ಕಿಚ್ಚ ಸುದೀಪ್ (Sudeep) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ (biggboss) ಇರ್ತಾರಾ ಅಥವಾ ಇಲ್ಲವಾ ಎನ್ನುವುದು ಯಕ್ಷ ಪ್ರಶ್ನೆಯಾಗಿತ್ತು. ಕೊನೆಗೂ ಇದಕ್ಕೆ ಉತ್ತರ ಸಿಕ್ಕಿದೆ. ಕಲರ್ಸ್ ಕನ್ನಡ ವಾಹಿನಿ ಬಿಗ್ ಬಾಸ್ ಪ್ರೋಮೋ ರಿಲೀಸ್ ಮಾಡಿದೆ. ಹಾಗಂತ ಈ ಪ್ರೋಮೋದಲ್ಲಿ(Promo) ಸುದೀಪ್ ಅವರ ಎಂಟ್ರಿ ಆಗಿಲ್ಲ. ಆದಾಗ್ಯೂ ಸುದೀಪ್ ಅವರು ಇರುತ್ತಾರೋ ಅಥವಾ ಇಲ್ಲವೋ ಎನ್ನುವ ವಿಚಾರಕ್ಕೆ ಸ್ಪಷ್ಟನೆ ಸಿಕ್ಕಂತೆ ಆಗಿದೆ.
ನಿರೂಪಕ ಸುದೀಪ್ ಅವರ ಸಿನಿಮಾ ಕೆಲಸಗಳಿಗೆ ಈ ಶೋ ಅಡಚಣೆ ಉಂಟುಮಾಡಿತ್ತು. ಎಲ್ಲೇ ಇದ್ದರೂ ಬಿಗ್ ಬಾಸ್ಗಾಗಿ ಅವರು ಬೆಂಗಳೂರಿಗೆ ಬರಬೇಕಿತ್ತು. ಈಗ ಅವರು 2-3 ಸಿನಿಮಾಗಳನ್ನು ಒಟ್ಟೊಟ್ಟಿಗೆ ಶೂಟ್ ಮಾಡುವ ಆಲೋಚನೆಯಲ್ಲಿ ಇದ್ದಾರೆ. ಹೀಗಾಗಿ, ಅವರು ಬಿಗ್ ಬಾಸ್ನಿಂದ ಹೊರಕ್ಕೆ ನಡೆಯಲಿದ್ದಾರೆ ಎನ್ನಲಾಗಿತ್ತು. ಆದರೆ, ಆ ರೀತಿ ಆಗಿಲ್ಲ. ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ ನಡೆಸಿಕೊಡಲಿದ್ದಾರೆ.
ಬಿಗ್ ಬಾಸ್’ ಪ್ರೋಮೋದಲ್ಲಿ ಲೋಗೋ ರಿವೀಲ್ ಮಾಡಲಾಗಿದೆ ಅಷ್ಟೇ. ಕ್ಯಾಪ್ಶನ್ನಲ್ಲಿ ‘Kichcha Sudeep’ ಹ್ಯಾಶ್ಟ್ಯಾಗ್ ಹಾಕಲಾಗಿದೆ. ಇದರಿಂದ ಸುದೀಪ್ ಅವರು ಇರೋದು ಪಕ್ಕಾ ಆಗಿದೆ. ಈ ವಿಡಿಯೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಕ್ಕಿದೆ.