Ad imageAd image

ಢೋಲ ತಾಶೆ ಕುಣಿತ ಜಯಘೋಷಗಳ ನಡುವೆ ಮರಾಠಾ ಗಲ್ಲಿ ಮಹಾದ್ವಾರ ರೋಡ ಗಣೇಶನ ಆಗಮನ

ratnakar
ಢೋಲ ತಾಶೆ ಕುಣಿತ ಜಯಘೋಷಗಳ ನಡುವೆ ಮರಾಠಾ ಗಲ್ಲಿ ಮಹಾದ್ವಾರ ರೋಡ ಗಣೇಶನ ಆಗಮನ
WhatsApp Group Join Now
Telegram Group Join Now

ಬೆಳಗಾವಿ: ದಿನಾಂಕ 04-09-2024 ರಂದು ಮರಾಠಾ ಗಲ್ಲಿ ಮಹಾದ್ವಾರ ರಸ್ತೆಯ ಶ್ರೀ ಗಣೇಶ ಮೂರ್ತಿಯ ಆಗಮನ ಸಮಾರಂಭವು ಅತ್ಯಂತ ವಿಜ್ರಂಬನೆಯಿಂದ ನಡೆಯಿತು. ನಗರದ ತಿಲಕ ಚೌಕನಲ್ಲಿ ಮಾಜಿ ಶಾಸಕ ಅನಿಲ ಬೆನಕೆ ಅವರಿಂದ ಪೂಜೆ ಸಲ್ಲಿಸುವ ಮುಖಾಂತರ ಮೆರವಣಿಗೆ ಚಾಲನೆ ನೀಡಲಾಯಿತು. ಅಲ್ಲಿಂದ ಶನಿ ಮಂದಿರ, ಕಪಿಲೇಶ್ವರ ರಸ್ತೆಯಿಂದ ಮರಾಠಾ ಗಲ್ಲಿ ಮಹಾದ್ವಾರ ರಸ್ತೆಗೆ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ವಜ್ರನಾದ ಢೋಲ ತಾಶಾ ತಂಡದ 50 ಡೋಲುಗಳು, 15 ತಾಶೆಗಳು ಮತ್ತು 16 ಧ್ವಜಗಳು ಸೇರಿದಂತೆ ಒಟ್ಟು 150 ಧ್ವಜಧಾರಿಗಳು ಪಾಲ್ಗೊಂಡು ಶ್ರೀ ಗಜಾನನನಿಗೆ ಗೌರವ ವಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಅನಿಲ ಬೆನಕೆ ಮಾತನಾಡಿ, ಗಣೇಶ ಚತುರ್ಥಿಯ ಶುಭ ಪರ್ವದಲ್ಲಿ ಸಂಪ್ರದಾಯವು ಆಧುನಿಕತೆಯನ್ನು ಸಂಧಿಸುವ ವಿಶಿಷ್ಠ ಹಬ್ಬ ಆರಂಭವಾಗುತ್ತದೆ. ಆಗಮನ ಸಮಾರಂಭದಲ್ಲಿ ಸಾಂಪ್ರದಾಯಿಕ ಹೊರಾಂಗಣ ಆಟಗಳಾದ ಮಲ್ಲಖಂಬ ಪ್ರದರ್ಶನ ಮತ್ತು ಮಹಿಳೆಯರಿಂದ ಶೌರ್ಯದ ಪ್ರದರ್ಶನ ಕತ್ತಿವರಸೆ ಪ್ರದರ್ಶನ ತೋರಿಸಲಾಯಿತು. ಗೂಳಿ ಜೋಡಿ, ಧ್ವಜ ದಳ ಮತ್ತು ಅತ್ಯಾಚಾರ ಘಟನೆಗಳನ್ನು ಪ್ರತಿಭಟಿಸುವ ಫಲಕಗಳನ್ನು ಒಳಗೊಂಡಂತೆ ಸಾಮಾಜಿಕ ಸಂದೇಶ ಫಲಕಗಳನ್ನು ಹಾಕುವ ಮೂಲಕ ಇಂತಹ ಜ್ವಲಂತ ಸಮಸ್ಯೆಯ ಬಗ್ಗೆ ಸಾಮಾಜಿಕ ಬದ್ದತೆಯನ್ನು ಇಟ್ಟುಕೊಂಡು ಸಮಾಜಕ್ಕೆ ವಿಭಿನ್ನ ರೀತಿಯಲ್ಲಿ ಸಂದೇಶಗಳನ್ನು ಹರಡುವ ಕಾರ್ಯ ಮರಾಠಾ ಗಲ್ಲಿ ಮಹಾದ್ವಾರ ರಸ್ತೆಯ ಸಾರ್ವಜನಿಕ ಶ್ರೀ ಗಣೇಶ ಉತ್ಸವ ಮಂಡಳದ ಕಾರ್ಯಕರ್ತರು ಮಾಡಿದಕ್ಕೆ
ಅವರಿಗೆ ಧನ್ಯವಾದಗಳು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಅನಿಲ ಬೆನಕೆ, ಮಂಜುನಾಥ ಅಣ್ವೇಕರ, ವಿನಾಯಕ ಜಿಗಜಿನ್ನಿ, ರಾಜು ಭಾತಕಾಂಡೆ, ವಿವೇಕ ಪಾಟೀಲ, ವೃಷಭ ಚಿಖಲಕರ, ದೌಲತ ಜಾಧವ, ಮಂದಾರ ಗಾವಡೆ, ಸಂದೀಪ ಭಾತಕಾಂಡೆ, ಸಮ್ರಾಟ ಪಾಟೀಲ, ರುಪೇಶ ಪಾಟೀಲ, ಸಂಜಯ ಕಾಳಸೆಕರ, ಪ್ರಕಾಶ ಪಾಟೀಲ, ಎಕನಿಷ್ಠ ಯುವಕ ಮಂಡಳ, ಸಾರ್ವಜನಿಕ ಶ್ರೀ ಗಣೇಶ ಉತ್ಸವ ಮಂಡಳ ಸೇರಿದಂತೆ ಮರಾಠಾ ಗಲ್ಲಿ ಪಂಚರು, ಹಿರಿಯರು ಹಾಗೂ ನೂರಾರು ಸಂಖ್ಯೆಯಲ್ಲಿ ಗಣೇಶ ಭಕ್ತರು ಉಪಸ್ಥಿತರಿದ್ದರು.

 

WhatsApp Group Join Now
Telegram Group Join Now
Share This Article