Ad imageAd image

ಕ್ಷೇತ್ರದ ಜನ ಬೆಂಗಳೂರಿಗೆ ಬರೋದು ಬೇಡ, ಅಹವಾಲು ಆಲಿಸಲು ನಾನೇ ಕನಕಪುರಕ್ಕೆ ಬರುವೆ; ಸಮಯ ನಿಗದಿ ಮಾಡಿದ ಡಿಕೆ ಶಿವಕುಮಾರ್

ratnakar
ಕ್ಷೇತ್ರದ ಜನ ಬೆಂಗಳೂರಿಗೆ ಬರೋದು ಬೇಡ, ಅಹವಾಲು ಆಲಿಸಲು ನಾನೇ ಕನಕಪುರಕ್ಕೆ ಬರುವೆ; ಸಮಯ ನಿಗದಿ ಮಾಡಿದ ಡಿಕೆ ಶಿವಕುಮಾರ್
WhatsApp Group Join Now
Telegram Group Join Now

ಬೆಂಗಳೂರು: ಪ್ರತಿ ತಿಂಗಳು 2 ಮತ್ತು 3ನೇ ಶನಿವಾರ ಕನಕಪುರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಭೇಟಿ ನೀಡಲಿದ್ದು ಕ್ಷೇತ್ರದ ಜನರ ಸಮಸ್ಯೆ ಆಲಿಸಲಿದ್ದಾರೆ. ಕ್ಷೇತ್ರದ ಜನರು ಭೇಟಿ ಮಾಡಲು ಬೆಂಗಳೂರಿಗೆ ಬರುವುದು ಬೇಡ. ನಾನೇ ಕನಕಪುರಕ್ಕೆ ಬಂದು ನಿಮ್ಮ ಕಷ್ಟ-ಸುಖ ವಿಚಾರಿಸುತ್ತೇನೆ. ಕನಕಪುರಕ್ಕೆ ಬಂದು ಕ್ಷೇತ್ರದ ಜನರ ಅಹವಾಲನ್ನು ಸ್ವೀಕರಿಸುವೆ ಎಂದು ಕನಕಪುರ ಕ್ಷೇತ್ರದ ಜನರಿಗೆ ಡಿ.ಕೆ.ಶಿವಕುಮಾರ್​ ಸಂದೇಶ ನೀಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಪ್ರತಿ ತಿಂಗಳು 2 ನೇ ಮತ್ತು 3 ನೇ ಶನಿವಾರ ಕನಕಪುರ ವಿಧಾನಸಭೆ ಕ್ಷೇತ್ರಕ್ಕೆ ಭೇಟಿ ನೀಡಲಿದ್ದಾರೆ. ಆ ದಿನಗಳಂದು ಕ್ಷೇತ್ರದ ಜನರ ಸಮಸ್ಯೆ, ಅಹವಾಲು ಆಲಿಸಲಿದ್ದಾರೆ.

ಕನಕಪುರ ಕ್ಷೇತ್ರದ ಜನರು ತಮ್ಮನ್ನು ಭೇಟಿ ಮಾಡಲು ಬೆಂಗಳೂರಿಗೆ ಬರುವುದು ಬೇಡ. ತೊಂದರೆ ತೆಗೆದುಕೊಳ್ಳುವುದು ಬೇಡ. ನಾನೇ ಕನಕಪುರಕ್ಕೆ ಬಂದು ನಿಮ್ಮ ಕಷ್ಟ-ಸುಖ ವಿಚಾರಿಸಿ, ಅಹವಾಲು ಸ್ವೀಕರಿಸಲಿದ್ದೇನೆ ಎಂದು ಡಿ.ಕೆ. ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ, ಜೆಡಿಎಸ್ ನಾಯಕರ ಮೈಸೂರು ಪಾದಯಾತ್ರೆಗೆ ಕಾಂಗ್ರೆಸ್​ನಿಂದಲೂ ಕೌಂಟರ್ ನಡೀತಿದೆ. ಈಗಾಗಲೇ ಹಳೇ ಮೈಸೂರು ಭಾಗವನ್ನೇ ಟಾರ್ಗೆಟ್ ಮಾಡಿ ಕಾಂಗ್ರೆಸ್​, ಜನಾಂದೋಲನ ಸಭೆಯನ್ನ ಮಾಡ್ತಿದೆ. ಬಿಜೆಪಿಯ ನಾಯಕರ ಪ್ರತಿಯೊಂದು ಆರೋಪಕ್ಕೂ ಕೌಂಟರ್ ಕೊಡೋ ಕೆಲಸವೂ ಆಗ್ತಿದೆ. ಇನ್ನು ಮೈಸೂರಿಗೆ ಬಿಜೆಪಿ ಪಾದಯಾತ್ರೆ ತಲುಪೋ ಒಂದು ದಿನದ ಮುಂಚೆಯೇ, ಕಾಂಗ್ರೆಸ್​ ಜನಾಂದೋಲನ ಸಮಾವೇಶಕ್ಕೆ ಬಿಗ್ ಪ್ಲ್ಯಾನ್​ ಮಾಡಿಕೊಂಡಿದೆ.

ಆಗಸ್ಟ್​ 9ರಂದು ಮೈಸೂರಿನಲ್ಲಿ ಕಾಂಗ್ರೆಸ್​ ಜನಾಂದೋಲನ ಸಮಾವೇಶಕ್ಕೆ ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಮಹಾರಾಜ ಕಾಲೇಜು ಮೈದಾನದಲ್ಲಿ ಸಮಾವೇಶಕ್ಕೆ ಸಿದ್ಧತೆ ನಡೆಸಲಾಗಿದೆ. ಸಮಾವೇಶದ ಸ್ಥಳಕ್ಕೆ ಭೇಟಿ ನೀಡಿ ಸಿಎಂ ಪರಿಶೀಲನೆ ನಡೆಸಿದ್ದಾರೆ. ಸಮಾವೇಶದ ರೂಪರೇಷಗಳ ಕುರಿತು ಸಿಎಂ ಮಾಹಿತಿ ಪಡೆದ್ದಾರೆ.

ಮೈಸೂರಿನಲ್ಲಿ ಬೃಹತ್ ಸಮಾವೇಶ ನಡೆಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ. ಕಾಂಗ್ರೆಸ್​ನ ಎಲ್ಲಾ ಶಾಸಕರು, ಸಚಿವರಿಗೆ ಭಾಗವಹಿಸಲು ಸೂಚನೆ ನೀಡಲಾಗಿದೆ. ಇಡೀ ಸರ್ಕಾರ, ಪಕ್ಷವೇ ಮೈಸೂರಿನಲ್ಲಿ ಹಾಜರಿರುವಂತೆ ಸೂಚನೆ ನೀಡಲಾಗಿದೆ. ಇನ್ನು ಹೈಕಮಾಂಡ್ ನಾಯಕರಿಂದಲೇ ಸಚಿವರು, ಶಾಸಕರಿಗೆ ಸೂಚನೆ ನೀಡಲಾಗಿದೆ. ಆಗಸ್ಟ್​ 9ರಂದು ಮೈಸೂರಿನಲ್ಲಿ ಬೃಹತ್​ ಸಮಾವೇಶಕ್ಕೆ ಪ್ಲ್ಯಾನ್ ಮಾಡಲಾಗಿದೆ. ಇನ್ನು ಲಕ್ಷಾಂತರ ಜನರನ್ನು ಕರೆತರುವಂತೆ ಶಾಸಕರು, ಸಚಿವರಿಗೆ ಸೂಚನೆ ಕೊಡಲಾಗಿದೆ. ಬಿಜೆಪಿ ಪಾದಯಾತ್ರೆ ಮುಕ್ತಾಯವಾಗುವ ಒಂದು ದಿನ ಮೊದಲೇ ಕಾಂಗ್ರೆಸ್​ ಸಮಾವೇಶ ಮಾಡ್ತಿದೆ. ಸಮಾವೇಶದಲ್ಲಿ ಬಿಜೆಪಿ ವಿರುದ್ಧ ಚಾರ್ಜ್​ಶೀಟ್ ಬಿಡುಗಡೆ ಮಾಡೋಕೆ ಕಾಂಗ್ರೆಸ್​ ಸಿದ್ಧತೆ ಮಾಡಿಕೊಂಡಿದೆ. ಬಿಜೆಪಿ ಸರ್ಕಾರ ಅವಧಿಯ ಹಗರಣಗಳ ಚಾರ್ಜ್​ಶೀಟ್ ಪುಸ್ತಕವನ್ನ ರೆಡಿ ಮಾಡಲಾಗಿದೆ.

WhatsApp Group Join Now
Telegram Group Join Now
Share This Article