ಶೆಫಡ್ಸ್೯ ಇಂಡಿಯಾ ಇಂಟರ್ನ್ಯಾಷನಲ್ 2014ರ ಅಕ್ಟೋಬರ್ 2ರಿಂದ ಗಾಂಧಿ ಜಯಂತಿಯ ನಿಮಿತ್ತ ಆರಂಭಗೊಂಡ ಈ ಸಂಸ್ಥೆ ತನ್ನ ಒಂಬತ್ತನೇ ವಾರ್ಷಿಕೋತ್ಸವವನ್ನು 2023 ಅಕ್ಟೋಬರ್ 3 ರಂದು ಮಂಗಳವಾರ ಬೆಳಗಾವಿಯಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿದೆ ಎಂದು ಬೆಳಗಾವಿ ಜಿಲ್ಲಾ ಕ್ರೀಡಾಂಗಣ ಸುದ್ದಿಗಾರರೊಂದಿಗೆ ವಿಧಾನ ಪರಿಷತ್ ಸದಸ್ಯರಾದ ಎಚ್ ವಿಶ್ವನಾಥ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಪೇಪರ್ಸ್ ಇಂಡಿಯಾ ಇಂಟರ್ನ್ಯಾಷನಲ್ 9ನೇ ಸಮಾವೇಶವನ್ನು ಬೆಳಗಾವಿಯಲ್ಲಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಸಮಸ್ತ ಕುರುಬ ಸಮುದಾಯ ಬೃಹತ ರಾಷ್ಟ್ರೀಯ ಸಮಾವೇಶ ಇದಾಗಲಿದೆ.
ಸುಮಾರು 2 ಲಕ್ಷಗಳ ಜನ ಸೇರುವ ನಿರೀಕ್ಷೆ ಇದೆ ನಾಡಿನ ಮತ್ತು ಗಡಿಯಾಚೆ ಸಮಸ್ತ ಕುರುಬ ಸಮುದಾಯದ ಬಾಂಧವರು, ಸಂಘಟನೆಯ ಎಲ್ಲಾ ಕಾರ್ಯಕಾರಿಗಳು ಸಹಭಾಗಿತ್ವ ನೀಡಿದ್ದಾರೆ. ಈ ಸಮಾವೇಶದಲ್ಲಿ ದೇಶದ ಅನೇಕ ಸಮಾಜದ ಮುಖಂಡರುಗಳು ರಾಜಕೀಯ ಮುಖಂಡರುಗಳು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಕುರುಬ ಸಮುದಾಯವು ಅತಿ ದೊಡ್ಡ ಸಮುದಾಯ ದೇಶದ ವಿವಿಧ ರಾಜ್ಯಗಳಲ್ಲಿ ವಿವಿಧ ಹೆಸರುಗಳಿಂದ ಗುರುತಿಸಲ್ಪಡುತ್ತಿದೆ. ರಾಜಕೀಯ ಹಕ್ಕೊತ್ತಾಯ ಮತ್ತು ನಿರ್ಣಯಗಳನ್ನು ಈ ಸಮಾವೇಶದಲ್ಲಿ ಕೈಗೊಳ್ಳುವ ನಿರೀಕ್ಷೆ ಇದೆ. ಮೀಸಲಾತಿ ಹಾಗೂ ಜಾತಿಗಣತಿಯ ಕುರಿತು ಈ ಸಮಾವೇಶದಲ್ಲಿ ಪ್ರಸ್ತಾಪಿಸಲಾಗುವುದು.
ಮಾಜಿ ಸಚಿವರು ಎಚ್ ಎಂ ರೇವಣ್ಣ ಮಾತನಾಡಿ ಈ ಸಮಾವೇಶದಲ್ಲಿ ಸಮುದಾಯದ ರಾಜಕೀಯ ಹಾಗೂ ಮೀಸಲಾತಿಯ ಕುರಿತು ಹಕ್ಕೊತ್ತಾಯಗಳನ್ನು ಪ್ರತಾಪಿಸಲಾಗುವುದು. ಸಮುದಾಯದ ಮುಖಂಡರಾಗಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮಾಜವನ್ನು ಪ್ರತಿನಿಧಿಸುತ್ತಿದ್ದು ಅವರನ್ನು ಸಮಾವೇಶದಲ್ಲಿ ಸಮುದಾಯದ ವತಿಯಿಂದ ಸನ್ಮಾನಿಸಲಾಗುವುದು.
ಎರಡು ದಿನಗಳ ಕಾಲ ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾವೇಶ ನಡೆಯಲಿದೆ. ಸಮಾವೇಶದ ವೇದಿಕೆಗೆ ವೀರಾಣಿ ಕಿತ್ತೂರು ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ನಾಮಕರಣ ಮಾಡಲಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಎಚ್ ವಿಶ್ವನಾಥ್ ಮಾಜಿ ಸಚಿವರು ಹಾಗೂ ಹಾಲಿ ವಿಧಾನ ಪರಿಚಯ ಸದಸ್ಯರು ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರು ಶೆಫಡ್ಸ್೯ಇಂಡಿಯಾ ಇಂಟರ್ನ್ಯಾಷನಲ್ , ಮಾಜಿ ಸಚಿವರು ಸಂಸ್ಥಾಪಕ ರಾಷ್ಟ್ರೀಯ ಉಪಾಧ್ಯಕ್ಷರಾದ ಎಚ್ಎಂ ರೇವಣ್ಣ ಅಧ್ಯಕ್ಷರು ಕರ್ನಾಟಕ ಶೆಫಡ್ಸ್೯ ಇಂಡಿಯಾ ಇಂಟರ್ನ್ಯಾಷನಲ್, ಸಿ ಎಂ ನಾಗರಾಜ್ ಮಹಾ ಪ್ರಧಾನ ಕಾರ್ಯದರ್ಶಿ, ಎಂ ನಾಗರಾಜ್ ಖಜಾಂಚಿ, ಜಯಪ್ಪ ಹಿರಿಯ ಉಪಾಧ್ಯಕ್ಷ ಬಾಬು ಎಸ್ ಜಿದ್ದೀಮನಿ, ಪ್ರೇಮಲತಾ ಎನ ಹಚ ಮಹಿಳಾ ವಿಭಾಗ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷರಾದ ಲಕ್ಷ್ಮಣರಾವ್ ಚಿಂಗಳ್ಳಿ ವಿವೇಕ್ ರಾವ್ ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು