Ad imageAd image

ಎತ್ತಿನಹೊಳೆ ಯೋಜನೆಗೆ ಚಾಲನೆ ಹಿನ್ನೆಲೆ ಹೋಮ – 9 ಪೂರ್ಣ ಕುಂಭಗಳಿಗೆ ಪೂಜೆ ಸಲ್ಲಿಸಿದ ಡಿಕೆಶಿ

ratnakar
ಎತ್ತಿನಹೊಳೆ ಯೋಜನೆಗೆ ಚಾಲನೆ ಹಿನ್ನೆಲೆ ಹೋಮ – 9 ಪೂರ್ಣ ಕುಂಭಗಳಿಗೆ ಪೂಜೆ ಸಲ್ಲಿಸಿದ ಡಿಕೆಶಿ
WhatsApp Group Join Now
Telegram Group Join Now

ಹಾಸನ: ಎತ್ತಿನ ಹೊಳೆ ಯೋಜನೆಗೆ (Yettinahole Project) ಚಾಲನೆ ನೀಡಲಿರುವ ಹಿನ್ನೆಲೆ ಸಕಲೇಶಪುರ ತಾಲ್ಲೂಕಿನ ದೊಡ್ಡನಾಗರ ಬಳಿ ನಡೆದ ಪೂರ್ಣಾಹುತಿ ಹೋಮ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar) ಭಾಗಿಯಾದರು. 9 ಪೂರ್ಣಾಹುತಿ ಕುಂಭಗಳಿಗೆ ಬಿಲ್ವ ಪತ್ರೆ ಹಿಡಿದು ಪೂಜೆ ಸಲ್ಲಿಸಿದರಲ್ಲದೇ ಭಕ್ತಿ ಭಾವರಿಂದ ಪೂಜೆ ನೆರವೇರಿಸಿದರು. ಇದೇ ವೇಳೆ ಗಣಪತಿ, ವಾಸ್ತು, ಮೃತ್ಯುಂಜಯ, ನವಗ್ರಹ ಹೋಮಗಳನ್ನು ನೆರವೇರಿಸಿದರು.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿಕೆಶಿ, ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಇದು ಐತಿಹಾಸಿಕ ದಿನ, ಐತಿಹಾಸಿಕ ಕ್ಷಣ. ಇದು ಇತ್ತೀಚಿನ ವರ್ಷಗಳಲ್ಲಿ ಅತಿ ದೊಡ್ಡ ಯೋಜನೆ. ರಾಜ್ಯದ ಜನತೆಗೆ ತುಂಬಾ ಸಂತೋಷವಾಗಿದೆ. ಗೌರಿ ಹಬ್ಬದ ದಿನವೇ ಗಂಗೆ ಪೂಜೆ ಮಾಡುತ್ತಿದ್ದೇವೆ. ನಮ್ಮ ಸರ್ಕಾರ ಭಗೀರಥ ಪ್ರಯತ್ನ ಮಾಡಿ ಯೋಜನೆ ಮಾಡಿದೆ. ಈ ಯೋಜನೆ ಜಾರಿ ಸಾದ್ಯವೇ ಇಲ್ಲ ಎಂದಿದ್ದರು, ಆದರೆ ನಾವು ಸವಾಲಾಗಿ ಸ್ವೀಕಾರ ಮಾಡಿ ಜಾರಿ ಮಾಡಿದ್ದೇವೆ ಎಂದು ಬೀಗಿದ್ದಾರೆ.

ಛಲ, ಸಂಕಲ್ಪ, ಸ್ಚಇಚ್ಛೆಯಿಂದ ಯೋಜನೆ ಜಾರಿ ಮಾಡಿದ್ದೇವೆ. ಈ ಯೋಜನೆ ನಮ್ಮ ಸಂಕಲ್ಪ, ನಮ್ಮ ಪ್ರತಿಷ್ಠೆ ಕೂಡ ಆಗಿತ್ತು. ಅಧಿಕಾರಿಗಳು, ನೌಕರರು ಯೋಜನೆ ಮಾಡಿದವರು ಎಲ್ಲರ ಪರಿಶ್ರಮ ಇದೆ. ಈ ಯೋಜನೆ ಜಾರಿಗಾಗಿ ಹಲವರು ಪ್ರಯತ್ನ ಮಾಡಿದ್ದರು. ಆದರೆ, ಸಿದ್ದರಾಮಯ್ಯ ಅವರು ತೀರ್ಮಾನ ಮಾಡಿ ಜಾರಿ ಮಾಡಿದ್ರು. ಇದು ನನಗೆ ಸಿಕ್ಕ ಭಾಗ್ಯ ಎಂದು ಬಣ್ಣಿಸಿದರು.

ಗಂಗೆ-ಗೌರಿಗೆ ನಮನ ಅರ್ಪಿಸಿ ಯೋಜನೆಗೆ ಚಾಲನೆ ನೀಡಿದ್ದೇವೆ ಎನ್ನುತ್ತಲೇ ʻಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯʼ ಎಂಬ ಶ್ಲೋಕ ಹೇಳಿದರು. ಇದು ಕೆರೆ ತುಂಬಿಸೊ ಭಾಗ್ಯದ ಯೋಜನೆ, ಏನೇ ಕಷ್ಟ ಆದರೂ ಜಾರಿ ತರೋ ಪ್ರಯತ್ನ ಮಾಡಿದ್ದೇನೆ. ಇನ್ನೂ ಚಾಲೆಂಜ್ ಇದೆ ಎಲ್ಲವನ್ನು ಹಿಮ್ನೆಟ್ಟಿಸಿ ಜಾರಿ ಮಾಡ್ತೇವೆ ಎಂದು ಗುಡುಗಿದ್ದಾರೆ.

WhatsApp Group Join Now
Telegram Group Join Now
Share This Article