೆಚ್ಚು ಮತಗಳನ್ನು ಪಡೆದು ನಾನು ಸುತ್ತಿದ್ದೇನೆ ಖಾನಾಪುರ ಜನತೆ ಕಾಂಗ್ರೆಸ್ ಪಕ್ಷದ ಪರವಾಗಿದ್ದಾರೆ ನಾವು ಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಶಕ್ತಿಯುತವಾಗಿ ಮಾಡುತ್ತೇವೆ ನಿಮ್ಮೆಲ್ಲರ ಸಹಕಾರ ಆಶೀರ್ವಾದ ನಮಗೆ ಇದೇ ರೀತಿ ಇರಲಿ ಎಂದು ಪಕ್ಷದ ಕಾರ್ಯಕರ್ತರು ಹಾಗೂ ತಮ್ಮ ಅಭಿಮಾನಿಗಳಿಗೆ ಕೇಳಿಕೊಂಡರು.
ಅತಿಥಿಗಳಿಗೆ ಸ್ವಾಗತ ಕೋರಿದ ಖಾನಾಪುರ್ ತಾಲೂಕ ಬ್ಲಾಕ್ ಅಧ್ಯಕ್ಷ ಮಹದೇವ್ ಕೋಳಿ ಕಾರ್ಯಕ್ರಮದ ನಿರೂಪಣೆ ಮಾಡಿದ ವಾಸುದೇವ್ ಚೌಗುಲೆ, ಭರತೇಶ್ ತೋರಾಜಿ ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಗ್ರಾಮೀಣ ಅಧ್ಯಕ್ಷರಾದ ವಿನಯ್ ನವಲಗಟ್ಟಿ, ಜಿಲ್ಲಾಪ್ರಚಾರ ಸಮಿತಿ ಅಧ್ಯಕ್ಷರಾದ ರಾಜ ಸಲೀಂ, ಪ್ರಧಾನ ಕಾರ್ಯದರ್ಶಿ ಬಸವರಾಜ ಶಿಗಾವಿ ಹಾಗೂ ಜಿಲ್ಲಾ ಮಹಿಳಾ ಗ್ರಾಮೀಣ ಅಧ್ಯಕ್ಷೆ ಕಲ್ಪನಾ ಜೋಶಿ,
ಕೆಪಿಸಿಸಿ ಖಾನಾಪುರ ಪ್ರಭಾರಿ ಕಾರ್ಯದರ್ಶಿ
ತಾರಮೈಣ ಜೈನ, ಖಾನಾಪುರ್ ತಾಲೂಕ ಬ್ಲಾಕ್ ಅಧ್ಯಕ್ಷರಾದ ಮಹದೇವ್ ಕೋಳಿ, ಖಾನಾಪುರ ತಾಲೂಕ ಗ್ರಾಮೀಣ ಮಹಿಳಾ ಅಧ್ಯಕ್ಷರಾದ ಮಧು ಕವಳಕರ, ಖಾನಾಪುರ ತಾಲೂಕ ಮೈನಾರಿಟಿ ಅಧ್ಯಕ್ಷರಾದ ಗುಡು ತೇಕಡಿ, ಶಂಕರಗೌಡ ಪಾಟೀಲ್, ಸುರೇಶ್ ಜಾಧವ, ಜಾಕಿ ಫನಾ೯ಂಡಿಸ, ಗೌವಸಲಾಲ ಪಟೇಲ್, ಲಕ್ಷ್ಮಣ ಮದರ,ಚಂಬಣ್ಣ ಹೊಸಮನಿ, ಈಶ್ವರ ಘಾಡಿ, ಮುಂತಾದವರು ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಇತರರು ಇತರರು ಉಪಸ್ಥಿತರಿದ್ದರು