ಬೆಳಗಾವಿ: ಮಾದಿಗ ಸಮಾಜದ ನಾಲ್ಕೈದು ದಶಕಗಳ ಬೇಡಿಕೆಯಾದ ಒಳ ಮೀಸಲಾತಿಯನ್ನು ಜಾರಿ ಮಾಡಬಹುದು ಅದರ ಸಂಪೂರ್ಣ ಅಧಿಕಾರ ಆಯಾ ರಾಜ್ಯ ಸರ್ಕಾರಕ್ಕೆ ಇದೆ ಎಂದು ಸರ್ವೋಚ್ಚ ನ್ಯಾಯಾಲಯದ ಏಳು ಜನ ನ್ಯಾಯಾಧೀಶರ ಸಂವಿಧಾನ ಪೀಠವು ಅಂತಿಮ ತೀರ್ಪು ನೀಡಿರುವುದು ಸ್ವಾಗತಾರ್ಹ ತೀರ್ಪು ಎಂದು ಬೆಳಗಾವಿ ಜಿಲ್ಲಾ ಮಾದಿಗ ಸಂಘಟನೆಗಳ ಒಕ್ಕೂಟ ಹಾಗೂ ರಾಯಬಾಗ್ ಶಾಸಕ ದುರ್ಯೋಧನ ಐಹೊಳಿ ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಬೆಳಗಾವಿ ಜಿಲ್ಲಾ ಮಾದಿಗ ಸಮಾಜ ಸಂಘಟನೆಗಳ ಒಕ್ಕೂಟ ಸ್ವಾಗತ ಮಾಡುತ್ತದೆ. ಮಾದಿಗ ಸಮಾಜದ ಅನೇಕ ಮುಖಂಡರುಗಳ ತ್ಯಾಗ ಬಲಿದಾನ, ಪರಿಶ್ರಮವೇ ಇವತ್ತಿನ ಈ ತೀರ್ಪಾಗಿದೆ. 2011 ರಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ಆಯೋಗಕ್ಕೆ ಹಣಕಾಸಿನ ನೆರವು ನೀಡಿದ್ದರು ಆಯೋಗ ಕೆಲಸ ಪ್ರಾರಂಭಿಸಿ 2012ರಲ್ಲಿ ಸರ್ಕಾರ ವರದಿ ಸಲ್ಲಿಸಲಾಯಿತು. ನಂತರ ಇಚ್ಛಾ ಶಕ್ತಿ ಕೊರತೆಯಿಂದ ಮತ್ತು ಕಾನೂನಿನ ತೊಡಕಿನಿಂದ ಆಯೋಗದ ವರದಿಯನ್ನು ಸ್ವೀಕರಿಸಿದರು ಕೂಡ ಜಾರಿಗೊಳಿಸಲಾಗಲಿಲ್ಲ ನಂತರ ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರ ನೇತೃತ್ವದಲ್ಲಿ 2023ರಲ್ಲಿ ಹೊಸ ಸಮಿತಿಯನ್ನು ರಚಿಸಿದೆ. ಮೀಸಲಾತಿಯನ್ನು ಹೆಚ್ಚಿಸಿ ಒಳ ಮೀಸಲಾತಿ ನಿಗದಿಪಡಿಸಿ ಕೇಂದ್ರಕ್ಕೆ ಸರ್ಕಾರಕ್ಕೆ ಕಳಿಸಲಾಯಿತು. ಆದರೂ ಅಲ್ಲಿಯೂ ಅವರಿಗೆ ಯಾವುದೇ ಸಾಮಾಜಿಕ ನ್ಯಾಯ ಜನಾಂಗಕ್ಕೆ ಸಿಗ್ಲಿಲ್ಲ ಸದರಿ ವಿಷಯಕ್ಕೆ ಸಂಬಂಧಪಟ್ಟಂತೆ ಭಾರತ ಸರ್ಕಾರ ಸರ್ವೋಚ್ಚ ನ್ಯಾಯಾಲಯ ಏಳು ಸದಸ್ಯರ ಒಳಗೊಂಡ ಸಂವಿಧಾನಕ ಪೀಠವನ್ನು ರಚಿಸಿ ಕುಲಂಕುಶವಾಗಿ ಚರ್ಚಿಸಿ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡು ನೇತೃತ್ವದಲ್ಲಿ ಐತಿಹಾಸಿಕ ತೀರ್ಪು ನೀಡಿದ್ದಾರಡ. ಅದಕ್ಕಾಗಿ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಹಾಗೂ ಸವಿಧಾನಿಕ ಪೀಠದ ಒಳ ಮೀಸಲಾತಿ ಪರ್ವಾಗಿದ್ದ ಎಲ್ಲಾ ನ್ಯಾಯಾಧೀಶರಿಗೆ ನಮ್ಮ ಕರ್ನಾಟಕ ರಾಜ್ಯದ ಮಾದಿಗ ಸಮಾಜದ ಎಲ್ಲಾ ಸಂಘಟನೆಗಳು ಎಲ್ಲಾ ನಾಯಕರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಒಳ ಮೀಸಲಾತಿಯ ಐತಿಹಾಸಿಕ ತೀರ್ಪು ನಮ್ಮೆಲ್ಲರಿಗೆ ಸಂತಸವನ್ನು ಹೆಚ್ಚಿಸಿದೆ ಈ ರೀತಿ ನಮ್ಮ ಸಮಾಜದ ಬಹುದಿನದ ಬೇಡಿಕೆ ಸ್ಪಂದಿಸಿ ನ್ಯಾಯಾಲಯದಲ್ಲಿ ನ್ಯಾಯವಾದಿಗಳನ್ನು ನೇಮಿಸುವುದರಿಂದ ಹಿಡಿದು ತೀರ್ಪು ನಮ್ಮ ಪರವಾಗಿ ಬರುವವರೆಗೂ ಶ್ರಮಿಸಿದ ಎಲ್ಲಾ ನಾಯಕರುಗಳಿಗೆ ನಾವು ಅಭಿನಂದಿಸುತ್ತೇವೆ.
ಜೊತೆಗೆ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರಿಗೂ ನಮ್ಮ ಸಮಾಜದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಿದರು. ನಂತರ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಮಾಲಾರ್ಪಣೆ ಮತ್ತು ಪುಷ್ಪ ನಮನ ಸಲ್ಲಿಸಿ ರಾಣಿ ಚೆನ್ನಮ್ಮ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ರಾಜೇಂದ್ರ ಐಹೊಳೆ ಜಿಲ್ಲಾ ಜಿಲ್ಲಾಧ್ಯಕ್ಷರು, ಮುರುಗೇಶ್ ಕಂಬನ್ನವರ ರಾಜ್ಯ ಸದಸ್ಯರು, ಬಸವರಾಜ ಸನದಿ ರಾಜ್ಯ ಉಪಾಧ್ಯಕ್ಷರು, ಸಿದ್ದು ಮೈತ್ರಿ ರಾಜ್ಯ ಸಮಿತಿಯ ಸದಸ್ಯರು,
ಎನ್ ಪ್ರಶಾಂತ್ ರಾವ ಸಾಮಾಜಿಕ ಮುಖಂಡರು, ವಿನಯನಿಧಿ ಕಮಲ ವಕೀಲರು, ಶಂಕರ್ ದೊಡಮನಿ, ಸಂಘಟನೆ ಕಾಗವಾಡ,ಸವದತ್ತಿ, ಬೈಲಹೊಂಗಲ, ನಿಪ್ಪಾಣಿ, ಚಿಕ್ಕೋಡಿ ಅಧ್ಯಕ್ಷರುಗಳು ಉಪಸ್ಥಿತರಿದ್ದರು.