ಬೆಳಗಾವಿ: ದಸರಾ ಹಬ್ಬದಲ್ಲಿ ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಲಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ನೈಋತ್ಯ ರೈಲ್ವೆ ವಲಯ ಬೆಂಗಳೂರಿನ ಯಶವಂತಪುರ-ಬೆಳಗಾವಿ ನಡುವೆ ವಿಶೇಷ ರೈಲು ಓಡಿಸಲಿದೆ. ಯಾವ್ಯಾವ ದಿನಾಂಕದಂದು ವಿಶೇಷ ರೈಲು ಸಂಚರಲಿಸಲಿದೆ? ರೈಲು ಸಮಯ ಇಲ್ಲಿದೆ.
- ರೈಲು ಸಂಖ್ಯೆ 06507 ಯಶವಂತಪುರ – ಬೆಳಗಾವಿ ವಿಶೇಷ ರೈಲು ಅಕ್ಟೋಬರ್ 12 ರಂದು ಸಂಜೆ 6:15ಕ್ಕೆ ಯಶವಂತಪುರ ನಿಲ್ದಾಣದಿಂದ ಹೊರಟು ಮರುದಿನ ನಸುಕಿನ ಜಾವ 5 ಗಂಟೆಗೆ ಬೆಳಗಾವಿ ತಲುಪಲಿದೆ.
- ರೈಲು ಸಂಖ್ಯೆ 06508 ಬೆಳಗಾವಿ – ಯಶವಂತಪುರ ವಿಶೇಷ ರೈಲು ಅಕ್ಟೋಬರ್ 13 ರಂದು ಸಂಜೆ 5:30ಕ್ಕೆ ಬೆಳಗಾವಿಯಿಂದ ಹೊರಟು ಮರುದಿನ ನಸುಕಿನ ಜಾವ 4:30ಕ್ಕೆ ಯಶವಂತಪುರ ತಲುಪಲಿದೆ.
ಈ ರೈಲು ತುಮಕೂರು, ಅರಸಿಕೇರೆ, ಬೀರುರು, ದಾವಣಗೆರೆ, ಹರಿಹರ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ, ಖಾನಾಪುರ ನಿಲ್ದಾಣಗಳಲ್ಲಿ ನಿಲ್ಲುತ್ತದೆ. ಈ ರೈಲು ಒಂದು ಎಸಿ 2, ನಾಲ್ಕು ಎಸಿ 3, 13 ಸೆಕೆಂಡ್ ಕ್ಲಾಸ್ ಸ್ಲೀಪರ್ ಕೋಚ್, ಎರಡು ಸೆಕೆಂಡ್ ಕ್ಲಾಸ್ ಮತ್ತು ಎರಡು ಅಂಗವಿಕಲರಿಗಾಗಿ ಮೀಸಲಾದ ಕಂಪಾರ್ಟ್ಮೆಂಟ್ ಹೊಂದಿದೆ.