ಬೆಳಿಗ್ಗೆಯಿಂದ ಮತದಾನ ಪ್ರಕ್ರಿಯೆ ಜೊರಾಗಿ ನಡೆದಿದ್ದು ಎಲ್ಲರೂ ಮತಗಟ್ಟೆಯತ್ತ ಹೆಜ್ಜೆ ಹಾಕುತ್ತಿದ್ದು ಹಕ್ಕು ಚಲಾವಣೆ ಮಾಡುತ್ತಿದ್ದಾರೆ. ಬೆಳಿಗ್ಗೆಯಿಂದ ಇಲ್ಲಿಯವರೆಗೆ ರಾಜ್ಯದಲ್ಲಿ 8.26% ಪ್ರತಿಶತ ಮತದಾನ ಪ್ರಕ್ರಿಯೆ ನಡೆದಿದೆ.
ಬೆಳಿಗ್ಗೆಯಿಂದ ಜನಸಾಮಾನ್ಯರ ಜೊತೆ ಜನಪ್ರತಿನಿದಿಗಳು, ಚಲನಚಿತ್ರ ನಟರು, ಅಧಿಕಾರಿಗಳು ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾಯಿಸುತ್ತಿದ್ದು ಎಲ್ಲರೂ ಮತ ಚಲಾಯಿಸಿ 100% ಪ್ರತಿಶತ ಯಶಸ್ವಿ ಮತದಾನಕ್ಕೆ ಸಹಕರಿಸಿ ಎಂದು ಸಂದೇಶ ನೀಡಿದ್ದಾರೆ.
ವಯೋವೃದ್ದರು, ಅಂಗವಿಕಲರು ಕೂಡ ಮತಗಟ್ಟೆಗೆ ಬಂದು ಮತ ಚಲಾವಣೆ ಮಾಡುತ್ತಿದ್ದು ಯುವ ಪಿಳಿಗೆಗೆ ಮಾದರಿಯಾಗುತ್ತಿದ್ದಾರೆ. ಹೊಸದಾಗಿ ಮತನೀಡುವ ಹಕ್ಕನ್ನು ಪಡೆದ ಯುವಕ ಯುವತಿಯರು ಖುಷಿಯಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು ಇಲ್ಲಿಯವರೆಗೆ 8.26% ಪ್ರತಿಶತ ಮತದಾನ ಪ್ರಕ್ರಿಯೆ ನಡೆದಿದೆ.