ಬೆಳಗಾವಿ: ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿಯಾದರೆ ಉತ್ತರ ಕರ್ನಾಟಕದ ಅಭಿವೃದ್ಧಿಯಾಗಲಿದೆ ಎಂದು ಎಐಸಿಸಿ ಸಮಿತಿಯ ಕಾರ್ಯದರ್ಶಿ ಡಾ.ಅಂಜಲಿ ನಿಂಬಾಳ್ಕರ್ ಹೇಳಿದರು.
ಖಾನಾಪುರ ತಾಲೂಕ ಕಾಂಗ್ರೆಸ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನೂತನವಾಗಿ ಎಐಸಿಸಿ ಸಮಿತಿಯ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ಮಾಜಿ ಶಾಸಕಿ ಡಾ ಅಂಜಲಿ ನಿಂಬಾಳ್ಕರ್ ಹಾಗೂ ಚಿಕ್ಕೋಡಿ ಲೋಕಸಭಾ ಸದಸ್ಯ ಕುಮಾರಿ ಪ್ರಿಯಾಂಕಾ ಜಾರಕಿಹೊಳಿ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಪಂಚಾಯತ್ ಸ್ವರಾಜ ಸಮಾಚಾರದೊಂದಿಗೆ ಮಾತನಾಡಿದ ಅವರು
ಖಾನಾಪುರದ ಬಿಜೆಪಿ ಶಾಸಕರಾದ ವಿಠಲ ಹಲಗೆಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಖಾನಾಪುರ ಶಾಸಕರು ಕಾಂಗ್ರೆಸ್ ಪಕ್ಷ ಸೇರುವುದಾದರೆ ನಾನು ಅವರನ್ನು ಹೃದಯ ಪೂರಕವಾಗಿ ನಮ್ಮ ಪಕ್ಷಕ್ಕೆ ಸ್ವಾಗತವನ್ನು ಕೋರುತ್ತೇನೆ.
ಅವರ ಹೇಳಿಕೆಯನ್ನು ಸ್ವಾಗತಿಸುತ್ತೇನೆ ಖಾನಾಪುರ ಅಭಿವೃದ್ಧಿ ಆಗಬೇಕಾದರೆ ಕಾಂಗ್ರೆಸ್ ಪಕ್ಷದ ಶಾಸಕರು ಮತ್ತು ಸಚಿವರುಗಳೆ ಬೇಕಾಗಿದ್ದಾರೆ ಬಿಜೆಪಿ ಅಭಿವೃದ್ಧಿ ಕುರಿತಾಗಿ ಬರಿ ಸುಳ್ಳು ಭರವಸೆಗಳನ್ನು ನೀಡುತ್ತಾ ಇದ್ದಾರೆ ಎಂದರು.
ಖಾನಾಪುರ್ ರಸ್ತೆಗಳ ದುರ್ಗತಿಗಳನ್ನು ನೋಡಿದರೆ ಇಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಆಗಲಾರದು ಎಂದು ವಿಷಾದ ವ್ಯಕ್ತಪಡಿಸಿದರು. ನಾನು ಶಾಸಕಿಯಾಗಿದ್ದಾಗ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದ್ದೇನೆ ಅದರಲ್ಲಿ ಅರುವತ್ತು ಹಾಸಿಗೆಗಳ ತಾಯಿ ಮಕ್ಕಳ ಆಸ್ಪತ್ರೆ, ಬಸ್ ನಿಲ್ದಾಣ ವಿದ್ಯಾರ್ಥಿನಿಯರ ವಸತಿ ನಿಲಯ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ನಾನು ಮಾಡಿದ್ದೇನೆ ಆದರೆ ಈಗಿನ ಶಾಸಕರು ಬರಿ ಸುಳ್ಳು ಭರವಸೆಗಳು ಮಾಡುತ್ತಾ ಖಾನಾಪುರ ಜನತೆಗೆ ಅಭಿವೃದ್ಧಿ ವಂಚಿತರನ್ನಾಗಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.