Ad imageAd image

ಮಟನ್​ ಊಟ ಮಾಡಿ ಒಂದೇ ಕುಟುಂಬದ ನಾಲ್ವರ ಸಾವು

ratnakar
ಮಟನ್​ ಊಟ ಮಾಡಿ ಒಂದೇ ಕುಟುಂಬದ ನಾಲ್ವರ ಸಾವು
WhatsApp Group Join Now
Telegram Group Join Now

ರಾಯಚೂರು: ಮಟನ್​ ಊಟ ಮಾಡಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಸಿರವಾರ ತಾಲೂಕಿನ ಕಲ್ಲೂರು ಗ್ರಾಮ ನಡೆದಿದೆ. ಭೀಮಣ್ಣ (60), ಪತ್ನಿ ಈರಮ್ಮ (54), ಮಗ ಮಲ್ಲೇಶ್ (19), ಪುತ್ರಿ ಪಾರ್ವತಿ (17) ಮೃತರು. ಭೀಮಣ್ಣ ಮತ್ತು ಈರಮ್ಮ ಮತ್ತೊಬ್ಬ ಪುತ್ರಿ ಮಲ್ಲಮ್ಮ (18) ಎಂಬವರ ಸ್ಥಿತಿ ಗಂಭೀರವಾಗಿದ್ದು, ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಟನ್ ಮಾಡುವ ವೇಳೆ ಅಡುಗೆಯಲ್ಲಿ ಹಲ್ಲಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸಿರವಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

WhatsApp Group Join Now
Telegram Group Join Now
Share This Article